Advertisement
ಚಿತ್ರಗಳ ಸಂಖ್ಯೆ ಮುಖ್ಯವೋ ಗುಣಮಟ್ಟ ಮುಖ್ಯವೋ ಎಂಬ ಪ್ರಶ್ನೆ ಪ್ರತಿ ಬಾರಿಯೂ ಬರುತ್ತದೆ. ಸಂಖ್ಯೆಗಿಂತ ಗುಣಮಟ್ಟ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ, ಬಿಡುಗಡೆಯಾಗುತ್ತಿರುವ ಸಾಲು ಸಾಲು ಸಿನಿಮಾಗಳನ್ನು ತಡೆಯುವವರು ಯಾರು ಎಂಬ ಪ್ರಶ್ನೆಯೂ ಬರುತ್ತದೆ. ವಾರಕ್ಕೆ ಇಷ್ಟೇ ಸಿನಿಮಾ ಬಿಡುಗಡೆಯಾಗಬೇಕು ಎಂಬ ಯಾವ ನಿಯಮವೂ ಇಲ್ಲಿಲ್ಲ. ಅದೇ ಕಾರಣದಿಂದ ಚಿತ್ರ ಬಿಡುಗಡೆಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.
Related Articles
Advertisement
ಡಿಸೆಂಬರ್ ತಿಂಗಳು ಸ್ಟಾರ್ಗಳಿಗೆ ಮೀಸಲು
ಕಳೆದ 11 ತಿಂಗಳಿನಲ್ಲಿ ಬಿಡುಗಡೆಯಾದ ವೇಗದಲ್ಲಿ ಡಿಸೆಂಬರ್ನಲ್ಲಿ ಸಿನಿಮಾಗಳು ಬಿಡುಗಡೆಯಾಗುವು ದಿಲ್ಲ. ಅದಕ್ಕೆ ಕಾರಣ ಸ್ಟಾರ್ ಸಿನಿಮಾಗಳ ಹವಾ. ಮುಖ್ಯವಾಗಿ ಡಿಸೆಂಬರ್ ಮೊದಲ ವಾರ ಅಂದರೆ ಡಿ.5ರಂದು ಬಹುನಿರೀಕ್ಷಿತ “ಪುಷ್ಪ-2′ ಚಿತ್ರ ತೆರೆಕಾಣುತ್ತಿದೆ. ಇದು ಮೂಲ ತೆಲುಗು ಚಿತ್ರವಾದರೂ ಎಲ್ಲಾ ಭಾಷೆಗಳಲ್ಲೂ ದೊಡ್ಡ ಹವಾ ಸೃಷ್ಟಿ ಮಾಡಿದೆ. ಕರ್ನಾಟಕದ ವಿತರಣೆಯ ಹಕ್ಕನ್ನು ವಿತರಕರೊಬ್ಬರು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಹಾಗಾಗಿ, ಕರ್ನಾಟಕದಲ್ಲೂ “ಪುಷ್ಪ-2′ ಬಹುತೇಕ ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ಮೊದಲ ವಾರ ಕೇವಲ ಒಂದೇ ಒಂದು ಕನ್ನಡ ಚಿತ್ರ (ಧೀರ ಭಗತ್ ರಾಯ್) ಮಾತ್ರ ತನ್ನ ಬಿಡುಗಡೆ ಘೋಷಿಸಿಕೊಂಡಿದೆ. ಉಳಿದಂತೆ ಉಪೇಂದ್ರ ಯು-ಐ ಚಿತ್ರ ಡಿಸೆಂಬರ್ 20ಕ್ಕೆ ಬಿಡುಗಡೆಯನ್ನು ಘೋಷಿಸಿಕೊಂಡರೆ ಸುದೀಪ್ “ಮ್ಯಾಕ್ಸ್’ ಡಿ.25ಕ್ಕೆ ಬರಲಿದೆ. ಈ ಕಾರಣದಿಂದ ಈ ಎರಡು ವಾರಗಳಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.
ಒಟಿಟಿಯಲ್ಲಿ 4 ಸಿನಿಮಾ
ಕಳೆದ 11 ತಿಂಗಳಿನಲ್ಲಿ 210 ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆಕಂಡರೆ 4 ಸಿನಿಮಾಗಳು ಮಾತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. “ಎಂಥ ಕಥೆ ಮಾರಾಯ’, “ಹ್ಯಾಪಿ ಬರ್ತ್ಡೇ ಟು ಮಿ’, “ಹ್ಯಾಪಿ ಮ್ಯಾರೀಡ್ ಲೈಫ್’ ಹಾಗೂ “ಮೂರು ಕಾಸಿನ ಕುದುರೆ’ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಂಡಿವೆ.
5 ದಿನ ಅಂತರದಲ್ಲಿ 2 ಸ್ಟಾರ್ ಸಿನಿಮಾ
ಸದ್ಯ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಚಿತ್ರಗಳು ಐದು ದಿನ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಉಪೇಂದ್ರ ನಟನೆಯ “ಯು-ಐ’ ಚಿತ್ರ ಡಿಸೆಂಬರ್ 20ಕ್ಕೆ ತೆರೆಕಂಡರೆ, ಸುದೀಪ್ ಅವರ “ಮ್ಯಾಕ್ಸ್’ ಏಕಾಏಕಿ ಡಿ.25ಕ್ಕೆ ಬರುವುದಾಗಿ ಘೋಷಿಸಿಕೊಂಡಿದೆ. ಹೀಗಾಗಿ ಐದು ದಿನ ಅಂತರದಲ್ಲಿ ಎರಡು ಸ್ಟಾರ್ ಸಿನಿಮಾ ಬರುವುದು ಪಕ್ಕಾ. ಈ ಹಿಂದೆಯೂ ಸುದೀಪ್ ಸಿನಿಮಾಕ್ಕೆ ಹೀಗೆಯೇ ಆಗಿತ್ತು. “ಕೋಟಿಗೊಬ್ಬ-2′ 2021 ಅಕ್ಟೋಬರ್ 15ಕ್ಕೆ ತೆರೆಕಂಡರೆ, ಅದರ ಮುಂಚಿನ ದಿನ ವಿಜಯ್ “ಸಲಗ’ ಅಕ್ಟೋಬರ್ 14ಕ್ಕೆ ತೆರೆಕಂಡು, ಗೆಲುವಿನ ನಗೆ ಬೀರಿತ್ತು.
ರವಿಪ್ರಕಾಶ್ ರೈ