ನವದೆಹಲಿ : ದೇಶದಲ್ಲಿ ನೇರ ತೆರಿಗೆ ಸಂಗ್ರಹ 14.71 ಲಕ್ಷ ಕೋಟಿ ರೂ. ಆಗಿದೆ. ಇದು ಜ.10ರ ವರೆಗೆ ಮಾಹಿತಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಟ್ಟಾರೆಯಾಗಿ ಹೇಳುವುದಿದ್ದರೆ ಶೇ.24.58 ಏರಿಕೆಯಾಗಿದೆ.
Advertisement
ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಆದ ಬೆಳವಣಿಗೆಯಿಂದಾಗಿ ಒಟ್ಟು ನೇರ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಿದ್ದು, ಮರುಪಾವತಿಗಳನ್ನು ಸರಿಹೊಂದಿಸಿದ ಬಳಿಕ ನಿವ್ವಳ ನೇರ ತೆರಿಗೆಯ ಸಂಗ್ರಹವು 12.31 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದವರ್ಷಕ್ಕೆ ಹೋಲಿಸಿದರೆ ಇದು ಶೇ.19.55ರಷ್ಟು ಹೆಚ್ಚಳವಾಗಿದೆ. ಇನ್ನು ಆಯವ್ಯಯದಲ್ಲಿ ನೇರ ತೆರಿಗೆ ಸಂಗ್ರಹವನ್ನು 14.20 ಲಕ್ಷ ಕೋಟಿಗಳೆಂದು ಅಂದಾಜಿಸಲಾಗಿತ್ತು.