Advertisement

ಕರಪತ್ರದಲ್ಲೇ ರೆಸ್ಯೂಮ್‌: ಸಿಕ್ಕೇ ಬಿಡ್ತು ಕೆಲಸ!

10:29 PM Jan 30, 2022 | Team Udayavani |

ಲಂಡನ್‌: ಕೆಲಸ ಹುಡುಕುವಾಗ ರೆಸ್ಯೂಮ್‌ ತಯಾರಿಸುವುದಕ್ಕಾಗಿ ಎಷ್ಟೊಂದು ಒದ್ದಾಡುತ್ತೇವೆ. ಆದರೆ ಬ್ರಿಟನ್‌ನ 24 ವರ್ಷದ ಯುವಕನೊಬ್ಬ ಅದಕ್ಕೆ ತಲೆಯನ್ನೇ ಕೆಡಿಸಿಕೊಳ್ಳದೆ, ಸ್ವಲ್ಪ ಚಾಣಾಕ್ಷತನ ತೋರಿಸಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

Advertisement

ಇತ್ತೀಚೆಗೆ ಮುದ್ರಣ ಸಂಸ್ಥೆಯೊಂದು ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುವವರಿಗಾಗಿ ಅರ್ಜಿ ಆಹ್ವಾನಿಸಿತ್ತು. ಅದಕ್ಕೆಂದು ಕರಪತ್ರಗಳನ್ನೂ ಹಂಚಲಾಗಿತ್ತು.

ಜೊನಾಥನ್‌ ಸ್ವಿಫ್ಟ್ ಹೆಸರಿನ ಯುವಕ ಅದೇ ಕರ ಪತ್ರದ ಇನ್ನೊಂದು ಭಾಗದಲ್ಲಿ ತನ್ನ ಲಿಂಕಡ್‌ಇನ್‌ ಪ್ರೊಫೈಲ್‌ ಮುದ್ರಿಸಿದ್ದಾನೆ.

ನಂತರ ಕಂಪನಿಯ ಪಾರ್ಕಿಂಗ್‌ನಲ್ಲಿದ್ದ ಎಲ್ಲ ಕಾರುಗಳ ಮೇಲೆ ಆ ಕರಪತ್ರಗಳನ್ನಿಟ್ಟು ಬಂದಿದ್ದಾನೆ. ಇದನ್ನು ನೋಡಿದ ಎಚ್‌ಆರ್‌ ಅವನ ಜಾಣತನ ಮೆಚ್ಚಿ ಕೆಲಸ ಕೊಟ್ಟಿದ್ದಾರೆ. ಅಂದ ಹಾಗೆ ಆತನಿಗೆ ಸಿಕ್ಕ ಹುದ್ದೆಗಾಗಿ ಅದಾಗಲೇ 140 ಜನರು ಅರ್ಜಿ ಸಲ್ಲಿಸಿದ್ದರಂತೆ!

ಇದನ್ನೂ ಓದಿ:ಮತ್ತೆ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಪೆಗಾಸಸ್‌ ಗೂಢಚರ್ಯೆ ವಿವಾದ

Advertisement
Advertisement

Udayavani is now on Telegram. Click here to join our channel and stay updated with the latest news.

Next