Advertisement

21 ತಿಂಗಳ ಕಾಲ ಅಮಾನತಾದ ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್

03:33 PM Feb 04, 2023 | Team Udayavani |

ಹೊಸದಿಲ್ಲಿ: ಭಾರತದ ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ 21 ತಿಂಗಳ ಕಾಲ ಅಮಾನತುಗೊಳಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಟೆಸ್ಟಿಂಗ್ ಸಂಸ್ಥೆ (ಐಟಿಎ) ತಿಳಿಸಿದೆ.

Advertisement

ಕರ್ಮಾಕರ್ ಅವರು ಹೈಜೆನಾಮೈನ್ ಪಡೆದಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. 2023ರ ಜುಲೈ 10ರವರೆಗೆ ಅವರನ್ನು ಅಮಾನತುಗೊಳಿಸಲಾಗಿದೆ.

ಅಕ್ಟೋಬರ್ 2021 ರಲ್ಲಿ ಫೆಡರೇಶನ್ ಇಂಟರ್ನ್ಯಾಷನಲ್ ಡಿ ಜಿಮ್ನಾಸ್ಟಿಕ್ (FIG) ಪರವಾಗಿ ಮಾದರಿ ಸಂಗ್ರಹಿಸಲಾಗಿತ್ತು. 2017 ರಲ್ಲಿ ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿಯ ನಿಷೇಧಿತ ವಸ್ತುಗಳ ಪಟ್ಟಿಗೆ ಹಿಜೆನಮೈನ್ ಅನ್ನು ಸೇರಿಸಲಾಗಿದೆ.

ಇದನ್ನೂ ಓದಿ:ರಾಜಕಾರಣಿಗಳ ಉಚಿತ ಆಫರ್ ನಂಬಬೇಡಿ, ಇದು ಬರೀ ಗಿಮಿಕ್: ಪ್ರತಾಪ ಸಿಂಹ

ದೀಪಾ ಕರ್ಮಾಕರ್ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿದ್ದಾರೆ. ರಿಯೊ ಒಲಿಂಪಿಕ್ಸ್ 2016 ರ ಮಹಿಳಾ ವಾಲ್ಟ್ ಫೈನಲ್‌ ನಲ್ಲಿ ತ್ರಿಪುರಾದ ದೀಪಾ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದರು. ಕಂಚಿನ ಪದಕ ವಿಜೇತೆ ಸ್ವಿಟ್ಜರ್ಲೆಂಡ್‌ನ ಗಿಯುಲಿಯಾ ಸ್ಟೀಂಗ್‌ರುಬರ್‌ ಗಿಂತ ಕೇವಲ 0.150 ಕಡಿಮೆ ಅಂಕಗಳೊಂದಿಗೆ ಕಂಚಿನ ಪದಕವನ್ನು ಕಳೆದುಕೊಂಡಿದ್ದರು.

Advertisement

ಇದೀಗ ನಿಷೇಧದ ಪ್ರಕಾರ 29 ವರ್ಷ ವಯಸ್ಸಿನ ದೀಪಾ ವಿಶ್ವಕಪ್ ಸರಣಿಯಲ್ಲಿನ ಎಲ್ಲಾ ಪಂದ್ಯಾವಳಿಗಳನ್ನು ಮತ್ತು ಆರು ವಿಶ್ವ ಚಾಲೆಂಜ್ ಕಪ್ ಸರಣಿಗಳಲ್ಲಿ ಕನಿಷ್ಠ ಮೂರನ್ನಾದರೂ ಕಳೆದುಕೊಳ್ಳುತ್ತಾರೆ. ಅವರು ಸೆಪ್ಟೆಂಬರ್‌ ನಲ್ಲಿ ಆಂಟ್‌ವರ್ಪ್‌ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್ ಈವೆಂಟ್ ವರ್ಲ್ಡ್ ಚಾಂಪಿಯನ್‌ಶಿಪ್ 2023 ಗೆ ಅರ್ಹತೆ ಪಡೆಯುತ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next