Advertisement

ಖಡ್ಗಮೃಗಗಳ 2,479 ಕೊಂಬುಗಳ ದಹನ

09:33 PM Sep 22, 2021 | Team Udayavani |

ಬೊಕಾಖಾತ್‌: ಅಸ್ಸಾಂ ಸರ್ಕಾರದ ವಶದಲ್ಲಿದ್ದ 2,479 ಖಡ್ಗಮೃಗ ಕೊಂಬುಗಳನ್ನು ಬುಧವಾರ ಸಾರ್ವಜನಿಕರ ಮುಂದೆ ದಹನ ಮಾಡಲಾಗಿದೆ. ಅಂತಾರಾಷ್ಟ್ರೀಯ ಖಡ್ಗಮೃಗಗಳ ದಿನಾಚರಣೆಯಂದೇ ಈ ದಹನ ಕ್ರಿಯೆ ಕೈಗೊಳ್ಳಲಾಗಿತ್ತು.

Advertisement

ಇದು ಜಗತ್ತಿನ ಅತ್ಯಂತ ದೊಡ್ಡ ಪ್ರಮಾಣದ ಸಂಗ್ರಹವಾಗಿತ್ತು ಎಂದು ಹೇಳಲಾಗುತ್ತಿದೆ.

ಖಡ್ಗಮೃಗಗಳ ಕೊಂಬುಗಳು ಔಷಧಿಗೆ ಬಳಕೆಯಾಗುತ್ತವೆ ಎಂಬ ಮೂಢನಂಬಿಕೆಯನ್ನು ನಿವಾರಣೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?

“ಖಡ್ಗಮೃಗಗಳ ಘನತೆಯೇ ಅದರ ಮುಖದ ಮೇಲಿರುವ ಕೊಂಬು. ಆ ಕೊಂಬಿಗೂ ಅಲ್ಲಿದ್ದರೇನೇ ಬೆಲೆ. ಆ ಮೃಗದಿಂದ ಬೇರ್ಪಟ್ಟ ಕೊಂಬಿಗೆ ಯಾವುದೇ ಬೆಲೆಯಿಲ್ಲ. ಕೊಂಬುಗಳನ್ನು ಸುಡುವ ಮೂಲಕ ಆ ಕೊಂಬುಗಳು ಯಾವುದಕ್ಕೂ ಉಪಯೋಗವಿಲ್ಲ ಎಂಬ ಸಂದೇಶವನ್ನು ಖಡ್ಗಮೃಗಗಳನ್ನು ಬೇಟೆಯಾಡುವರಿಗೆ ಹಾಗೂ ಅವುಗಳ ಕೊಂಬುಗಳನ್ನು ದಾಸ್ತಾನು ಮಾಡುವವರಿಗೆ ರವಾನಿಸಿದ್ದೇವೆ’ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next