Advertisement

ಸಿಎಂ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ

12:22 PM Mar 28, 2020 | Suhan S |

ಕಲಬುರಗಿ: ಕೋವಿಡ್‌ 19 ನಿಭಾಯಿಸಲು ಇಲ್ಲಿನ ಪ್ರಸಿದ್ಧ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಸಂಘದ ಶರಣಬಸವ ವಿವಿ ವತಿಯಿಂದ 25 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ ಸಲ್ಲಿಸಲು ನಿರ್ಧರಿಸಲಾಗಿದೆ.

Advertisement

ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾದ ಡಾ.ಶರಣಬಸವಪ್ಪ ಅಪ್ಪ ಅವರು ಮಾರಕವಾಗಿ ಕಾಡುತ್ತಿರುವ ಕೊವೀಡ್‌-19 ನಿಭಾಯಿಸಲು, ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ರಾಜ್ಯದ ಮುಖ್ಯಮಂತ್ರಿ (ಸಿಎಂ) ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ನೀಡಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಶರಣಬಸವಪ್ಪ ಅಪ್ಪ ಅವರು ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಒಂದು ದಿನದ ಸಂಬಳವನ್ನು ವಿದ್ಯಾವರ್ಧಕ ಸಂಘ ಪರಿಹಾರ ನಿಧಿಗೆ ನೀಡಲಿದೆ ಎಂದು ತಿಳಿಸಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವನವರುಶ್ರೀಮಂತ ಸಂಪ್ರದಾಯವನ್ನು ಅನುಸರಿಸುತ್ತಿರುವ ವಿವಿ ಬೋಧನಾ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾವರ್ಧಕ ಸಂಘ ಈ ಹಿಂದೆ ಸೈಸರ್ಗಿಕ ವಿಪತ್ತು ನಿಭಾಯಿಸಲು ಸರ್ಕಾರಕ್ಕೆ ಒಂದು ಕೋಟಿ ರೂ ಪರಿಹಾರದ ಚೆಕ್‌ನ್ನು ಅಕ್ಟೊಬರ್‌ 11ರಂದು ಬೆಂಗಳೂರಿನಲ್ಲಿ ಸಿಎಂಗೆ ಸಹಾಯ ಧನದ ಚೆಕ್‌ನ್ನು ನೀಡಲಾಗಿತ್ತು. ಈಗಲೂ ಕೋವಿಡ್‌ -19 ನಿಭಾಯಿಸಲು ಸಿಎಂ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡಲು ವಿಶ್ವವಿದ್ಯಾಲಯ ಮತ್ತು ವಿದ್ಯಾವರ್ಧಕ ಸಂಘ ಮುಂದೆ ಬಂದಿದೆ. 25 ಲಕ್ಷದ ಚೆಕ್‌ನ್ನು ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್‌ ಅವರಿಗೆ ಹಸ್ತಾಂತರಿಸಲಾಗುವುದೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next