Advertisement

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಯಮಹಾ FZS-Fi Dlx ಬೈಕ್

07:56 PM Jan 03, 2022 | Team Udayavani |

ನವದೆಹಲಿ : 2022ರಲ್ಲಿ ಯಮಹಾ ಮೋಟಾರ್ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬೈಕ್ ಗಳನ್ನು ಬಿಡುಗಡೆಗೊಳಿಸಿದ್ದು. ಯಮಹಾ ಎಫ್‍‍ಜೆಡ್‌ಎಸ್ – ಎಫ್‍ಐ  ಸ್ಟ್ಯಾಂಡರ್ಡ್ ಮತ್ತು ಡಿಎಲ್‌ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಕಂಪೆನಿ ಹೇಳಿದೆ.

Advertisement

ಈ ಹೊಸ ಬೈಕಿನಲ್ಲಿ 149 cc ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,250 Rpm ನಲ್ಲಿ 12.2 Bhp ಮತ್ತು 5500 Rpm ನಲ್ಲಿ 13.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಅಂದಹಾಗೆ ಈ ಹೊಸ ಎಫ್‍‍ಜೆಡ್‌ಎಸ್-ಎಫ್‍ಐ ಸ್ಟ್ಯಾಂಡರ್ಡ್ ಬೈಕಿನ ಬೆಲೆಯು ರೂ.1,15,900 ಗಳಾದರೆ, ಎಫ್‍‍ಜೆಡ್‌ಎಸ್-ಎಫ್‍ಐ ಡಿಎಲ್‌ಎಕ್ಸ್ ಬೈಕಿನ ಬೆಲೆ ರೂ.1,18,900 ಗಳಾಗಿದೆ, ಈ ಎರಡು ಮಾದರಿಯ ಬೈಕ್ ಗಳು ಈ ತಿಂಗಳ ಎರಡನೇ ವಾರದಿಂದ ಎಲ್ಲಾ ಅಧಿಕೃತ ಯಮಹಾ ಶೋರೂಮ್ ಗಳಿಗೆ ಪ್ರವೇಶಿಸಲಿವೆಯಂತೆ.

2022ರ FZS-Fi ಬೆಲೆ ₹115,900 ಆಗಿದ್ದರೆ, ಹೊಸ FZS-Fi Dlx ಟ್ರಿಮ್‌ನ ಬೆಲೆ ₹118,900 (ಎರಡೂ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಆಗಿದೆ). ಹೊಸ FZS-Fi ಶ್ರೇಣಿಯನ್ನು ಅದರ ‘ದಿ ಕಾಲ್ ಆಫ್ ದಿ ಬ್ಲೂ’ ಉಪಕ್ರಮದ ಅಡಿಯಲ್ಲಿ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳುತ್ತದೆ.

ಹೊಸ ಎಫ್‍‍ಜೆಡ್‌ಎಸ್-ಎಫ್‍ಐ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಒಳಗೊಂಡಿದೆ. ಅದಲ್ಲದೆ ಬ್ರೇಕ್ ಬಗ್ಗೆ ಹೇಳಬೇಕಾದರೆ ಈ ಬೈಕಿನ ಎರಡು ಕಡೆಗಳಲ್ಲಿ ಸಿಂಗಲ್ ಡಿಸ್ಕ್‌ ಬ್ರೇಕ್ ಗಳನ್ನು ನೀಡಲಾಗಿದೆ, ಬೈಕಿನ ಹೊಸ ವಿನ್ಯಾಸದಲ್ಲಿ ಹೊಸ ಎಲ್‌ಇಡಿ ಟೈಲ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

Advertisement

ಅಲ್ಲದೆ ಮೆಟಾಲಿಕ್ ಬ್ಲ್ಯಾಕ್, ಮೆಟಾಲಿಕ್ ಡೀಪ್ ರೆಡ್ ಮತ್ತು ಸಾಲಿಡ್ ಗ್ರೇ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಡ್ಯುಯಲ್ ಟೋನ್ ಬಣ್ಣಗಳೊಂದಿಗೆ ಎರಡು ಹಂತದ ಸಿಂಗಲ್ ಸೀಟ್ ಅನ್ನು ಸಹ ಹೊಂದಿಕೊಂಡಿದೆ.

ಇದನ್ನೂ ಓದಿ : ಮೇಕೆದಾಟು ಹೆಸರಲ್ಲಿ ಮಂಕುಬೂದಿ ಎರಚಲು ಸಾಧ್ಯವಿಲ್ಲ : ಕಾಂಗ್ರೆಸ್ ವಿರುದ್ಧ ಯತ್ನಾಳ ಕಿಡಿ

 

Advertisement

Udayavani is now on Telegram. Click here to join our channel and stay updated with the latest news.

Next