Advertisement

ಬೆಂಗಳೂರು ಸೇರಿ ರಾಜ್ಯ ರಾಜಧಾನಿಗಳಲ್ಲಿ ಸಿದ್ಧತೆ ಪೂರ್ಣ: ಇಂದು ಪ್ರಥಮ ಪ್ರಜೆ ಆಯ್ಕೆ

08:26 AM Jul 18, 2022 | Team Udayavani |

ಹೊಸದಿಲ್ಲಿ/ಬೆಂಗಳೂರು: ರಾಷ್ಟ್ರಪತಿ ಸ್ಥಾನಕ್ಕೆ ಬಹು ನಿರೀಕ್ಷಿತ ಚುನಾವಣೆ ಸೋಮವಾರ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಕಣದಲ್ಲಿ ಇದ್ದಾರೆ. ಹೊಸದಿಲ್ಲಿಯ ಸಂಸತ್‌ ಭವನದಲ್ಲಿ ಮತ್ತು ಆಯಾ ರಾಜ್ಯಗಳ ರಾಜಧಾನಿ ಗಳಲ್ಲಿ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದರ ವರೆಗೆ ಮತದಾನ ನಡೆಯಲಿದೆ.

Advertisement

ಮೇಲ್ನೋಟದ ಮತ ಲೆಕ್ಕಾಚಾರ ನಡೆಸಿದರೆ ಮುರ್ಮು ಅವರಿಗೆ ಹೆಚ್ಚು ಮತಗಳು ಲಭ್ಯವಾಗಲಿವೆ. ಜು. 21ರಂದು ಮತಗಳ ಎಣಿಕೆ ನಡೆಯಲಿದೆ.

ಬಿಜೆಡಿ, ವೈಎಸ್‌ಆರ್‌ ಕಾಂಗ್ರೆಸ್‌, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್‌, ಜೆಎಂಎಂ, ಶಿರೋಮಣಿ ಅಕಾಲಿ ದಳ, ಶಿವಸೇನೆ ಈಗಾಗಲೇ ಮುರ್ಮು ಅವರಿಗೆ ಬೆಂಬಲ ನೀಡಿವೆ. ಹೀಗಾಗಿ ಮುರ್ಮು ಅವರಿಗೆ ಮೂರನೇ ಎರಡರಷ್ಟು ಮತಗಳು ಪ್ರಾಪ್ತವಾಗುವ ಸಾಧ್ಯತೆ ಇದೆ. ದ್ರೌಪದಿ ಮುರ್ಮು ಆಯ್ಕೆಯಾದರೆ ದೇಶದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ಮಹಿಳಾ ರಾಷ್ಟ್ರಪತಿ ಮತ್ತು ಪ್ರತಿಭಾ ಪಾಟೀಲ್‌ ಬಳಿಕ 2ನೇ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ.

ಎನ್‌ಡಿಎ ಸಭೆ
ರಾಷ್ಟ್ರಪತಿ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ರವಿವಾರ ಎನ್‌ಡಿಎ ಸಂಸದರ ಸಭೆ ನಡೆಯಿತು. ಈ ಸಂದರ್ಭ ದಲ್ಲಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಗೌರ ವಿಸಲಾಯಿತು. ಲೋಕಜನಶಕ್ತಿ ಪಕ್ಷ (ರಾಮ್‌ ವಿಲಾಸ್‌ ಪಾಸ್ವಾನ್‌)ದ ಚಿರಾಗ್‌ ಪಾಸ್ವಾನ್‌ ಅವರು ಭಾಗವಹಿ ಸಿದ್ದು ವಿಶೇಷವಾಗಿತ್ತು. ಜೆಡಿಯು ಅಧ್ಯಕ್ಷ ಮತ್ತು ಬಿಹಾರಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪ್ರಬಲ ಪ್ರತಿರೋಧದ ಹಿನ್ನೆಲೆಯಲ್ಲಿ ಇದುವರೆಗಿನ ಎನ್‌ಡಿಎ ಸಭೆಗಳಲ್ಲಿ ಚಿರಾಗ್‌ ಪಾಸ್ವಾನ್‌ ಭಾಗವಹಿಸಿರಲಿಲ್ಲ.

ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಯಾಗಿ ನಾನು ನಾಮಪತ್ರ ಸಲ್ಲಿಸಿದ ಬಳಿಕ ಬುಡಕಟ್ಟು ಜನಾಂಗ ದವರು, ಮಹಿಳೆಯರಲ್ಲಿ ಉತ್ಸಾಹ ಹೆಚ್ಚಿದೆ. ದೇಶದಲ್ಲಿ 700 ಸಮು ದಾಯಗಳಿಗೆ ಸೇರಿದ 10 ಕೋಟಿ ಮಂದಿ ಬುಡಕಟ್ಟು ಜನಾಂಗದವರು ಇದ್ದಾರೆ.
– ದ್ರೌಪದಿ ಮುರ್ಮು, ಎನ್‌ಡಿಎ ಅಭ್ಯರ್ಥಿ

Advertisement

ಜು. 21ಮತ ಎಣಿಕೆ, ಫ‌ಲಿತಾಂಶ ಪ್ರಕಟ
ಮತದಾನ ಸಮಯಜು. 18, ಬೆ. 10 ರಿಂದ ಸಂಜೆ 5

Advertisement

Udayavani is now on Telegram. Click here to join our channel and stay updated with the latest news.

Next