Advertisement

2030ರ ಏಶ್ಯಾಡ್‌, 2032ರ ಒಲಿಂಪಿಕ್ಸ್‌: ಭಾರತ ಆಸಕ್ತಿ

11:51 AM Jun 03, 2018 | Team Udayavani |

ಹೊಸದಿಲ್ಲಿ: ವಿಶ್ವ ದರ್ಜೆಯ ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ಸದಾ ಮುಂದಿರುವ ಭಾರತವೀಗ 2030ರ ಏಶ್ಯನ್‌ ಗೇಮ್ಸ್‌ ಹಾಗೂ 2032ರ ಒಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯಕ್ಕೆ ಬಿಡ್‌ ಸಲ್ಲಿಸಲು ಆಸಕ್ತಿ ವ್ಯಕ್ತಪಡಿಸಿದೆ. ಜತೆಗೆ 2016ರ ಯುತ್‌ ಒಲಿಂಪಿಕ್ಸ್‌ ಗೇಮ್ಸ್‌ ಆತಿಥ್ಯಕ್ಕೂ ಮುಂದಾಗಿದೆ. ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ಶನಿವಾರ ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

Advertisement

“ಶನಿವಾರದ ಐಒಎ ಸಭೆಯಲ್ಲಿ ನಾವು ಕೆಲವು ದಿಟ್ಟ ನಿರ್ಧಾರಗಳ ಬಗ್ಗೆ ಚರ್ಚಿಸಿದೆವು. ವಿಶ್ವ  ದರ್ಜೆಯ ಕ್ರೀಡಾಕೂಟಗಳ ಆತಿಥ್ಯ ವಹಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ನೂತನ ಕಮಿಟಿ ಹಾಗೂ ಕಮಿಶನ್ಸ್‌ ನೇಮಕಗಳ ಬಗ್ಗೆ ಸೂಕ್ತ ನಿರ್ಣಯಕ್ಕೆ ಬರಲಾಗಿದೆ. ಇದು ನಮ್ಮ ಭವಿಷ್ಯದ ಕ್ರೀಡಾ ಯೋಜನೆಗಳಿಗೆ ಹೊಸ ದಾರಿಯನ್ನು ಕಲ್ಪಿಸಲಿದೆ’ ಎಂದು ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ಹೇಳಿದರು.

ಭಾರತದ ದೊಡ್ಡ ಕೂಟಗಳು
ಭಾರತದಲ್ಲಿ ನಡೆದ ಕೊನೆಯ ವಿಶ್ವ ಮಟ್ಟದ ದೊಡ್ಡ ಕ್ರೀಡಾಕೂಟವೆಂದರೆ 2010ರ ಕಾಮನ್ವೆಲ್ತ್‌ ಗೇಮ್ಸ್‌. ಈವರೆಗೆ 2 ಏಶ್ಯಾಡ್‌ ಕ್ರೀಡಾಕೂಟಗಳನ್ನೂ ಭಾರತ ಯಶಸ್ವಿಯಾಗಿ ನಡೆಸಿಕೊಟ್ಟಿದೆ (1951 ಹಾಗೂ 1984).

Advertisement

Udayavani is now on Telegram. Click here to join our channel and stay updated with the latest news.

Next