Advertisement

ಕಸಾಪದ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ

10:58 PM Feb 16, 2023 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದೆ. 49 ವಿಭಾಗಗಳಲ್ಲಿ 53 ಕೃತಿಗಳು ಆಯ್ಕೆಯಾಗಿವೆ. ಈ ದತ್ತಿ ಪ್ರಶಸ್ತಿಗಳು 250 ರೂ.ಯಿಂದ 10 ಸಾವಿರ ರೂ.ವರೆಗೆ ನಗದು ಬಹುಮಾನ ಒಳಗೊಂಡಿವೆ.

Advertisement

ಮಾ. 12ರಂದು ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷತ್‌ನ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್‌ ಅಧ್ಯಕ್ಷ ಮಹೇಶ ಜೋಷಿ ತಿಳಿಸಿದ್ದಾರೆ.

ಪ್ರಮುಖ ದತ್ತಿ ಪ್ರಶಸ್ತಿಗಳ ಪಟ್ಟಿ:

ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್‌ ದತ್ತಿಗೆ ಮಂಗಳೂರಿನ ಮುರಳಿಮೋಹನ್‌ ಚೂಂತಾರು ಅವರ ಸಂಗಾತಿ ಕೃತಿ, ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಕಾಸರಗೋಡಿನ ರಾಜಶ್ರೀ ಟಿ. ರೈ ಪೆರ್ಲ ಅವರ ತುಳುನಾಡಿನ ಮೂರಿಗಳ ಆರಾಧನೆ ಕೃತಿ ಭಾಜನವಾಗಿದೆ.

ಜತೆಗೆ ಭಾರತಿ ಮೋಹನ ಕೋಟಿ ದತ್ತಿಗೆ ಕಾಸರಗೋಡಿನ ವಿಕ್ರಂ ಕಾಂತಿಕೆರೆ ಅವರ ಕಾವೇರಿ ತೀರದ ಪಯಣ ಕೃತಿ, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ| ಮದನಕೇಸರಿ ಜೈನ ದತ್ತಿಗೆ ತುಮಕೂರಿನ ಸಂತೋಷ್‌ ಕುಮಾರ್‌ ಅವರ ಆಪ್ತಮೀಮಾಂಸಾ (ದೇವಾಗಮ ಸ್ತೋತ್ರ) ಕೃತಿ ಆಯ್ಕೆ ಆಗಿದೆ. ಹಾಗೆಯೇ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿಗೆ ಹುಬ್ಬಳ್ಳಿಯ ಶಾಂತಿನಾಥ ಕೆ. ಹೋತಪೇಟಿ ಅವರ ಅನಾಸಕ್ತ ಮಹಾಯೋಗಿ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ 10 ಸಾವಿರ ರೂ.ನಗದು ಮತ್ತು ಪುರಸ್ಕಾರ ಒಳಗೊಂಡಿದೆ.

Advertisement

ಹಾಗೆಯೇ ವಸುದೇವ ಭೂಪಾಲಂ ದತ್ತಿಗೆ ದಕ್ಷಿಣ ಕನ್ನಡದ ಶ್ರೀಧರ ಎಚ್‌.ಜಿ. ಅವರ ಚಪಡ ಕಾದಂಬರಿ, ಬೆಳಗಾವಿಯ ಇಸ್ಮಾಯಿಲ್‌ ತಳಕಲ್‌ ಅವರ ಬೆತ್ತಲೆ ಸಂತ ಸಣ್ಣ ಕಥಾ ಸಂಕಲನ, ಧಾರವಾಡದ ವೈ.ಜಿ. ಭಗವತಿ ಅವರ ಮಕ್ಕಳು ಓದಿದ ಟೀಚರ್‌ ಡೈರಿ  ಹಾಗೂ ಬೆಂಗಳೂರಿನ ಕೆ. ಶ್ರೀನಿವಾಸ ರೆಡ್ಡಿ ಅವರ ಅಂತರಂಗ ಕೃತಿ ಭಾಜನವಾಗಿವೆ. ಈ ಪ್ರಶಸ್ತಿ ಕ್ರಮವಾಗಿ 5, 3 ಮತ್ತು 2 ಸಾವಿರ ರೂ.ನಗದು ಮತ್ತು ಪುರಸ್ಕಾರ ಒಳಗೊಂಡಿದೆ.

ದಿ.ಡಿ. ಮಾಣಿಕರಾವ್‌ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿಗೆ ದಕ್ಷಿಣ ಕನ್ನಡದ ನಿರ್ಮಲಾ ಸುರತ್ಕಲ್‌ ಅವರ ನಿತ್ಯಪುಷ್ಪ ಮತ್ತು ಗೂಗಲ್‌ ಗುರು ಕೃತಿ, ದಿ|ಡಾ| ಎ.ಎಸ್‌. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿಗೆ ಚಂದ್ರಶೇಖರ ದಾಮ್ಲೆ ಅವರ ನನ್ನ ಮಗಳು ತುಂಟಿ ಅಲ್ಲ ಕೃತಿ, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಗೆ ಗದಗದ ಪುಂಡಲೀಕ ಕಲ್ಲಿಗನೂರ ಅವರ ಮನೋಜನನಿ ಕೃತಿ, ಲಕ್ಷ್ಮೀ ದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿಗೆ ಲೇಖಕಿ ಕಾವ್ಯಾ ಕಡಮೆ ಅವರ ಮಾಕೋನ ಏಕಾಂತ ಕೃತಿಯನ್ನು ಆಯ್ಕೆ ಮಾಡಲಾಗಿದೆ.

ಪ್ರಕಾಶಕ ಆರ್‌.ಎನ್‌. ಹಬ್ಬು ದತ್ತಿ ಪ್ರಶಸ್ತಿಗೆ ಆಸ್ಟ್ರೇಲಿಯಾದ ಶ್ರೀಹರ್ಷ ಸಾಲಿಮಠ ಅವರ ಉದಕ ಉರಿದು ಕೃತಿ, ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿಗೆ ಬಾಗಲಕೋಟೆಯ ಸೋಮಲಿಂಗ ಗೆಣ್ಣೂರ ಅವರ ಅಂಬೇಡ್ಕರ್‌ ಮಾರ್ಗ ಕೃತಿ, ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿಗೆ ಬಳ್ಳಾರಿಯ ಸಿ.ಆರ್‌. ಗೋಪಾಲ್‌ ಅವರ ಸಾಮಾಜಿಕ ಕ್ರಿಯಾಚರಣೆ ಕೃತಿ ಆಯ್ಕೆಯಾಗಿದೆ.

ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿಗೆ ತುಮಕೂರಿನ ಸಿದ್ದಗಂಗಯ್ಯ ಹೊಲತಾಳು ಅವರ ಸಿಂಗಾರಿ ಕೃತಿ, ಗೌರುಭಟ್‌ ದತ್ತಿ ಪ್ರಶಸ್ತಿಗೆ ಬೆಂಗಳೂರಿನ ಕ್ಷಮಾ ವಿ. ಭಾನುಪ್ರಕಾಶ್‌ ಅವರ ವಿಜ್ಞಾನ ಲೋಕದ ಜ್ಞಾನಕುಸುಮಗಳು ಕೃತಿ, ಶ್ರೀಮತಿ ಗಂಗಮ್ಮ ಶ್ರೀ ಟಿ. ಶಿವಣ್ಣ ದತ್ತಿ ಪ್ರಶಸ್ತಿಗೆ ವಿಜಯಪುರದ ಶಂಕರ ಬೈಚಬಾಳ ಅವರ ಕನ್ನಡದ ಮಠ, ಪುಸ್ತಕದ ಜಗದ್ಗುರು ಡಾ| ತೋಂಟದ ಸಿದ್ದಲಿಂಗ ಶ್ರೀಗಳು ಕೃತಿ ಭಾಜನವಾಗಿದೆ.

ಡಾ| ಹಾ.ಮಾ.ನಾಯಕ ಸ್ಮಾರಕ ದತ್ತಿ ಪ್ರಶಸ್ತಿಗೆ ಬಾಗಲಕೋಟೆಯ ಅಶೋಕ ನರೋಡೆ ಅವರ ಮಹಾಕಾವ್ಯಗಳಲ್ಲಿ ಬುದ್ಧ ಕೃತಿ ಹಾಗೂ ಡಾ| ವೀಣಾ ಶಾಂತೇಶ್ವರ ದತ್ತಿಗೆ ದಕ್ಷಿಣ ಕನ್ನಡದ ದೀಪಾ ಫಡೆR ಅವರ ಮುಂದಣ ಹೆಜ್ಜೆ ಕೃತಿ ಆಯ್ಕೆಯಾಗಿದೆ.ಈ ಪ್ರಶಸ್ತಿಗಳು ತಲಾ 5 ಸಾವಿರ ರೂ. ನಗದು ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next