Advertisement

ಫೋನ್ ಇನ್ ಗೆ 21 ದೂರು

09:39 AM Jun 14, 2019 | Suhan S |

ಕೋಲಾರ: ಜಿಪಂ ಕಚೇರಿಯಲ್ಲಿ ಪ್ರತಿ ತಿಂಗಳಿನಂತೆಯೇ ಈ ಬಾರಿಯೂ ಜಿಪಂ ಸಿಇಒ ಜಿ.ಜಗದೀಶ್‌ ಅವರು ನಡೆಸಿದ ಫೆೋನ್‌ ಇನ್‌ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಸಮಸ್ಯೆಗಳ ಕುರಿತಂತೆ 21 ದೂರು ದಾಖಲಾಯಿತು.

Advertisement

ಪ್ರಮುಖವಾಗಿ ಕುಡಿಯುವ ನೀರು, ಚರಂಡಿ ಸಮಸ್ಯೆ, ಅಂಗನವಾಡಿ ಅವ್ಯವಸ್ಥೆ, ನರೇಗಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದವು. ಅಲ್ಲದೆ ಹಾಸ್ಟೆಲ್ನಲ್ಲಿ ಸಿಬ್ಬಂದಿಗೆ ವೇತನವಾಗಿಲ್ಲ ಎನ್ನುವ ಕುರಿತಾಗಿಯೂ ಕರೆ ಮಾಡಿ ದೂರು ಸಲ್ಲಿಸಲಾಯಿತು.

ನೀರಿನ ಸಮಸ್ಯೆ, ಚರಂಡಿ ಸ್ವಚ್ಛತೆ ಇಲ್ಲ: ತಾಲೂಕಿನ ವೇಮಗಲ್ನಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಆಗಿರುವುದಿಲ್ಲ. ಬಿತ್ತನೆ ಬೀಜ ಕೊಡುತ್ತಿಲ್ಲ, ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇರುವುದಿಲ್ಲ, ಕುಡಿಯುವ ನೀರಿನ ಸಮಸ್ಯೆ ಬ್ಲಾಕ್‌-1 ಮತ್ತು ಚರಂಡಿ ಸ್ವಚ್ಛತೆ ಮಾಡಿರುವುದಿಲ್ಲ ಎಂದು ರೈತರೊಬ್ಬರು ದೂರಿದರು.

ಚೆಕ್‌ ಡ್ಯಾಂ ಸರಿಯಾಗಿಲ್ಲ: ತಾಲೂಕಿನ ಸೀತಿ ಗ್ರಾಪಂನಲ್ಲಿ ಕಾರ್ಯದರ್ಶಿ ರಮೇಶ್‌ 22 ವರ್ಷದಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ. ನರೇಗಾದಡಿ ಪಾಲಾರ್‌ ನದಿಯಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂಗಳು ಮುಳುಗಿವೆ. ಕಾಂಪೌಂಡ್‌ ಸರಿಯಾಗಿ ಮಾಡಿಲ್ಲ, ಶಾಲಾ ಆವರಣದಲ್ಲಿ ಸ್ಟೇಜ್‌ ಸರಿಯಾಗಿ ಕಟ್ಟಿಲ್ಲ ಎಂದು ದೂರಿದರು.

ಮಾಲೂರು ತಾಲೂಕಿನ ಅಬ್ಬೇನಹಳ್ಳಿಯಲ್ಲಿ ಚರಂಡಿ ಇಲ್ಲ, ಮನೆಗೆ-ಶಾಲೆಗೆ ಚರಂಡಿಯ ನೀರು ಹೋಗುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಅರ್ಜಿ ಕೊಟ್ಟಿದ್ದರೂ ಕ್ರಮ ಕೈಗೊಂಡಿಲ್ಲ.

Advertisement

ಹಕ್ಕುಪತ್ರಕ್ಕಾಗಿ ಮನವಿ:ಮಾಸ್ತಿ ನಾಡ ಕಚೇರಿ ಯಲ್ಲಿ ಆಧಾರ್‌ ಕಾರ್ಡ್‌ಗೆ ತುಂಬಾ ಸಮಸ್ಯೆ ಯಿದ್ದು, 3 ತಿಂಗಳು ಸಮಯ ನೀಡುತ್ತಾರೆ. ಪಂಚಾಯ್ತಿ ಪಕ್ಕ ಕಲ್ಯಾಣಿ ಮುಚ್ಚಿದ್ದಾರೆ. ಆದರೆ, ಸರಿಯಾಗಿ ಸ್ವಚ್ಛತೆ ಮಾಡಿಲ್ಲ. ಮಾಲೂ ರು ತಾಲೂಕಿನ ಹುಣಸೀಕೋಟೆಯಲ್ಲಿ 4 ಸದಸ್ಯರು ಇದ್ದರೆ ಅಂಗನವಾಡಿ ಇಲ್ಲ, ಕಟ್ಟಡ ಬೀಳುವ ಹಂತದಲ್ಲಿದೆ. ಹಕ್ಕು ಪತ್ರ ನೀಡಿಲ್ಲ, ದಲಿತರ ಸ್ಮಶಾನ ಒತ್ತುವರಿ ಆಗಿದೆ ಎನ್ನುವುದು ಸೇರಿ ಇನ್ನಿತರೆ ದೂರುಗಳನ್ನು ಕರೆ ಮಾಡಿ ಸಿಇಒ ಅವರಿಗೆ ದೂರು ನೀಡಲಾಯಿತು.

ಫೋನ್‌ಇನ್‌ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಇಒ ಜಿ.ಜಗದೀಶ್‌, ಹಾಸ್ಟೆಲ್ ಸಿಬ್ಬಂದಿಗೆ ಸಂಬಳ ಆಗದಿರುವ ಹಾಗೂ ಗ್ರಾಪಂ ನಲ್ಲಿ ಜಮಾಬಂದಿ ಆಗದಿರುವ ಬಗ್ಗೆ ಹಿಂದಿನ ತಿಂಗಳ ದೂರು ಪುನರಾವರ್ತನೆಯಾದರೆ ಉಳಿದಂತೆ ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ ಸಮಸ್ಯೆ, ಸ್ವಚ್ಛತೆ ಸೇರಿದಂತೆ ಇನ್ನಿತರೆ ದೂರುಗಳು ಬಂದಿವೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಮನೆ ಮುಂದಿನ ಚರಂಡಿಯನ್ನೂ ಗ್ರಾಪಂನವರೇ ಸ್ವಚ್ಛ ಮಾಡಬೇಕು ಎಂಬ ಮನೋಭಾವ ಕೆಲವರಲ್ಲಿದ್ದು, ಕರೆ ಮಾಡಿ ದೂರು ನೀಡುತ್ತಾರೆ. ಅದು ಸರಿಯಲ್ಲ, ಮನೆ ಕಸ, ತ್ಯಾಜ್ಯಗಳನ್ನು ಚರಂಡಿಗೆ ಸುರಿದು ಸ್ವಚ್ಛವಿಲ್ಲ ಎಂದರೆ ಹೇಗೆ. ನಮ್ಮ ಮನೆ ಮುಂದೆ ನಾವೇ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಚರಂಡಿಗೆ ಕಾಯಿಲೆ ಬರೋದಿಲ್ಲ, ನಮಗೆ ಬರುವುದು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಅಧಿಕಾರಿ ಮುನಿರಾಜು, ಡಿಡಿಪಿಐ ಕೆ.ರತ್ನಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕೇವಲ ಗ್ರಾಮೀಣ ಭಾಗದಿಂದ ಮಾತ್ರವಲ್ಲದೆ, ನಗರ ಪ್ರದೇಶದಿಂದಲೂ ದೂರು ಬಂದವು. ಕೋಲಾರದ ಖಾದ್ರಿಪುರದಲ್ಲಿ ನೀರಿನ ಸಮಸ್ಯೆ ಇದ್ದು, ಅಮರ ಜ್ಯೋತಿ ಶಾಲೆ ಮುಂಭಾಗ ಸದಸ್ಯರೊಬ್ಬರ ಮನೆಗೆ ಮಾತ್ರ ನೀರು ಪೂರೈಕೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದರು. ಕೋಲಾರದ ವಾರ್ಡ್‌ ನಂ.29, 27 ಒಳಚರಂಡಿ ವ್ಯವಸ್ಥೆ ಸರಿಯಾ ಗಿಲ್ಲ, ಚರಂಡಿ ಸ್ವಚ್ಛತೆ ಮಾಡಿಲ್ಲ, ವಿದ್ಯುತ್‌ ಕಂಬಗಳು ವಾಲಿವೆ. ಬೀದಿ ದೀಪವಿಲ್ಲ. ನಾಯಿ ಗಳ ಹಾವಳಿ, 4ನೇ ಕ್ರಾಸ್‌ನಲ್ಲಿ ಕುಡಿಯುವ ನೀರು ಬರುತ್ತಿಲ್ಲ ಎನ್ನುವ ದೂರು ಬಂತು. ಇದಕ್ಕೆ ಉತ್ತರಿಸಿದ ಸಿಇಒ ಅವರು, ನಗರ ವ್ಯಾಪ್ತಿ ತಮಗೆ ಬರುವುದಿಲ್ಲ, ಆದರೂ ಜಿಲ್ಲಾಧಿ ಕಾರಿ ಹಾಗೂ ಇಲ್ಲಿನ ಪೌರಾಯುಕ್ತರ ಗಮನಕ್ಕೆ ಮಾಹಿತಿ ತರಲಾಗುವುದು ಎಂದು ತಿಳಿಸಿದರು.

ನಗರ ಪ್ರದೇಶದಿಂದಲೂ ಬಂತು ದೂರು:

Udayavani is now on Telegram. Click here to join our channel and stay updated with the latest news.

Next