Advertisement

ಬೆಳಗಾವಿಗೆ ರಾಜಸ್ಥಾನದ ಅಜ್ಮೀರ್ ನಂಜು: ಒಂದೇ ದಿನ 22 ಪಾಸಿಟಿವ್ ಪ್ರಕರಣ

08:12 AM May 11, 2020 | keerthan |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯನ್ನು ಶಾಂತವಾಗಿ ಇರಲು ಬಿಡದ ಮಹಾಮಾರಿ ಕೋವಿಡ್-19 ರವಿವಾರ ಮತ್ತೆ ಅಬ್ಬರಿಸಿದ್ದು, ಒಂದೇ ದಿನದಲ್ಲಿ 22 ಜನರಿಗೆ ಪಾಸಿಟಿವ್ ಸೋಂಕು ತಗುಲುವ ಮೂಲಕ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

Advertisement

ಶನಿವಾರ ಒಂದು ದಿನ ಶಾಂತವಾಗಿದ್ದ ಕೋವಿಡ್-19 ಮಹಾಮಾರಿ ರವಿವಾರ ಮತ್ತೆ ಅಪ್ಪಳಿಸಿದೆ.‌ ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಮರ್ಕಜ್ ಗೆ ಹೋಗಿ ಬಂದಿದ್ದ ವ್ಯಕ್ತಿಗಳಿಂದ‌ ಜಿಲ್ಲೆಯಲ್ಲಿ ಮಹಾಮಾರಿ‌ ಪಸರಿಸುತ್ತಿರುವ ಬೆನ್ನಲ್ಲೇ ಈಗ ರಾಜಸ್ಥಾನದ ಅಜ್ಮೇರದಿಂದ ಬಂದ ವ್ಯಕ್ತಿಗಳಿಗೆ ಸೋಂಕು ತಗುಲಿದ್ದು, ಇನ್ನಷ್ಟು ಆತಂಕಕಾರಿ ವಿಷಯವಾಗಿದೆ

ಈ ಒಂದೂವರೆ ತಿಂಗಳ ಅವಧಿಯಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಪಾಸಿಟಿವ್ ಸೋಂಕು ತಗುಲಿದ್ದು ಇದೇ ಮೊದಲನೇಯದ್ದಾಗಿದೆ. 22 ಜನರಿಗೆ ಸೋಂಕು ತಗುಲಿದ್ದು, ಈವರೆಗೆ ಒಟ್ಟು 107ಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. 22 ಜನರ ಪೈಕಿ 13 ಮಂದಿ ಮಹಿಳೆಯರಿಗೆ ಸೋಂಕು ತಗುಲಿದೆ. ಬೆಳಗಾವಿಯ ಮೂರು ವರ್ಷದ ಕಂದಮ್ಮನಿಗೂ ತಗುಲಿದೆ.

ರಾಜಸ್ಥಾನದ ಅಜ್ಮೇರದಿಂದ ಪ್ರವಾಸ ಮಾಡುತ್ತ ಬಂದ ಈ ಸೋಂಕಿತರ ಸಂಪರ್ಕಕ್ಕೆ ಬಂದವರ ಶೋಧ ನಡೆಸಲು ಆರೋಗ್ಯ ಇಲಾಖೆ‌ ಜಾಲ ಬೀಸಿದೆ.

Advertisement

Udayavani is now on Telegram. Click here to join our channel and stay updated with the latest news.

Next