Advertisement

23 ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಸಿದ್ಧತೆ

05:02 PM Sep 15, 2021 | Team Udayavani |

ರಾಜ್ಯದ ವಿವಿಧ ನಗರಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಧಾರ್ಮಿಕ ಕೇಂದ್ರಗಳು, ದೇವಾಲಯಗಳನ್ನು ಸುಪ್ರೀಂ ಕೋರ್ಟ್‌ ಆದೇಶದ ಹಿನ್ನಲೆ, ಜಿಲ್ಲಾಡಳಿತ ಗುರುತಿಸಿ ತೆ‌ರವು ಕಾರ್ಯಾಚರಣೆಗೆ ಮುಂದಾಗಿದೆ. ಆದರೆ, ಶೈಕ್ಷಣಿಕ ನಗರ ತುಮಕೂರು ನಗರದಲ್ಲಿ 23 ಅನಧಿಕೃತ ಧಾರ್ಮಿಕ ಕೇಂದ್ರ ಗಳಿದ್ದರೂ ದೇವಾಲಯಗಳ ತೆರವಿಗೆ ದರ್ಗಾಗಳು ಅಡ್ಡಿಯಾಗಿದ್ದು, ರಾಜಕೀಯ ಮೇಲಾಟಗಳ ನಡುವೆ ಮಂದಿರ, ದರ್ಗಾ ತೆರವಿಗೆ ನೂರೆಂಟು ವಿಘ್ನಗಳು!

Advertisement

ತುಮಕೂರು: ರಾಜಧಾನಿ ಬೆಂಗಳೂರಿಗೆ ಹೆಬ್ಟಾಗಿಲಾಗಿ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿರುವ ಶೈಕ್ಷಣಿಕ ನಗರ ತುಮಕೂರು ಸ್ಮಾರ್ಟ್‌ ಸಿಟಿ ಯಾಗಿ ಅಭಿವೃದ್ಧಿಯಾಗುತ್ತಿದೆ. ಆದರೆ, ಈ ನಗರದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಇರುವ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳ ಮೀನಾಮೇಷದಿಂದ ದಿತ್ಯವೂ ನೂರಾರು ಅಪಘಾತಗಳು ನಡೆಯುತ್ತಿದ್ದು, ಅನಧಿಕೃತ ದೇವಾಲಯ ಗಳ ತೆರವಿಗೆ ಮೊದಲು ರಸ್ತೆಗೆ ಹೊಂದಿಕೊಂಡಂತೆ ಇರುವ ದರ್ಗಾಗಳ ತೆರವಿಗೆ ಹಿಂದೂ ಸಂಘಟನೆಯ ಮುಖಂಡರು ಪಟ್ಟು ಹಿಡಿದಿರುವುದು ದೇವಾಲಯ ತೆರವಿಗೆ ಹಿನ್ನಡೆಯಾಗಿದೆ.

ಧಾರ್ಮಿಕ ಹಾಗೂ ಶೈಕ್ಷಣಿಕ ನಗರ ತುಮಕೂರಿನಲ್ಲಿ 23 ಧಾರ್ಮಿಕ ಕೇಂದ್ರಗಳು ಅನಧಿಕೃತವಾಗಿ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ನಿರ್ಮಾಣ ಮಾಡಿರುವ ಧಾರ್ಮಿಕ ಕೇಂದ್ರಗಳು ಎಂದು ತುಮಕೂರು ಮಹಾನಗರ ಪಾಲಿಕೆಯಿಂದ ಗುರುತಿಸಲಾಗಿದೆ. ಸರ್ಕಾರಿ ಜಾಗ, ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳು ಇದ್ದರೆ ಅವುಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ 2013ರಲ್ಲಿಯೇ ತೀರ್ಪು
ನೀಡಿತ್ತು, ಅದರ ಹಿನ್ನಲೆ, ಹೈಕೋರ್ಟ್‌ ಕೂಡಾ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ ನೀಡಿತ್ತು. ಆದರೆ, ಅಂದಿನಿಂದ ಇಂದಿನ ವರೆಗೂ ತುಮಕೂರು ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಧಾರ್ಮಿಕ ಕೇಂದ್ರಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಿಲ್ಲ.

ನಗರದಲ್ಲಿ 23 ಅನಧಿಕೃತ ಧಾರ್ಮಿಕ ಕೇಂದ್ರಗಳು:
ಧಾರ್ಮಿಕವಾಗಿ ಹೆಸರು ಪಡೆದಿರುವ ತುಮಕೂರು ನಗರದ ಪ್ರಮುಖ ರಸ್ತೆಗಲ್ಲಿ, ಉದ್ಯಾನ ವನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ವಾಗಿರುವ ಎಲ್ಲಾ ಧರ್ಮಗಳ 23 ಧಾರ್ಮಿಕ ಕೇಂದ್ರಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಗುರುತಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಅನಧಿಕೃತ ಧಾರ್ಮಿಕ ಕೇಂದ್ರ ತೆರವಾಗಿಲ್ಲ.

ನಾಗರಕಟ್ಟೆ, ದರ್ಗಾ ತೆರವಾದರೆ ಉಳಿದವು ಸುಲಭ: ತುಮಕೂರಿನ ಹೃದಯ ಭಾಗ ಟೌನ್‌ ಹಾಲ್‌ನಲ್ಲಿ ಇರುವ ನಾಗರಕಟ್ಟೆ ಮತ್ತುದರ್ಗಾಗಳೇ ನಗರದ ವಿವಿಧ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ತೊಂದರೆ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 206ರ ಬಿ.ಎಚ್‌.ರಸ್ತೆಯಲ್ಲಿ ಒತ್ತು ವರಿ ಮಾಡಿ ನಿರ್ಮಾಣ ಮಾಡಿರುವ ನಾಗರಕಟ್ಟೆ ಮತ್ತು ದರ್ಗಾಗಳಿಂದ ಮುಖ್ಯೆ ರಸ್ತೆ ಅತ್ಯಂತ ಕಿರಿದಾಗಿದೆ. ಇಲ್ಲಿ ಅಧಿಕ ವಾಹನಗಳು ಸಂಚಾರ ಮಾಡು ವುದರಿಂದ ಇಲ್ಲಿಯವರೆಗೆ ನೂರಾರು ಅಪಘಾತಗಳು ನಡೆದಿವೆ. ಹಲವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Advertisement

ಇದನ್ನೂ ಓದಿ:ನಮ್ಮ ಹೆಣ್ಣು ಮಕ್ಕಳಿಗೆ ಸುರಕ್ಷತೆ ಯಾವಾಗ?ಅತ್ಯಾಚಾರ ಪ್ರಕರಣ ವಿರುದ್ಧ ಮಹೇಶ್ ಬಾಬು ಆಕ್ರೋಶ

ಕೆಲವರು ಶಾಶ್ವತ ಅಂಗಾಗ ಹೀನರಾಗಿದ್ದಾರೆ. ಇಲ್ಲಿ ಈ ಎರಡು ಧಾರ್ಮಿಕ ಕೇಂದ್ರಗಳಿಂದ ರಸ್ತೆ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಎರಡೂ ಧರ್ಮಿಯರಿಗೂ ಗೊತ್ತಿದೆ. ಆದರೆ, ಎರಡೂಧರ್ಮಿಯರೂ ತಮ್ಮ ತಮ್ಮ ದೇವಾಲಯ, ದರ್ಗಾ ತೆರವುಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಇರುವ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲು ಈ ಹಿಂದೆ ಸಚಿವರಾಗಿದ್ದ ಸೊಗಡು ಎಸ್‌.ಶಿವಣ್ಣ ಅವರ ಅವಧಿಯಲ್ಲಿ ಅಂದು ಜಿಲ್ಲೆಯಲ್ಲಿ ಅಧಿಕಾರಿಯಾಗಿದ್ದ ಮಣಿವಣ್ಣನ್‌ ಧಿಟ್ಟ ನಿರ್ಧಾರ ತೆಗೆದುಕೊಂಡು ಈ ಎರಡೂ
ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲು ನಿರ್ಧಾರ ಕೈಗೊಂಡಿದ್ದರು. ಆದರೆ, ಅಂದು ರಾಜಕೀಯ ಮೇಲಾಟದಿಂದ ಎರಡೂ ಧಾರ್ಮಿಕ ಕೇಂದ್ರಗಳು ಹಾಗೆಯೇ ಉಳಿದುಕೊಂಡವು.

ದರ್ಗಾ ತೆರವು ಸಾಧ್ಯವಿಲ್ಲ: ನಂತರ ಬಂದಿರುವ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೂ ನಗರದಲ್ಲಿ ಇರುವ ಅನಧಿಕೃತಧಾರ್ಮಿಕ ಕೇಂದ್ರಗಳ ತೆರವು ಮಾಡುವ ವಿಷಯವಾಗಿ ಸಭೆಗಳು ನಡೆಯುತ್ತಲೇ ಇದೆ. ಆದರೆ, ಅದು ಕಾರ್ಯಪ್ರವೃತ್ತವಾಗಿಲ್ಲ. ಕಾರಣ ಹಿಂದೂ ಸಮಾಜದ ಮುಖಂಡರು ಹೇಳುವುದು ಮೊದಲು ದರ್ಗಾಗಳನ್ನು ತೆರವು ಮಾಡಿ ನಂತರ ದೇವಾಲಯಗಳನ್ನು ನಾವೇ ತೆರವು ಮಾಡುತ್ತೇವೆ ಎಂದು. ಆದರೆ, ಮುಸ್ಲಿಂ ಮುಖಂಡರ ವಾದವೇ ಬೇರೆ ನಾವು ಯಾವುದೇ ದರ್ಗಾ ಅನಧಿಕೃತವಾಗಿ ಕಟ್ಟಿಲ್ಲ. ಪುರಾತನ ಕಾಲದಿಂದ ದರ್ಗಾ ಇದೆ. ತೆರವು ಸಾಧ್ಯವಿಲ್ಲ ಎನ್ನುವುದು. ಈ ವಾದ-ವಿವಾದಗಳ ನಡುವೆ ರಸ್ತೆಗಳಲ್ಲಿ ಇರುವ ದೇವಾಲಯ, ದರ್ಗಾಗಳಿಂದ ವಾಹನ ಸವಾರರು ಮಾತ್ರ ಪರದಾಡುತ್ತಿದ್ದಾರೆ. ಜಲ್ಲಾಡಳಿತದಿಂದ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ

ಬಟವಾಡಿಯಿಂದ ರಿಂಗ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅನಧಿಕೃತ ದರ್ಗಾ ಆಗಿದೆ. ಅದಕ್ಕೆ ಪಾಲಿಕೆ ನೋಟಿಸ್‌ ನೀಡಿಲ್ಲ. ಹಾಗೆಯೇ ಟೌನ್‌ ಹಾಲ್‌ ಬಳಿ ಇರುವ ದರ್ಗಾ ತೆರವು ಮಾಡಲಿ. ತಕ್ಷಣದಲ್ಲಿ ನಾವು ದೇವಾಲ ಯ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳು ತ್ತೇವೆ. ಎರಡೂ ಧಾರ್ಮಿಕ ಕೇಂದ್ರಗಳಿಂದ ಸಂಚಾರಕ್ಕೆ ತೊಂದರೆ ಎಂದು ಎಲ್ಲರಿಗೂ ಗೊತ್ತು. ಆದರೆ, ಏನೇ ಆದರೂ ಸರಿ ಸಮವಾಗಿ ಆಗಬೇಕು.
– ಬಸವರಾಜ್‌, ಪ್ರಾಂತ ಕಾರ್ಯದರ್ಶಿ
ಹಿಂದೂ ಮಹಾಸಭಾ

ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನಲ್ಲಿಯೂ ಆದೇಶ ಆಗಿದೆ. ನಾನು ಸ್ಥಳೀಯ ಆಡಳಿತಕ್ಕೆ ಅನಧಿಕೃತ ಧಾರ್ಮಿಕ ಕಟ್ಟಡ ತೆರವಿಗೆ ನಿಯಮಾನುಸಾರ ಅನುಸರಿಸಿ ತೆರವು ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಅದು ಪ್ರಗತಿಯಲ್ಲಿದೆ.
-ವೈ.ಎಸ್‌. ಪಾಟೀಲ್‌, ಜಿಲ್ಲಾಧಿಕಾರಿ

ಧಾರ್ಮಿಕ ಕೇಂದ್ರಗಳ ತೆರವು ವಿಚಾರವಾಗಿ ಹೈಕೋರ್ಟ್‌ ಸುಪ್ರೀಂ ಕೋರ್ಟ್‌ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಸೂಚನೆ ನೀಡಿದೆ. ಎಲ್ಲಿ ರಸ್ತೆಗಳಲ್ಲಿ ಧಾರ್ಮಿಕ ಕೇಂದ್ರ ಇವೆ ಎನ್ನುವುದನ್ನು ಗುರುತಿಸಲಿ. ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ನೋಡೋಣ.
– ಡಾ. ಎಸ್‌. ರಫೀಕ್‌ ಅಹಮದ್‌, ಮಾಜಿ ಶಾಸಕ

ನಗರದಲ್ಲಿ ಅನಧಿಕೃತವಾಗಿ ಇರುವ ಧಾರ್ಮಿಕ ಕಟ್ಟಡ ಗುರುತಿಸಿ ತೆರವು ಮಾಡಲು ಸೂಚನೆ ಹಿನ್ನಲೆ, ತುಮಕೂರು ನಗರದಲ್ಲಿ ಒಟ್ಟು 23 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿದ್ದೇವೆ. ಅವುಗಳ ತೆರವಿಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸ್ಥಳೀಯವಾಗಿ ತೆರವು ಮಾಡಲು ಅಲ್ಲಿಯ ಸಮಿತಿಯವರೊಂದಿಗೆ ಮಾತನಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್‌ ಆದೇಶದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ.
– ರೇಣುಕಾ, ಮಹಾನಗರ ಪಾಲಿಕೆ ಆಯುಕ್ತೆ

ತುಮಕೂರು ನಗರದಲ್ಲಿ ಅನಧಿಕೃತವಾಗಿ ಇರುವ ದರ್ಗಾ ಮತ್ತು ದೇವಾಲಯ ತೆರವು ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಮೊದಲು ದರ್ಗಾಗಳನ್ನು ತೆರವು ಮಾಡಲಿ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬೇಡ. ಅವರು ಮೊದಲು ದರ್ಗಾ ತೆರವು ಮಾಡಲಿ. ತಕ್ಷಣ ನಾವೇ ದೇವಸ್ಥಾನ ತೆರವು ಮಾಡುತ್ತೇವೆ.
-ಸೊಗಡು ಎಸ್‌. ಶಿವಣ್ಣ, ಮಾಜಿ ಸಚಿವ

– ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next