Advertisement

ಹುಂಡೈ ಟ್ಯೂಸಾನ್‌ 2022ರ ‌ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ

03:15 PM Aug 12, 2022 | Team Udayavani |

ಬೆಂಗಳೂರು: ಹುಂಡೈ ಇಂಡಿಯಾ ಕಂಪನಿಯು ಪ್ರೀಮಿಯಂ ಎಸ್‌ಯುವಿ ಮಾದರಿಯ ಟ್ಯೂಸಾನ್‌ 2022ರ(Hyundai Tucson SUV)ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ 27.69 ಲಕ್ಷ ರೂ. ಬೆಲೆ ಹೊಂದಿದೆ.

Advertisement

ಹುಂಡೈ ಇಂಡಿಯಾ ಸಿಇಒ ಅನ್ಸೂ ಕಿಮ್‌ ಮಾತನಾಡಿ, ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಪ್ರೀಮಿಯಂ ಎಸ್‌ಯುವಿ ಫ್ಲ್ಯಾಗ್‌ಶಿಪ್‌ ಮಾರಾಟ ಹೊಂದಿರುವ ಹುಂಡೈ ಕಂಪನಿಯು ಟ್ಯೂಸಾನ್‌ ಹೊಸ ಮಾದರಿಯನ್ನು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಪ್ಲ್ಯಾಟಿನಂ ಮತ್ತು ಸಿಗ್ನೆಚರ್‌ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಾದರಿಯು ಮೊದಲ ಬಾರಿಗೆ ಎಡಿಎಎಸ್‌ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ ಎಂದು ಹೇಳಿದರು.

ಟ್ಯೂಸಾನ್‌ ಕಾರಿನ ಪ್ಲ್ಯಾಟಿನಂ ಮತ್ತು ಸಿಗ್ನೆಚರ್‌ ವೆರಿಯೆಂಟ್‌ಗಳಲ್ಲಿ ಕಂಪನಿಯು ಪ್ಲ್ಯಾಟಿನಂ ವೆರಿಯೆಂಟ್‌ ಬೆಲೆ ಮಾತ್ರ ಘೋಷಣೆ ಮಾಡಿದೆ. 125 ನಗರಗಳಲ್ಲಿ ಇರುವ 246 ಮಳಿಗೆಗಳಲ್ಲಿ ವಾಹನ ಕಾಯ್ದಿರಿಸಬಹುದು. ಪ್ಲಾಟಿನಂ ಆವೃತ್ತಿಯಲ್ಲಿ ಗ್ರಾಹಕರಿಗೆ 45ಕ್ಕೂ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಇರಲಿವೆ. ಸಿಗ್ನೆಚರ್‌ ಆವೃತ್ತಿಯಲ್ಲಿ 60ಕ್ಕೂ ಅಧಿಕ ಸುರಕ್ಷತಾ ವೈಶಿಷ್ಟ್ಯಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next