Advertisement

ಕೈಯಲ್ಲಿ ಪಿಸ್ತೂಲ್ ಹಿಡಿದು ಕೇಕ್ ಕತ್ತರಿಸಿದ ಯುವಕ: ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಂಧನ

07:03 PM Apr 01, 2023 | Team Udayavani |

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಕೈಯಲ್ಲಿ ಪಿಸ್ತೂಲ್ ಹಿಡಿದಿಕೊಂಡು ಕೇಕ್ ಕತ್ತರಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

Advertisement

ಪಿಸ್ತೂಲ್ ಹಿಡಿದ ಯುವಕನನ್ನು ಸಂಗಮ್ ವಿಹಾರ್ ಮೂಲದ ಅನಿಕೇತ್ ಅಲಿಯಾಸ್ ಅನೀಶ್ ಎಂದು ಗುರುತಿಸಲಾಗಿದೆ.

ಅಷ್ಟು ಮಾತ್ರವಲ್ಲದೆ ಅನೀಶ್ ವಿರುದ್ಧ ಈ ಹಿಂದೆಯೂ ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕೇಕ್ ಕತ್ತರಿಸುತ್ತಿರುವ ವೇಳೆ ಯುವಕ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡಿದ್ದಾನೆ ಅಲ್ಲದೆ ಆತನ ಜೊತೆಗಿದ್ದವರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಯುವಕನ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದಾರೆ,

ಬಂಧಿತ ಯುವಕನ ವಿರುದ್ಧ ಈ ಹಿಂದೆಯೂ ಕೆಲವು ಪ್ರಕರಣ ದಾಖಲಾಗಿದ್ದು ಈತ ಸಂಗಮ್ ವಿಹಾರ್ ಪ್ರದೇಶದಲ್ಲಿ ಬಂಧೂಕು ಹಿಡಿದು ತಿರುಗಾಡುತ್ತಿದ್ದ ಎನ್ನಲಾಗಿದೆ.

Advertisement

ಇದನ್ನೂ ಓದಿ: ಗ್ಯಾಂಗ್ ರೇಪ್ ಕೇಸ್; ಗೃಹ ಸಚಿವರ ಅಸಾಮರ್ಥ್ಯವೇ ಕಾರಣ: ಸಿದ್ದರಾಮಯ್ಯ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next