Advertisement
ಗೋಕಾಕನ ಅಲೆಮಾರಿ ಸಮುದಾಯದ ಸಿಆರ್‌ಪಿಎಫ್ ಯೋಧ ಉಮೇಶ ಮಹಾನಿಂಗ ಹೆಳವರ(25) ಹುತಾತ್ಮ ಯೋಧ. ಮಣಿಪುರದ ಸಿಆರ್‌ಪಿಎಫ್ 143 ಬಟಾಲಿನ್‌ನಲ್ಲಿ 6 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಉಮೇಶ ಶನಿವಾರವಷ್ಟೇ ತವರಿಗೆ ಆಗಮಿಸುವ ಸಿದ್ಧತೆ ನಡೆಸಿದ್ದ. ಆದರೆ ವಿಧಿಯಾಟದಿಂದಾಗಿ ಹುತಾತ್ಮನಾಗಿ ಮರಳುತ್ತಿರುವುದು ದುರ್ದೈವವೇ ಸರಿ.
Related Articles
ಸರ್ಕಾರಿ ಜಾಗದಲ್ಲಿಯೇ ಅಂತ್ಯಕ್ರಿಯೆಗೆ ಆಗ್ರಹ: ಯೋಧನ ಅಂತ್ಯಕ್ರಿಯೆ ಸರ್ಕಾರಿ ಜಾಗದಲ್ಲಿಯೇ ಮಾಡಬೇಕೆಂದು ಕುಟುಂಬಸ್ಥರು ಹಾಗೂ ನಗರದ ಹಲವು ಸಂಘಟನೆಗಳು ಆಗ್ರಹಿಸಿವೆ. ಆದರೆ ಇದನ್ನು ನಿರಾಕರಿಸಿರುವ ತಾಲೂಕಾಡಳಿತ, ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಆಗುವುದಿಲ್ಲ. ಸದ್ಯ ಖಾಸಗಿ ಜಾಗದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
Advertisement
ನಂತರ ತಾವು ಹೇಳಿದ ಜಾಗದಲ್ಲಿ ಯೋಧನ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸುವ ಕೆಲಸ ಮಾಡಲಾಗುವುದು. ಇದಕ್ಕೆ ಎಲ್ಲರೂ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ತಹಶೀಲ್ದಾರ್ ಮಾತಿಗೆ ಒಪ್ಪದ ಸಂಘಟನೆಗಳು ರಾತ್ರಿವರೆಗೂ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದವು. ಆದರೆ ಕೆಲವು ಕಿಡಿಗೇಡಿಗಳು ಮಿನಿವಿಧಾನಸೌಧ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿ ಗಾಜು ಒಡೆದಿದ್ದು, ಜತೆಗೆ ಓರ್ವ ಪತ್ರಕರ್ತನ ಕಾಲಿಗೂ ಕಲ್ಲೇಟು ಬಿದ್ದಿದೆ.
ಸದಾ ಹಸನ್ಮುಖೀಯಾಗಿದ್ದ ನನ್ನ ಗೆಳೆಯ ಎಲ್ಲರೊಂದಿಗೂ ಬೆರೆಯುತ್ತಿದ್ದ. ಆತನ ಸಾವಿನ ಸುದ್ದಿ ನಮಗೆ ನಂಬಲಾಗುತ್ತಿಲ್ಲ, ಕಳೆದ ತಿಂಗಳು ರಜೆ ಮೇಲೆ ಬಂದಿದ್ದ. ಅವನ ಜನ್ಮದಿನವನ್ನು ಗೆಳೆಯರೆಲ್ಲರೂ ಸೇರಿ ಆಚರಿಸಿ ಸಂಭ್ರಮಿಸಿದ್ದೇವು. ಗೆಳೆಯ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದು ಆತ ಅಜರಾಮವಾಗಲಿ ಎನ್ನುತ್ತಾರೆ ಯೋಧ ಉಮೇಶನ ಸ್ನೇಹಿತ ಸಿದ್ಧಾರೂಢ ಖಾನಪ್ಪನವರ.
– ಭೈರೋಬಾ ಕಾಂಬಳೆ/ಮಲ್ಲಪ್ಪ ದಾಸಪ್ಪಗೋಳ