ಸಿರುಗುಪ್ಪ: ಜಿಲ್ಲಾಡಳಿತವು ಜಾರಿಗೆ ತಂದಿರುವ 5 ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಾಕ್‌ಡೌನ್ ಗೆ ಇಡೀ ತಾಲೂಕು ಸ್ಥಬ್ಧವಾಗಿತ್ತು.ಅನಗತ್ಯವಾಗಿ ಹೊರಗೆ ಬಂದವರಿಗೆ ಪೊಲೀಸರು ಕೆಲವು ಕಡೆ ಲಾಠಿ ರುಚಿ ತೋರಿಸಿದ್ದಾರೆ.
ಜನರು ಬೆಳ್ಳಂಬೆಳಗ್ಗೆ ಹಾಲು ತರಕಾರಿ ತೆಗೆದುಕೊಂಡು ಮನೆ ಸೇರಿಕೊಂಡರು. ಅಗತ್ಯ ವಸ್ತುಗಳ ಮಾರಾಟ ಇರಲಿಲ್ಲ,ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಳ್ಳಾರಿ-ಸಿಂಧನೂರು, ಸಿರುಗುಪ್ಪ- ಆದೋನಿ ರಸ್ತೆಗಳು ಸೇರಿದಂತೆ ಇತರೆ ರಸ್ತೆಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಜನಜಂಗುಳಿ ಕಂಡುಬರಲಿಲ್ಲ.ಸಾರ್ವಜನಿಕರು ಬೆಳಿಗ್ಗೆಯಿಂದರಸ್ತೆಗಿಳಿಯುವ ಧೈರ್ಯ ಮಾಡಲಿಲ್ಲ, ಪೊಲೀಸರು ಬೆಳಿಗ್ಗೆ 6-00 ಗಂಟೆಯಿಂದಲೇ ರಸ್ತೆಗಿಳಿದ ಅನಗತ್ಯ ವಾಹನಗಳ ಸಂಚಾರಕ್ಕೆಮತ್ತು ಸಾರ್ವಜನಿಕರ ಓಡಾಟಕ್ಕೆಕಡಿವಾಣ ಹಾಕಿದರು. ಆಸ್ಪತ್ರೆ, ಮೆಡಿಕಲ್‌ಸ್ಟೋರ್ ಮತ್ತು ಪೆಟ್ರೂಲ್ ಬಂಕ್‌ಗಳಿಗೆಮಾತ್ರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು.
ತಹಶೀಲ್ದಾರ್ ಎಸ್.ಬಿ. ಕೂಡಲಗಿ ಮತ್ತು ಸಿಪಿಐ ಟಿ.ಆರ್. ಪವಾರ್ ಬೆಳಗ್ಗೆಯೇ ರಸ್ತೆಗಳಲ್ಲಿ ಸಂಚರಿಸಿ ಲಾಕ್‌ಡೌನ್ ನಿಯಮಪಾಲನೆ ಪರಿಶೀಲಿಸಿದರು. ಅನಗತ್ಯವಾಗಿಸಂಚರಿಸುವ ವಾಹನ ತಡೆದು ದಂಡಹಾಕಿ ವಾಪಸ್ ಕಳುಹಿಸಿದರು. ನಗರಸಭೆ ಸಿಬ್ಬಂದಿಬೆಳಿಗ್ಗೆಯಿಂದಲೇ ಲಾಕ್‌ಡೌನ್ ನಿಯಮ ಪಾಲನೆ ಕುರಿತು ಜನರಿಗೆ ಪ್ರಚಾರದ ಮೂಲಕ ತಿಳಿ ಹೇಳಿದರು. ಎಲ್ಲೆಡೆಪೊಲೀಸ್ ಬಿಗಿ ಕಾವಲು ಹಾಕಲಾಗಿತ್ತು. ಒಟ್ಟಾರೆ ಲಾಕ್‌ಡೌನ್‌ನ 2ನೇ ದಿನ ಉತ್ತಮಪ್ರತಿಕ್ರಿಯೆ ದೊರೆತಿದೆ.
ಮೂವರ ವಿರುದ್ಧ ಪ್ರಕರಣ: ನಗರದ ವಿವಿಧ ಕಡೆಗಳಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಬಟ್ಟೆ ಅಂಗಡಿ, ಬುಕ್‌ಸ್ಟಾಲ್,ಹೋಟೆಲ್ ತೆಗೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿ ಮಾಲೀಕರ ಮೇಲೆಪ್ರಕರಣ ದಾಖಲಿಸಲಾಗಿದೆ. ಅಲ್ಲದೆನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ 22ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.