ಪುಣೆ :ಇಲ್ಲಿ 21 ವರ್ಷದ ಯುವತಿಯೊಬ್ಬಳ ಮೇಲೆ ಸಂಘಟನೆಯೊಂದರ ಕಾರ್ಯಕರ್ತರಂತೆ ಪೋಸ್ ಕೊಟ್ಟ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಗುರುವಾರ ತಡರಾತ್ರಿ(ಅ3) ನಡೆದಿದೆ.
ಘಟನೆ ನಡೆದಾಗ ಮಹಿಳೆಯು ನಗರದ ಬೋಪದೇವ್ ಘಾಟ್ ಪ್ರದೇಶಕ್ಕೆ ಸ್ನೇಹಿತನೊಂದಿಗೆ ಹೋಗಿದ್ದಳು, ಕೃತ್ಯ ನಡೆಸುವ ಮುನ್ನ ಆತನಿಗೂ ಆರೋಪಿಗಳು ಥಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಂಡ್ವಾ ನಿವಾಸಿ 36 ವರ್ಷದ ಓರ್ವ ಶಂಕಿತ ಆರೋಪಿಯನ್ನುಬಂಧಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತೆ ಬೋಪ್ದೇವ್ ಘಾಟ್ ಪ್ರದೇಶದಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಜೋಡಿಗಳು ಬರುವುದನ್ನು ನಿಷೇಧಿಸಲಾಗಿದೆ ಎಂದು ಆರೋಪಿಗಳು ಹೇಳಿಕೊಂಡು ಇಬ್ಬರ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಆರೋಪಿಗಳಲ್ಲಿ ಒಬ್ಬ ಮಹಿಳೆಯನ್ನು ಬೆದರಿಸಿ ತನ್ನ ಕಾರಿಗೆ ಬಲವಂತವಾಗಿ ಹತ್ತಿಸಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋದ ನಂತರ ಕಾರನ್ನು ನಿಲ್ಲಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಾಮೂಹಿಕ ಅತ್ಯಾಚಾರ ಗೈಯುವ ಮೊದಲು ಜತೆಗಿದ್ದಯುವತಿಯ ಸ್ನೇಹಿತನನ್ನೂ ಆರೋಪಿಗಳು ಥಳಿಸಿದ್ದಾರೆ.
ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಂಡ್ವಾ ಪೊಲೀಸರು ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.