Advertisement

2021: ಹೊಸ ವರುಷ …ಹೊಸ ಹರುಷ…ಬದುಕಿನ ಹೊಸ ಪುಟದ ಆರಂಭ

06:30 PM Dec 30, 2020 | Team Udayavani |

‘ಹೊಸ’ ಎಂಬ ಪದವೊಂದೆ ಸಾಕು ಮನವನ್ನು ಉತ್ಸಾಹದ ಕಡಲಲ್ಲಿ ತೇಲಿಸಲು. ಅದರಲ್ಲೂ ಹೊಸ ವರುಷ ಎಂದಾಕ್ಷಣ ನೋವು – ಗದ್ದಲ ಗಳನ್ನೆಲ್ಲಾ ಮರೆತು ಬಾಳಿನ ಅಧ್ಯಾಯದ ಹೊಸ ಪುಟ ತೆರೆಯುವ ತವಕ ಮೂಡುವುದು ಸಹಜ. ಒಂದೆಡೆ ಸಾಲು ಸಾಲು ನೆನಪುಗಳ ಸಿಹಿ ಖಾದ್ಯ ಉಣಬಡಿಸಿದ ವರ್ಷವ ಬೀಳ್ಕೊಡುವ ನೋವಾದರೆ , ಇನ್ನೊಂದೆಡೆ ನೂರಾರು ಮಹತ್ವಾಕಾಂಕ್ಷೆಗಳ ಹೊತ್ತು ಹೊಸ್ತಿಲಲಿ ನಿಂತಿಹ 2021ನ್ನು ಸ್ವಾಗತಿಸುವ ಸಂಭ್ರಮ.

Advertisement

2020ರಲ್ಲಿ ನಿರೀಕ್ಷೆಗಳಿಂತ ಹೆಚ್ಚಾಗಿ ಅನಿರೀಕ್ಷಿತಗಳನ್ನು ಮುಂದಿಟ್ಟ ಆ ವರುಷ ಲೋಕದ ಕೆಂಗಣ್ಣಿಗೆ ಗುರಿಯಾದರೂ ಸಹ ವಾಸ್ತವಿಕತೆಯ ಪಾಠಗಳನ್ನು ಅಚ್ಚುಕಟ್ಟಾಗಿ ಕಲಿಸಿತ್ತು. ಈ ಕಲಿತ ಪಾಠಗಳೇ ನನ್ನ ಹೊಸ ವರ್ಷದ ಮಾರ್ಗದರ್ಶಕ.  ನಮ್ಮನು ನಾವು ಪ್ರೀತಿಸಿ  ಹುರಿದುಂಬಿಸುವ, ಜಗವ ಮೆಚ್ಚಿಸಲು ಬಾಳದಿರುವ, ಮುನಿಸುಗಳ ಮರೆತು ಸಂಬಂಧಗಳ ಬಲಪಡಿಸುವ, ನಕಾರಾತ್ಮಕ ಭಾವನೆಗಳಿಂದ ದೂರ ಉಳಿಯುವ ವರುಷದ ಬಯಕೆಯಲ್ಲಿ ನಾನಿದ್ದೇನೆ.

ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ ಬದಲಾಗುವುದು ಕ್ಯಾಲೆಂಡರ್ ಮಾತ್ರವಾದರೂ ಸಹ, ನಾವು ಬದಲಾಯಿಸುವಂಥದ್ದು ಬಹಳಷ್ಟು ಇರುತ್ತದೆ. ಸಣ್ಣ ಪುಟ್ಟ ಬದಲಾವಣೆಗಳಿಂದ ಬಾಳು ಹಸನಾಗುತ್ತದೆ ಎಂದಾದರೆ, ಆ ಬದಲಾವಣೆಗಳಿಂದ ಹೆದರುವ ಅವಶ್ಯಕತೆಯೇ ಇಲ್ಲ. ಹೊಸ ಪುಸ್ತಕದಂತೆ ಕೈಸೇರಿದೆ 2021, ಯಾವ ರೀತಿಯಲ್ಲಿ ಈ ಪುಟಗಳ ತುಂಬಿಸುತ್ತೇವೆ ಎಂಬುದು ನಮ್ಮ ಕೈಯ್ಯಲಿದೆ.

ಹೊಸ ವರ್ಷದ ಶುಭಾಶಯಗಳು!

Advertisement

ಶಿವರಂಜನಿ

ದ್ವಿತೀಯ ಬಿಎಸ್ಸಿ

ಎಂಜಿಎಂ ಕಾಲೇಜು,ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next