Advertisement

ಕೇರಳದಲ್ಲಿ 24 ಮಂದಿಗೆ ಕೋವಿಡ್: ಕಾಸರಗೋಡಿನ ಬಾಲಕನಿಗೆ ಸೋಂಕು

07:36 AM May 21, 2020 | mahesh |

ಕಾಸರಗೋಡು: ಕೊಲ್ಲಿ ರಾಷ್ಟ್ರದಿಂದ ಜಿಲ್ಲೆಯ ತ್ರಿಕ್ಕರಿಪುರಕ್ಕೆ ಆಗಮಿಸಿದ 15 ವರ್ಷದ ಬಾಲಕ ಸೇರಿದಂತೆ ಕೇರಳ ರಾಜ್ಯದಲ್ಲಿ ಬುಧವಾರ 24 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಇದೇ ವೇಳೆ ಐವರು ರೋಗ ಮುಕ್ತರಾಗಿದ್ದಾರೆ. ಪಾಲ್ಗಾಟ್‌ -7, ಮಲಪ್ಪುರಂ- 4, ಕಣ್ಣೂರು-3, ತಿರುವನಂತ ಪುರ-2, ಪತ್ತನಂತಿಟ್ಟ, ತೃಶ್ಶೂರ್‌ ತಲಾ 2, ಆಲಪ್ಪುಳ, ಎರ್ನಾಕುಳಂ, ಕೋಯಿಕ್ಕೋಡ್‌ ಮತ್ತು ಕಾಸರಗೋಡು ಜಿಲ್ಲೆಗಳ ತಲಾ ಒಬ್ಬರನ್ನು ಸೋಂಕು ಬಾಧಿಸಿದೆ.

Advertisement

ಬಾಧಿತರಲ್ಲಿ 12 ವಿದೇಶ ದಿಂದ ಬಂದವರು. ಮಹಾರಾಷ್ಟ್ರ ದಿಂದ ಬಂದ 8 ಮಂದಿ, ತಮಿಳುನಾಡಿನಿಂದ ಬಂದ 3 ಮಂದಿಗೆ ರೋಗ ದೃಢೀಕರಿಸಲಾಗಿದೆ. ಕಣ್ಣೂರಿನಲ್ಲಿ ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next