Advertisement

ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು

03:17 PM May 23, 2022 | Team Udayavani |

ಚೆನ್ನೈ: ಪಾರ್ಟಿಯೊಂದರಲ್ಲಿ ಮಾದಕ ವಸ್ತು ಸೇವಿಸಿದ 23 ವರ್ಷದ ಯುವಕನೋರ್ವ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ,

Advertisement

ಶನಿವಾರ ರೇವ್ ಪಾರ್ಟಿಯಲ್ಲಿ ಯುವಕ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಾಗಿತ್ತು. ಆದರೆ ಮರುದಿನ ಆತ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾದಕ ವಸ್ತು ಸೇವನೆಯಿಂದ ಮೃತಪಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವ್ಯಕ್ತಿಯನ್ನು ಚೆನ್ನೈನ ಮಡಿಪಕ್ಕಂನ ಎಸ್.ಪ್ರವೀಣ್ ಎಂಬ ಟೆಕ್ಕಿ ಎಂದು ಗುರುತಿಸಲಾಗಿದೆ.

ಚೆನ್ನೈನ ಅಣ್ಣಾ ನಗರದ ವಿಆರ್ ಮಾಲ್ ನಲ್ಲಿ ಈ ರೇವ್ ಪಾರ್ಟಿ ನಡೆಸಲಾಗಿತ್ತು. ಗ್ರೇಟ್ ಇಂಡಿಯನ್ ಗ್ಯಾದರಿಂಗ್ ಎಂಬ ಕಂಪನಿ ಈ ಪಾರ್ಟಿ ಆಯೋಜಿಸಿತ್ತು.

ಇದನ್ನೂ ಓದಿ:ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

Advertisement

ಪಾರ್ಟಿಯಲ್ಲಿ ಡ್ರಗ್ ನಶೆ ಮಿತಿಮೀರಿ ಪ್ರವೀಣ್ ಕುಸಿದು ಬಿದ್ದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅನುಮತಿಯಿಲ್ಲದೆ ಮದ್ಯ ಹಂಚಿಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಅಲ್ಲದೆ ಹೆಚ್ಚುವರಿಯಾಗಿ, ಸುಮಾರು 90 ಅಪ್ರಾಪ್ತ ವಯಸ್ಕರಿಗೆ ಮದ್ಯ ಕುಡಿಸಲಾಗಿತ್ತು.

ಪಾರ್ಟಿ ಆಯೋಜಕರು ಬೇರೆ ಬಾರ್ ನ ಲೈಸನ್ಸ್ ನ್ನು ಈ ಮಾಲ್ ನಲ್ಲಿ ಉಪಯೋಗಿಸಿ ಮದ್ಯ ಹಂಚಿಕೆ ಮಾಡಿದ್ದರು. ಒಟ್ಟು 884 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next