ಫಿಲಿಪೈನ್ಸ್: ಫಿಲಿಪೈನ್ಸ್ ರಾಜಧಾನಿ ಬಳಿಯ ಸರೋವರದಲ್ಲಿ 40 ಪ್ರಯಾಣಿಕರನ್ನು ಹೊತ್ತ ದೋಣಿಯೊಂದು ಮುಳುಗಿದ ಪರಿಣಾಮ 23 ಮಂದಿ ಮೃತಪಟ್ಟು ಹಲವು ಮಂದಿ ನಾಪತ್ತೆಯಾಗಿದ್ದಾರೆ.
ಪ್ರಿನ್ಸೆಸ್ ಅಯಾ ಬಿನಾಂಗೊನಾನ್‌ನ ಬರಾಂಗೇ ಕಲಿನಾವನ್‌ನಿಂದ ಸುಮಾರು 50 ಗಜಗಳಷ್ಟು ದೂರದಲ್ಲಿ ದೋಣಿ ಮಗುಚಿ ಬಿದ್ದಿದೆ ಎಂದು ಫಿಲಿಪೈನ್ ಕೋಸ್ಟ್ ಗಾರ್ಡ್ (PCG) ತಿಳಿಸಿದೆ.
ಈ ಘಟನೆಯು ಶುಕ್ರವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸಂಭವಿಸಿದ್ದು, ಬಲವಾದ ಗಾಳಿ ಬೀಸಿದ್ದರಿಂದ ಯಾಂತ್ರಿಕೃತ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಗಾಬರಿಗೊಂಡು ಒಂದು ಕಡೆ ಸೇರಿದ ಪರಿಣಾಮ ದೋಣಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಸುಮಾರು 23 ಮಂದಿ ಪ್ರಯಾಣಿಕರು ಜೀವ ಕಳೆದುಕೊಂಡಿದ್ದು ಇನ್ನೂ ಕೆಲವರು ಈಜಿ ದಡ ಸೇರಿದ್ದಾರೆ ಅಲ್ಲದೆ ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದು ಅವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ವಿವರ ಹಾಗೂ ಗಾಯಗೊಂಡವರ ವಿವರ ಇನ್ನೂ ಲಭ್ಯವಾಗಿಲ್ಲ ಎಂದು ಫಿಲಿಪೈನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ: Udupi Video Incident: ಬಿಜೆಪಿಯಿಂದ ಬೃಹತ್ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ