Advertisement

3 ದಿನದಲ್ಲಿ 25 ಸಭೆ,8 ವಿಶ್ವ ನಾಯಕರ ಭೇಟಿ; ನಾಳೆಯಿಂದ ಪ್ರಧಾನಿ ಯುರೋಪ್‌ ಪ್ರವಾಸ

09:11 AM May 01, 2022 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಯವರ ಈ ವರ್ಷದ ಮೊದಲ ವಿದೇಶ ಪ್ರವಾಸ ಮೇ 2ರಂದು ಆರಂಭವಾಗಲಿದ್ದು, ಯುರೋಪ್‌ನ ಮೂರು ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ವಿಶೇಷವೆಂದರೆ, ಒಟ್ಟು 65 ಗಂಟೆಗಳ ಅವಧಿಯಲ್ಲಿ ಅವರು 8 ವಿಶ್ವ ನಾಯಕರು, 50 ಕೈಗಾರಿಕೋದ್ಯಮಿಗಳು ಹಾಗೂ ಸಾವಿರಾರು ಅನಿವಾಸಿ ಭಾರತೀಯರೊಂದಿಗೆ ಒಟ್ಟಾರೆ 25 ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Advertisement

ಸೋಮವಾರದಿಂದ 3 ದಿನಗಳ ಕಾಲ ಮೋದಿ ಜರ್ಮನಿ, ಡೆನ್ಮಾರ್ಕ್‌ ಮತ್ತು ಪ್ಯಾರಿಸ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಸುಮಾರು 7 ದೇಶಗಳ 8 ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಸೋಮವಾರದಿಂದ ಪ್ರವಾಸ ಆರಂಭವಾಗಲಿದ್ದು, ಜರ್ಮನಿ ಮತ್ತು ಡೆನ್ಮಾರ್ಕ್‌ನಲ್ಲಿ ತಲಾ ಒಂದೊಂದು ರಾತ್ರಿ ಕಳೆಯಲಿದ್ದಾರೆ. ಮೇ 4ರಂದು ವಾಪಸ್‌ ಬರುವಾಗ ದಾರಿ ಮಧ್ಯೆ ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ. ಜರ್ಮನಿ ಪ್ರಧಾನಿ ಓಲಾಫ್ ಸ್ಕೋಲ್ಜ್, ಡೆನ್ಮಾರ್ಕ್‌ ಪ್ರಧಾನಿ ಮೀಟ್‌ ಫ್ರೆಡರಿಕ್‌ಸನ್‌ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next