Advertisement

ಕಾಮನ್‌ವೆಲ್ತ್‌ ಗೇಮ್ಸ್‌: ಉದ್ದಜಿಗಿತ: ಮುರಳಿ ಶ್ರೀಶಂಕರ್‌, ಯಾಹಿಯ ಫೈನಲ್‌ಗೆ

06:42 PM Aug 02, 2022 | Team Udayavani |

ಬರ್ಮಿಂಗ್‌ಹ್ಯಾಮ್‌:ರಾಷ್ಟ್ರೀಯ ದಾಖಲೆ ಹೊಂದಿರುವ ಮುರಳಿ ಶ್ರೀಶಂಕರ್‌, ಮೊಹಮ್ಮದ್‌ ಅನೀಸ್‌ ಯಾಹಿಯ ಕಾಮನ್‌ವೆಲ್ತ್‌ ಗೇಮ್ಸ್‌ ಉದ್ದಜಿಗಿತದಲ್ಲಿ ಫೈನಲ್‌ಗೇರಿದ್ದಾರೆ.

Advertisement

23 ವರ್ಷದ ಶ್ರೀಶಂಕರ್‌ ನೇರವಾಗಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಮೊದಲಸುತ್ತಿನಲ್ಲೇ 8.05 ಮೀಟರ್‌ ಜಿಗಿದು ಅಗ್ರಸ್ಥಾನಿಯಾದರು. ಹಾಗೆಯೇ ಸಹಜವಾಗಿ ಗುಂಪು “ಎ’ನಿಂದ ಅಂತಿಮಸುತ್ತಿಗೆ ನೆಗೆದರು.

ಅವರು ತಮ್ಮ ಈ ಸಾಧನೆಗೆ ಬಹಳ ಯತ್ನಗಳನ್ನೇನು ಮಾಡಲಿಲ್ಲ. ಒಂದೇ ನೆಗೆತಕ್ಕೆ ಅಂತಿಮ ಸುತ್ತಿಗೇರಿದರು. ಅವರು ಇತ್ತೀಚೆಗೆ ಮುಕ್ತಾಯವಾದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಅವರ ಹಿಂದಿನ ಶ್ರೇಷ್ಠ ಸಾಧನೆ 8.36 ಮೀ.

ಇನ್ನು ಮೊಹಮ್ಮದ್‌ ಅನೀಸ್‌ ಯಾಹಿಯ ಬಿ ಗುಂಪಿನ ಅರ್ಹತಾಸುತ್ತಿನಲ್ಲಿ 7.68 ಮೀ. ದೂರ ನೆಗೆದು, 3ನೇ ಸ್ಥಾನಿಯಾದರು. ಇವರು 8 ಮೀ.ಗಿಂತ ಕಡಿಮೆ ದೂರ ನೆಗೆದರೂ, 12 ಗರಿಷ್ಠ ದೂರದ ಸಾಧಕರ ಪೈಕಿ ಒಬ್ಬರಾಗಿದ್ದರಿಂದ ಅಂತಿಮಸುತ್ತಿಗೇರಿದರು. ಇದರ ಅಂತಿಮ ಪಂದ್ಯ ಆ.4ಕ್ಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next