Advertisement
ದೆಹಲಿಯಲ್ಲಿ ಕೋವಿಡ್ ಬಿಕ್ಕಟ್ಟಿನ ಕಾರಣದಿಂದಾಗಿ ಒಟ್ಟು 2,395 ಕಂಪನಿಗಳು, ಉತ್ತರ ಪ್ರದೇಶದಲ್ಲಿ 1,936 ಕಂಪನಿಗಳು. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ, ಏಪ್ರಿಲ್ 2020 ಮತ್ತು ಫೆಬ್ರವರಿ 2021 ರ ನಡುವೆ 1,322 ಮತ್ತು 1,279 ಕಂಪನಿಗಳು ಕೋವಿಡ್ ಕಾರಣದಿಂದ ಸ್ಥಗಿತಗೊಂಡಿವೆ.
Related Articles
Advertisement
ಭಾರತದಲ್ಲಿ ಲಾಕ್‌ಡೌನ್ ಘೋಷಣೆಯ ನಂತರ, ಪಡಿತರ, ಔಷಧಿಗಳು ಮತ್ತು ಇತರ ಅಗತ್ಯ ಕ್ಷೇತ್ರಗಳನ್ನು ಹೊರತಾಗಿ ಉಳಿದೆಲ್ಲಾ ಕ್ಷೇತ್ರಗಳನ್ನು ಬಂದ್ ಮಾಡಲು ಸೂಚಿಸಲಾಯಿತು. ಇದರಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಬಲವಾದ ಪಟ್ಟು ಬಿದ್ದಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ. ಈ ಕೋವಿಡ್ ಸಾಂಕ್ರಾಮಿಕ ಸೋಂಕಿನ ಪ್ರಭಾವದಿಂದ ದೆಹಲಿಯಲ್ಲಿ 2,395 ಕಂಪೆನಿಗಳು ಮುಚ್ಚಲ್ಪಟ್ಟಿವೆ ಎಂದು ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಮಾಹಿತಿ ನೀಡಿದೆ.
ದೇಶದ ಒಟ್ಟು 10,113 ಕಂಪನಿಗಳು ಈ ವರ್ಷದ ಫೆಬ್ರವರಿ ವೇಳೆಗೆ ಸ್ವಯಂಪ್ರೇರಣೆಯಿಂದ ತಮ್ಮ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿದೆ. ಕಂಪೆನಿ ಕಾಯ್ದೆ 2013 ರ ಈ ವಿಭಾಗವು ಒಂದು ಕಂಪನಿಯು ತನ್ನ ವ್ಯವಹಾರವನ್ನು ಸ್ವಯಂಪ್ರೇರಣೆಯಿಂದ ಮುಚ್ಚಲು ಬಯಸಿದರೆ, ಅದರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಕಂಪೆನಿ ಕಾಯ್ದೆ 2013 ರ ಸೆಕ್ಷನ್ 248 (2) ರ ಅಡಿಯಲ್ಲಿ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದೆ.
ಓದಿ : 103 ವರ್ಷದ ಜಿ. ಕಾಮೇಶ್ವರಿ ಕೋವಿಡ್ ಲಸಿಕೆ ಪಡೆದ ದೇಶದ ಅತ್ಯಂತ ಹಿರಿಯ ಮಹಿಳೆ
ದೆಹಲಿಯಲ್ಲಿ 2394, ಉತ್ತರ ಪ್ರದೇಶದಲ್ಲಿ 1936, ತಮಿಳು ನಾಡಿನಲ್ಲಿ 1322, ಮಹಾರಾಷ್ಟ್ರದಲ್ಲಿ 1279, ಕರ್ನಾಟಕದಲ್ಲಿ 836, ಚಂಡಿಗಡದಲ್ಲಿ 501, ರಾಜಸ್ಥಾನದಲ್ಲಿ 479, ತೆಲಂಗಾಣದಲ್ಲಿ 404, ಕೇರಳದಲ್ಲಿ 307, ಜಾರ್ಖಾಂಡ್ ನಲ್ಲಿ 137, ಮಧ್ಯ ಪ್ರದೇಶದಲ್ಲಿ 111, ಬಿಹಾರ್ ನಲ್ಲಿ 104, ಮೇಘಾಲಯದಲ್ಲಿ 88, ಒಡಿಸಾದಲ್ಲಿ 78, ಛತ್ತಿಸಗಡದಲ್ಲಿ 47, ಗೋವಾದಲ್ಲಿ 36, ಪುದುಚೆರಿಯಲ್ಲಿ 31, ಗುಜರಾತ್ ನಲ್ಲಿ 17, ಪಶ್ಚಿಮ ಬಂಗಾಳದಲ್ಲಿ 4, ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ 2 ಕಂಪೆನಿಗಳು ಸೇರಿ ದೇಶದಲ್ಲಿ ಒಟ್ಟು 10,113 ಕಂಪೆನಿಗಳು ಸ್ವಯಂಪ್ರೇರಣೆಯಿಂದ ತಮ್ಮ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಓದಿ : ರಾಬರ್ಟ್ ಹಬ್ಬಕ್ಕೆ ಒಂದೇ ದಿನ ಬಾಕಿ: ಅಭಿಮಾನಿಗಳ ಜೊತೆಗೆ ಇಡೀ ಚಿತ್ರರಂಗಕ್ಕೂ ನಿರೀಕ್ಷೆ..!