Advertisement

25 ಕೆ.ಜಿ ಅಕ್ಕಿ,5 ಕೆ.ಜಿ ಟೊಮೇಟೋ; ಸಂಬಳ ಕೊಡುವವರೆಗೂ ದಿನಸಿ ಕಳಿಸಿ ಎಂದ ಅತಿಥಿ ಉಪನ್ಯಾಸಕರು

09:02 PM Aug 01, 2023 | Shreeram Nayak |

ಶಿವಮೊಗ್ಗ: ಸಂಬಳ ಇಲ್ಲದ ಅತಿಥಿ ಉಪನ್ಯಾಸಕರು ವಿಶೇಷ ರೀತಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೂರು ತಿಂಗಳಿನಿಅದ ಸಂಬಳ ಇಲ್ಲ, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸಂಬಳ ಕೊಡುವವರೆಗೂ ಪ್ರತಿ ತಿಂಗಳ ರೇಷನ್ ಕೊಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ ಮೂಲಕ ಶಿಕ್ಷಣ ಇಲಾಖೆ ಬೇಡಿಕೆ ಸಲ್ಲಿಸಿದ್ದಾರೆ.

Advertisement

ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ಇದನ್ನು ಖಂಡಿಸಿ ಇಲ್ಲಿನ ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ವಿಶೇಷ ರೀತಿ ಮನವಿ ಪತ್ರ ಬರೆದಿದ್ದಾರೆ.

“ಮಾನ್ಯ ಘನ ಸರಕಾರ ಕಳೆದ ಮೂರು ತಿಂಗಳಿನಿಂದ ಬಡ, ನಿರ್ಗತಿಕ ಅತಿಥಿ ಉಪನ್ಯಾಸಕರಿಗೆ ಬರಬೇಕಾದ ಗೌರವ ಧನವನ್ನು ತಡೆ ಹಿಡಿದಿದ್ದು ಇದರಿಂದ ನಮ್ಮನ್ನು ನಂಬಿಕೊಂಡಿರುವ ಕುಟುಂಬ ವರ್ಗದವರು ಉಪವಾಸದಿಂದ ನರಳುವಂತಾಗಿದೆ. ಸರಕಾರ ನಮ್ಮ ಗೌರವ ಧನವನ್ನು ಬಿಡುಗಡೆ ಮಾಡುವವರೆಗೂ ನಮಗೆ ಅಗತ್ಯವಿರುವ ಈ ಕೆಳಕಂಡ ದಿನಸಿ ವಸ್ತುಗಳನ್ನು ಪೂರೈಸಬೇಕೆಂದು ತಮ್ಮ ವಿನಂತಿ ವಿನಿಂತಿಸಿಕೊಳ್ಳುತ್ತಿದ್ದೇನೆ” ಎಂದು ಜತೆಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಹಾಕಿದ್ದಾರೆ.

25 ಕೆ.ಜಿಯ ಅಕ್ಕಿ, 5 ಕೆ.ಜಿ ಟೊಮೇಟೋ, 10 ಕೆ.ಜಿ ಈರುಳ್ಳಿ, 1 ಕೆ.ಜಿ. ಒಣಮೆಣಸು, 2 ಕೆ.ಜಿ. ಹಸಿ ಮೆಣಸು, 2 ಕೆ.ಜಿ ತೊಗರಿಬೇಳೆ, ಅರ್ಧ ಕೆ,ಜಿ ಬೆಳ್ಳುಳ್ಳಿ, ಕಾಲು ಕೆ.ಜಿ ಶುಂಠಿ, ಅಗತ್ಯವಿರುವಷ್ಟು ಹಾಲು, ಮೊಸರು, 1 ಎಲ್‌ಪಿಜಿ ಸಿಲಿಂಡರ್ ಕೊಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next