Advertisement

8 ಕಾರುಗಳಲ್ಲಿ ಹುಟ್ಟುಹಬ್ಬ ಆಚರಿಸಲು ಹೋಗಿ ಪೊಲೀಸರ ಅತಿಥಿಯಾದ 21 ಯುವಕರು: ಇಲ್ಲಿದೆ ಕಾರಣ

10:33 AM Sep 29, 2022 | Team Udayavani |

ಗಾಜಿಯಾಬಾದ್: ಹುಟ್ಟು ಹಬ್ಬ ಆಚರಿಸಲು ಹೋದ ಇಪ್ಪತ್ತೊಂದು ಯುವಕರು ಪೊಲೀಸರ ಅತಿಥಿಯಾದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

Advertisement

ಕಾರಣ ಇಷ್ಟೇ… ಫ್ಲೈ ಓವರ್ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಿಸಿ ಗಲಾಟೆ ಸೃಷ್ಟಿಸಿ ವಾಹನ ಸಂಚಾರಕ್ಕೆ ತೊಡಕು ಉಂಟು ಮಾಡಿದ ಆರೋಪದ ಮೇಲೆ ಎಂಟು ಐಷಾರಾಮಿ ಕಾರುಗಳ ಸಹಿತ 21 ಮಂದಿ ಯುವಕರನ್ನು ಇಂದಿರಾಪುರಂ ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

ಆರೋಪಿಗಳು ಮಂಗಳವಾರ ಮಧ್ಯರಾತ್ರಿ ಪೂರ್ವ ದೆಹಲಿಯ ಜಗತ್ ಪುರಿ ನಿವಾಸಿ ಅಂಶ್ ಕೊಹ್ಲಿ (21) ಅವರ ಹುಟ್ಟುಹಬ್ಬವನ್ನು ಆಚರಿಸಲು ಗಾಜಿಯಾಬಾದ್ ನಲ್ಲಿರುವ ಫ್ಲೈ ಓವರ್ ಮೇಲೆ ಎಂಟು ಕಾರುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಸಂಭ್ರಮಿಸಿದ್ದಾರೆ.

ಅಲ್ಲದೆ ಕಾರಿನ ಬಾನೆಟ್ ಮೇಲೆ ಕೇಕ್ ಕತ್ತರಿಸಿ ಜೋರಾಗಿ ಸಂಗೀತ ಹಾಕಿ ರಸ್ತೆ ತುಂಬೆಲ್ಲಾ ಕುಣಿದು ವಾಹನ ಸಂಚಾರಕ್ಕೆ ತೊಂದರೆ ನೀಡಿದ್ದಾರೆ ಅದೂ ಅಲ್ಲದೆ ವಾಹನ ಸವಾರರ ಮೇಲೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಹುಟ್ಟುಹಬ್ಬ ಆಚರಿಸಿಕೊಂಡ ಯುವಕ ಸೇರಿ ಇಪ್ಪತ್ತೊಂದು ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಇದನ್ನೂ ಓದಿ : ನಿಷೇಧದ ಬೆನ್ನಲ್ಲೇ ಪಿಎಫ್ ಐನ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣ ಸ್ಥಗಿತಗೊಳಿಸಿದ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next