ನವದೆಹಲಿ: ಅಂಡಮಾನ್‌ನ 21 ದ್ವೀಪಗಳ ಪೈಕಿ ಒಂದಕ್ಕೆ ಕರ್ನಾಟಕದ ಕಾರವಾರದ ಸೆಕೆಂಡ್ ಲೆಫ್ಟಿನೆಂಟ್ ರಾಮ ರಾಘೋಭಾ ರಾಣೆ ಹೆಸರು ಇರಿಸಲಾಗುತ್ತದೆ. ಅವರ ಹೆಸರು ಸೇರಿದಂತೆ ಪರಮವೀರ ಚಕ್ರ ಪ್ರಶಸ್ತಿ ಪಡೆದ ಭಾರತದ ವೀರ ಯೋಧರ ಹೆಸರನ್ನು ಅಂಡಮಾನ್ ಮತ್ತು ನಿಕೋಬಾರ್‌ನ 21 ಅನಾಮಧೇಯ ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಜ.23ರಂದು ಯೋಧರ ಹೆಸರು ಇರಿಸಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ. ಆ ದಿನ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಜನ್ಮದಿನವೂ ಆಗಿದೆ. ಅದನ್ನು ದೇಶಾದ್ಯಂತ “ಪರಾಕ್ರಮ ದಿವಸ’ ಎಂದು ಆಚರಿಸಲಾಗುತ್ತದೆ. ಇದರ ಜತೆಗೆ ನೇತಾಜಿ ಸುಭಾಶ್ ಚಂದ್ರ ಬೋಸ್ ದ್ವೀಪದಲ್ಲಿ ಅವರ ಸ್ಮರಣಾರ್ಥ ಸ್ಥಾಪನೆಯಾಗಲಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನೂ ಪ್ರಧಾನಿ ಅನಾವರಣಗೊಳಿಸಲಿದ್ದಾರೆ.