Advertisement

ನಂದೂರ್‌ಬಾರ್‌ ರೈಲ್ವೇ ನಿಲ್ದಾಣದಲ್ಲಿ 21 ಕೋಚ್‌ಗಳ ಐಸೋಲೇಶನ್‌ ವಾರ್ಡ್‌ ರೈಲು

07:04 PM Apr 20, 2021 | Team Udayavani |

ಮುಂಬಯಿ: ನಂದೂರ್‌ಬಾರ್‌ನಲ್ಲಿ  ಕೋವಿಡ್‌ ರೋಗಿಗಳಿಗೆ ಭಾರತೀಯ ರೈಲ್ವೇ 21 ಕೋಚ್‌ಗಳ ಐಸೋಲೇಶನ್‌ ವಾರ್ಡ್‌ ರೈಲೊಂದನ್ನು ನಿರ್ಮಿಸಿದ್ದು, ನಂದೂರ್‌ಬಾರ್‌ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ರಲ್ಲಿ ನಿಲ್ಲಿಸಿರುವ ಇದರಲ್ಲಿ  ಈಗಾಗಲೇ 20 ರೋಗಿಗಳನ್ನು ದಾಖಲಿಸಲಾಗಿದೆ.

Advertisement

ಪ್ರತಿ ಬೋಗಿಯಲ್ಲೂ ರೋಗಿಗಳಿಗೆ ಬೆಡ್ರೋಲ್‌ಗ‌ಳು, ದಿಂಬುಗಳು, ಕರವಸ್ತ್ರಗಳ ವ್ಯವಸ್ಥೆ ಮಾಡಲಾ ಗಿದ್ದು, ಒಂಬತ್ತು ಕೂಲರ್‌ಗಳು, ಎರಡು ಆಮ್ಲಜನಕ ಸಿಲಿಂಡರ್‌ ಗಳು ಮತ್ತು ಒಂದು ಕೋಚ್‌ಗೆ ಮೂರು ಶೌಚಾಲ ಯಗಳು, ಒಂದು ಸ್ನಾನಗೃಹವನ್ನು  ಒದಗಿಸ ಲಾಗಿದೆ. ಬೋಗಿಗಳ ಮೇಲ್ಛಾವಣಿಯು ಬಟ್ಟೆಯಿಂದ ಮುಚ್ಚಲ್ಪಟ್ಟಿದ್ದು, ಮೇಲ್ಭಾಗವನ್ನು ಇಡೀ ದಿನ ಒದ್ದೆಯಾಗಿ ಇಡಲಾಗುತ್ತದೆ. ಬೋಗಿಗಳನ್ನು ತಂಪಾಗಿಡಲು ನಿರಂತರ ನೀರು ಚಿಮುಕಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಬೋಗಿಗಳ ಹೊರಗಿನ ಕಿಟಕಿಗಳಲ್ಲಿ ಕೂಲರ್‌ಗಳನ್ನು ಕೂಡಾ ವ್ಯವಸ್ಥೆ ಮಾಡಲಾಗಿದೆ.

ನಂದೂರ್‌ಬಾರ್‌ನಲ್ಲಿ ಪ್ರತ್ಯೇಕ ಬೋಗಿಗಳನ್ನು ಒದಗಿಸುವಂತೆ ಪಶ್ಚಿಮ ರೈಲ್ವೇಗೆ ಜಿಲ್ಲಾಧಿಕಾರಿ ಕಳೆದ ವಾರ ಮನವಿ ಮಾಡಿದ್ದರು. 2020ರಲ್ಲಿ ಭಾರತೀಯ ರೈಲ್ವೇ ತನ್ನ ಸುಮಾರು 4,000 ಬೋಗಿಗಳನ್ನು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಐಸೋಲೇಶನ್‌ ವಾರ್ಡ್‌ಗಳನ್ನಾಗಿ ಪರಿವರ್ತಿಸಿತ್ತು. ಸೌಮ್ಯ ರೋಗಲಕ್ಷಣ ಹೊಂದಿರುವ ರೋಗಿಗಳನ್ನು ಇಲ್ಲಿ ದಾಖಲಿಸಲಾಗುತ್ತಿದೆ. ನಂದೂರ್‌ಬಾರ್‌ ರೈಲ್ವೇ ನಿಲ್ದಾಣವು 100 ಪ್ರತ್ಯೇಕ ವಾರ್ಡ್‌ ಬೋಗಿಗಳನ್ನು ಕೋರಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬೋಗಿಗಳನ್ನು ಒದಗಿಸಲಾಗುವುದು ಎಂದು ರೈಲ್ವೇ ಬೋರ್ಡ್‌ ತಿಳಿಸಿದೆ.

ಇತರ ರಾಜ್ಯಗಳಿಗೂ ಸೌಲಭ್ಯಗಳು  :

ಮುಂಬಯಿ, ಗುಜರಾತ್‌, ಸೂರತ್‌, ಕರ್ನಾಟಕದ ಬೆಂಗಳೂರು ಮತ್ತು ಇತರ ಎಲ್ಲ ನಿಲ್ದಾಣಗಳ ಮೇಲೆ ನಿಗಾ ಇಡಲಾಗುತ್ತಿದೆ. ಹೆಚ್ಚಿನ ಐಸೋಲೇಶನ್‌ ರೈಲುಗಳನ್ನು ನಿಯೋಜಿಸಲು ಸಾಮಾನ್ಯ ವ್ಯವಸ್ಥಾ ಪಕರಿಗೆ ಅಧಿಕಾರ ನೀಡಿದ್ದೇವೆ. ಈ ಮಧ್ಯೆ ಪ್ರಯಾ ಣಿಕರ ಸೇವೆಗಳಿಗೆ ಇದರಿಂದ ಯಾವುದೇ ಕೊರತೆ ಯಾಗು ವುದಿಲ್ಲ. ವಿಶೇಷ ವಾಗಿ ಮುಂಬಯಿ, ಸೂರತ್‌ ಮತ್ತು ಬೆಂಗಳೂರಿನಲ್ಲಿ  ಪರಿಸ್ಥಿತಿ ಸಾಕಷ್ಟು ಸಾಮಾನ್ಯವಾಗಿದೆ. ರೈಲುಗಳ ಸೇವೆ ಮುಂದು ವರಿಯುತ್ತದೆ ಎಂದು ರೈಲ್ವೇ ಬೋರ್ಡ್‌ ತಿಳಿಸಿದೆ.

Advertisement

ರೈಲ್ವೇಯಿಂದ ಜಾಗೃತಿ ಅಭಿಯಾನ :

ರೈಲ್ವೇ ತನ್ನ ಐಆರ್‌ಸಿಟಿಸಿಯ ಇ-ಟಿಕೆಟಿಂಗ್‌ ಪೋರ್ಟಲ್‌ ಮೂಲಕ ಮತ್ತು ರೈಲ್ವೇ ನಿಲ್ದಾಣಗಳಲ್ಲಿ  ಪ್ರಕಟನೆ ಮತ್ತು ಪ್ರದರ್ಶನಗಳ ಮೂಲಕ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಲು ಜನರಲ್ಲಿ  ಜಾಗೃತಿ ಮೂಡಿಸುತ್ತಿದೆ. ಮುನ್ನೆಚ್ಚರಿಕೆಯಾಗಿ ನಾವು ಕಳೆದ ವರ್ಷದಿಂದ ಹವಾನಿಯಂತ್ರಿತ ಬೋಗಿಗಳಲ್ಲಿ ಕಂಬಳಿ ನೀಡುವುದನ್ನು ನಿಲ್ಲಿಸಿದ್ದೇವೆ ಮತ್ತು ರೈಲುಗಳಲ್ಲಿ ತಿನ್ನಲು ಸಿದ್ಧ ಆಹಾರಕ್ಕೆ ಮಾತ್ರ ನಾವು ಅನುಮತಿ ನೀಡುತ್ತಿದ್ದೇವೆ ಎಂದು ರೈಲ್ವೇ ಮಂಡಳಿಯ ಕಾರ್ಯಾಧ್ಯಕ್ಷ ಸುನೀತ್‌ ಶರ್ಮ ಹೇಳಿದ್ದಾರೆ.

ಕೋವಿಡ್ ಅಗತ್ಯ ಸರಕುಗಳ ಪೂರೈಕೆ ಹೆಚ್ಚಳ :

ರೆಲ್ವೇ ಇತಿಹಾಸದಲ್ಲೇ ಕಳೆದ ವರ್ಷ 1232.64 ಮಿಲಿಯನ್‌ ಟನ್‌ ಕೊರೊನಾ ಅಗತ್ಯ ಸರಕುಗಳನ್ನು ರವಾನಿಸಿದ್ದೇವೆ. ಈ ಹಣಕಾಸು ವರ್ಷದಲ್ಲಿ ಎ. 15ರ ವರೆಗೆ ರೈಲ್ವೇ 54.4 ಮಿಲಿಯನ್‌ ಟನ್‌ ಸರಕುಗಳನ್ನು ರವಾನಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ 30.8 ಮಿಲಿಯನ್‌ ಟನ್‌ ರವಾನಿಸಲಾಗಿತ್ತು. ಪ್ರಸ್ತುತ ವರ್ಷ ಸರಕು ವಿಭಾಗದಲ್ಲಿ 5,429 ಕೋಟಿ ರೂ. ಗಳನ್ನು ರೈಲ್ವೇ ಗಳಿಸಿದೆ. ರೈಲ್ವೇ ಕೂಡಾ ಅಗತ್ಯ ಸರಕುಗಳನ್ನು ಹಗಲು- ರಾತ್ರಿಯೆನ್ನದೆ ಸಾಗಿಸುತ್ತಿದೆ. ಕೋವಿಡ್‌ ಸಮಯದಲ್ಲಿಯೂ ಸೇವೆಗಳನ್ನು ನಿರ್ವಹಿಸುತ್ತಿದ್ದೇವೆ. ಎಂದು ರೈಲ್ವೇ ಮಂಡಳಿ ಸ್ಪಷ್ಟಪಡಿಸಿದೆ.

ಕೋವಿಡ್‌ ರೈಲ್ವೇ ನಿಯಂತ್ರಣ ಕೊಠಡಿ ಸ್ಥಾಪನೆ :

ವೈದ್ಯರಿಗೆ ವೈಯಕ್ತಿಕ ರಕ್ಷಣ ಸಾಧನಗಳನ್ನು ನೀಡಲಾಗಿದ್ದು, ಪಿಪಿಇ ಕಿಟ್‌ ಬದಲಾಯಿಸಲು ಪ್ರತ್ಯೇಕ ಕೊಠಡಿ ಮತ್ತು ವೈದ್ಯಕೀಯ ಸಿಬಂದಿಗೆ ಪ್ರತ್ಯೇಕ ಹವಾನಿಯಂತ್ರಿತ ಕೋಚ್‌ ಅನ್ನು ಒದಗಿಸಲಾಗಿದೆ. ಈ ಬೋಗಿಗಳಲ್ಲಿ ದಾಖಲಾದ ಕೋವಿಡ್‌ ರೋಗಿಗಳ ಅಗತ್ಯವನ್ನು ಪೂರೈಸಲು ನಂದೂರ್‌ಬಾರ್‌ನಲ್ಲಿ ಕೋವಿಡ್‌ ರೈಲ್ವೇ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಪಶ್ಚಿಮ ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ರೈಲ್ವೇ ಕಳೆದ ವರ್ಷ 4,000ಕ್ಕೂ ಹೆಚ್ಚು ಬೋಗಿಗಳನ್ನು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶೇಷ ವೈದ್ಯಕೀಯ ತಂಡ ಹಗೂ ಸೂಕ್ತ ಸೌಲಭ್ಯಗಳೊಂದಿಗೆ ಪ್ರತ್ಯೇಕ ವಾರ್ಡ್‌ಗಳನ್ನಾಗಿ ಪರಿವರ್ತಿಸಿತ್ತು. ಈ ಬೋಗಿಗಳನ್ನು ದೇಶಾದ್ಯಂತ ಹಲವಾರು ನಿಲ್ದಾಣಗಳಲ್ಲಿ ಇರಿಸಲಾಗಿದೆ. ಕಳೆದ ವರ್ಷ ದಿಲ್ಲಿ, ಬಿಹಾರ ಮತ್ತು ಉತ್ತರ ಪ್ರದೇಶ ಸರಕಾರಗಳಿಗೆ 800ಕ್ಕೂ ಹೆಚ್ಚು ಪ್ರತ್ಯೇಕ ವಾರ್ಡ್‌ ಬೋಗಿಗಳನ್ನು ಒದಗಿಸಿದೆ. -ಸುನೀತ್‌ ಶರ್ಮರೈಲ್ವೇ ಮಂಡಳಿ ಕಾರ್ಯಾಧ್ಯಕ್ಷರು ಮತ್ತು ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next