Advertisement

ರೋಡಿಗಿಳಿದ 3ನೇ ತಲೆಮಾರಿನ ಹಯಬುಸಾ ಬೈಕ್ : ಇದರ ಬೆಲೆ, ಫೀಚರ್ ಬಗ್ಗೆ ಇಲ್ಲಿದೆ ಮಹಿತಿ

01:53 PM May 01, 2021 | Team Udayavani |

ನವದೆಹಲಿ : ಭಾರತದಲ್ಲಿ ಇಲ್ಲಿಯವರೆಗೆ ಎರಡನೇ ತಲೆಮಾರಿನ ಹಯಬುಸಾ ಬೈಕ್ ಗಳನ್ನು ಸಿದ್ಧ ಮಾಡಿದ್ದ ಸುಜುಕಿ ಕಂಪನಿಯು ಇದೀಗ ಮೂರನೇ ತಲೆಮಾರಿನ ಬೈಕ್ ಅನ್ನು ಸಿದ್ಧ ಮಾಡಿದೆ. ಇದರ ಎಕ್ಸ್ ಶೋರೂಮ್ ಬೆಲೆ ಬೆಲೆ ಬರೋಬ್ಬರಿ 16.40 ಲಕ್ಷ ರೂಪಾಯಿ.

Advertisement

ಈ ಹಿಂದೆ ಮಾರಾಟ ಮಾಡುತ್ತಿದ್ದ ಎರಡನೇ ತಲೆಮಾರಿನ ಹಯಬುಸಾ ಬೈಕ್  ಬೆಲೆ ಆಗ 13.75 ಲಕ್ಷ ರೂಪಾಯಿಯಾಗಿತ್ತು. ಆದರೆ, ಬಿಎಸ್ 6 ನಿಯಮಗಳ ಹಿನ್ನೆಲೆಯಲ್ಲಿ ಕಂಪನಿ ಈ ಬೈಕ್ ಮಾರಾಟ ನಿಲ್ಲಿಸಿತ್ತು. ಇದೀಗ ಮೂರನೇ ತಲೆಮಾರಿನೊಂದಿಗೆ ಹಯಬುಸಾ ಸ್ಪೋರ್ಟ್ಸ್ ಬೈಕ್ ಅನ್ನ ಕಂಪನಿ ಮತ್ತೆ ಭಾರತೀಯ ಮಾರುಕಟ್ಟೆ ಇಳಿಸಿದೆ.

 ಟ್ವಿನ್ ಸ್ಪಾರ್ ಫ್ರೇಮ್‌ : ಈ ಹಿಂದಿನ ಮಾಡೆಲ್ ಗಳಲ್ಲಿ ಇದ್ದ ಕೆಲವೊಂದು ಫೀಚರ್ ಗಳಲ್ಲಿ ಕೆಲವೊಂದನ್ನು ಹಾಗೇ ಉಳಿಸಿಕೊಂಡಿದೆ.  ಈ ಬೈಕ್ ಕೂಡ ಟ್ವಿನ್ ಸ್ಪಾರ್ ಫ್ರೇಮ್‌ನಲ್ಲಿ ಬರುತ್ತದೆ. ಬೈಕ್ ಇನ್ನಷ್ಟು ತೀಕ್ಷ್ಣವಾಗಿ ಕಾಣುವಂತೆ ಮಾಡಲು ಕೆಲವು ವಿನ್ಯಾಸವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಬೈಕ್‌ನ ಮುಂಭಾಗದಲ್ಲಿ ಎಲ್ ಇಡಿ ಹೆಡ್‌ಲ್ಯಾಂಪ್ ಜೊತೆಗೆ ಆಂಗ್ರಿ ಲುಕ್ಕಿಂಗ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ.

ಮೂರನೇ ತಲೆಮಾರಿನ ಹಯಬುಸಾ 2 ಕೆ ಜಿ ಕಡಿಮೆ : ಇನ್ನು ಹೆಡ್‌ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌ಗಳ ಮಧ್ಯೆ ಇರುವ ಸ್ಕೂಪ್ಸ್ ವ್ಯತ್ಯಾಸವನ್ನು ಗಮನಿಸಬಹುದು. ಇದು ಬೈಕ್‌ನ ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತಿದೆ.ಈ ಹೊಸ ಹಯಬುಸಾ ಸ್ಪೋರ್ಟ್ಸ್ ಬೈಕ್‌ನಲ್ಲಿ ಅಳವಡಿಸಲಾಗಿರುವ ಎಕ್ಸಾಸ್ಟ್ ಈ ಹಿಂದಿನ ಮಾಡೆಲ್‌ ಗಿಂತಲೂ ತುಸು ಕಿರಿದಾಗಿದ್ದು, ಬೈಕ್‌ನ ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಇದು ನೆರವು ಒದಗಿಸಿದೆ. ಈ ಹಿಂದಿನ ಮಾಡೆಲ್‌ ಗಿಂತಲೂ ಈ ಮೂರನೇ ತಲೆಮಾರಿನ ಹಯಬುಸಾ 2 ಕೆ ಜಿ ಕಡಿಮೆ ತೂಗುತ್ತದೆ. ವೀಲ್‌ ಬೇಸ್ 1,480 ಮಿ.ಮೀ. ಇದ್ದು, ಆದರೆ ಹಳೆಯದಕ್ಕೆ ಹೋಲಿಸಿದರೆ ಬೈಕ್‌ನ ಹಿಂಬದಿಯು ವಿಭಾಗವು ಹೆಚ್ಚು ಉದ್ದವಾದ ವಿನ್ಯಾಸವನ್ನು ಹೊಂದಿದೆ.

ಟಿಎಫ್‌ಟಿ ಡಿಜಿಟಲ್ ಸ್ಕ್ರೀನ್‌ :  ಇನ್ನು ಹೊಸ ತಲೆಮಾರಿನ ಹಯಬುಸಾದಲ್ಲಿ ಅಳವಡಿಸಲಾಗಿರುವ ಕಾನ್ಸೂಲ್ ಕೂಡ ಹೆಚ್ಚು ಆಕರ್ಷಕವಾಗಿದೆ. ಮಧ್ಯೆದಲ್ಲಿ ಅನ್ಲಾಗ್ ಟಿಎಫ್‌ಟಿ ಡಿಜಿಟಲ್ ಸ್ಕ್ರೀನ್‌ ಒಳಗೊಂಡಿದೆ. ಸಿಕ್ಸ್ ಆಕ್ಸಿಸ್ ಐಎಂಯು, ಮೂರು ರೈಡಿಂಗ್ ಮೋಡ್‌ಗಳು, ಲಾಂಚ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಹಿಲ್ ಹೋಲ್ಡ್ ಅಸಿಸ್ಟ್, 10 ಲೇವಲ್ ಟ್ರಾಕ್ಸನ್ ಕಂಟ್ರೋಲ್ ಸಿಸ್ಟಮ್, 10 ಲೆವಲ್ ವ್ಹೀಲೀ ಕಂಟ್ರೋಲ್ ಸಿಸ್ಟಮ್, 3 ಲೆವಲ್ ಎಂಜಿನ್ ಬ್ರೆಕ್ ಕಂಟ್ರೋಲ್‌ ಸೇರಿದಂತೆ ಹಯಬಸಾ ಸಮಗ್ರ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಒಳಗೊಂಡಿದೆ.

Advertisement

ಸುಜುಕಿಯ ಕಂಪನಿ ಈ ಪ್ರೀಮಿಯಂ ಬೈಕ್‌ನ ಸವಾರರು ವೇಗ ಮಿತಿಯನ್ನು ಸಹ ಬಳಸಿಕೊಳ್ಳಬಹುದು, ಇದು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಬೈಕ್‌ ನ ಗರಿಷ್ಠ ವೇಗವನ್ನು ನಿಯಂತ್ರಿಸುತ್ತದೆ ಮತ್ತು ರಸ್ತೆಗಳಲ್ಲಿ ವೇಗ ಮಿತಿಗಳನ್ನು ಅನುಸರಿಸಲು ಅವಕಾಶ ನೀಡುತ್ತದೆ.

ಎಂಜಿನ್ ಬಗ್ಗೆ ಹೇಳುವುದಾದರೆ, ಹಯಬುಸಾ ಬಿಎಸ್ 6 ನಿಯಮಗಳನ್ನು ಒಳಗೊಂಡಿರುವ 1,340 ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಒಳಗೊಂಡಿದೆ. ಈ ಎಂಜಿನ್ ಲಿಕ್ವಿಡ್ ಕೂಲ್ಡ್, ಡಿಒಚ್‌ಸಿ ಎಂಜಿನ್ ಆಗಿದ್ದು, 190 ಎಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಹಿಂದಿನ ಮಾಡೆಲ್‌ಗೆ ಹೋಲಿಸಿದರೆ 7 ಎಚ್ ಪಿ ಕಡಿಮೆ ಶಕ್ತಿಯನ್ನು ಈ ಎಂಜಿನ್ ಉತ್ಪಾದಿಸುತ್ತದೆ.

ಎಂಜಿನ್ ಟಾರ್ಕ್ ಕೂಡ ಸ್ವಲ್ಪ ಕಡಿಮೆಯಾಗಿದೆ. ಈ ಹಿಂದಿನ ಮಾಡೆಲ್ ಎಂಜಿನ್‌ 155 ಎನ್ಎಂ ಟಾರ್ಕ್ ಉತ್ಪಾದಿಸುತ್ತಿದ್ದರೆ ಈ ಹೊಸ ಮಾಡೆಲ್ ಎಂಜಿನ್ 150 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ, ಈ ಹೊಸ ಬೈಕ್‌ನಲ್ಲಿ ಕಂಪನಿ ಯಾವುದೇ ರೀತಿಯ ಟರ್ಬೊ ಚಾರ್ಜಿಂಗ್ ಅಥವಾ ಸೂಪರ್‌ಚಾರ್ಜಿಂಗ್ ಫೀಚರ್ ಅನ್ನು ಅಳವಡಿಸಿಲ್ಲ. ಈ ಬೈಕ್ ಪ್ರತಿ ಗಂಟೆಗೆ 300 ಕಿ ಮೀ ವೇಗವನ್ನು ಪಡೆಯಬಲ್ಲದು. ಅಷ್ಟು ಶಕ್ತಿಶಾಲಿಯಾದ ಎಂಜಿನ್ ಅನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next