Advertisement
ರಾಜ್ಯಾದ್ಯಂತ ದಾಖಲಾದ 4,074 ಎಫ್ಐಆರ್‌ಗಳನ್ನು ಆಧರಿಸಿಯೇ ಆರೋಪಿಗಳನ್ನು ಬಂಧಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, “ಈವರೆಗೆ 2,441 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಬಾಲ್ಯವಿವಾಹದ ವಿರುದ್ಧದ ಕ್ರಮ ಮುಂದುವರಿಯಲಿದೆ’ ಎಂದಿದ್ದಾರೆ. 2 ದಿನಗಳ ಹಿಂದೆ ಮಾತನಾಡಿದ್ದ ಸಿಎಂ, 2026ರ ವಿಧಾನಸಭೆ ಚುನಾವಣೆಯವರೆಗೂ ಈ ಅಭಿಯಾನ ಮುಂದುವರಿಯಲಿದೆ ಎಂದಿದ್ದರು.
ಬಾಲ್ಯವಿವಾಹದ ಕಾರಣಕ್ಕೆ ತನ್ನ ಮದುವೆ ರದ್ದಾಯ್ತು ಎಂದು ಬೇಸರಗೊಂಡ 17 ವರ್ಷದ ಹುಡುಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾನು ಪ್ರೀತಿಸಿದ ಹುಡುಗನನ್ನು ಮದುವೆ ಮಾಡಲು ಮನೆಯವರು ಒಪ್ಪಿದ್ದರು. ಆದರೆ, ಸರ್ಕಾರದ ಕ್ರಮದಿಂದಾಗಿ ಮದುವೆ ರದ್ದಾಗಿತ್ತು. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೂಂದು ಪ್ರಕರಣದಲ್ಲಿ, ಬಾಲ್ಯವಿವಾಹವಾಗಿ 2 ಮಕ್ಕಳನ್ನು ಹೊಂದಿರುವ ಮಹಿಳೆಯೊಬ್ಬರು, ಸರ್ಕಾರ ತನ್ನ ಅಪ್ಪನನ್ನು ಬಂಧಿಸಬಹುದು ಎಂಬ ಭೀತಿಯಿಂದ ನೇಣಿಗೆ ಶರಣಾಗಿದ್ದಾರೆ. ಮತ್ತೂಬ್ಬ ಮಹಿಳೆ, ಬಂಧಿತ ಪತಿ ಮತ್ತು ಅಪ್ಪನನ್ನು ಬಿಡುಗಡೆ ಮಾಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
Related Articles
Advertisement