Advertisement

ಸಾಹಿತ್ಯ ನೊಬೆಲ್‌ ರದ್ದು?

09:20 AM May 01, 2018 | Karthik A |

ಸ್ಟಾಕ್‌ ಹೋಂ: ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರ ರಾಜೀನಾಮೆ ಪರ್ವದಿಂದಾಗಿ, ಪ್ರಸಕ್ತ ವರ್ಷದ ಸಾಹಿತ್ಯ ನೊಬೆಲ್‌ ಪಾರಿತೋಷಕ ಗೌರವ ರದ್ದಾಗುವ ಭೀತಿ ಆವರಿಸಿದೆ. ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿದ್ದ ಕಟಾರಿನಾ ಫ್ರಾಸ್ಟೆಡ್ಸನ್‌ ಪತಿ ಜೀನ್‌ ಕ್ಲಾಡ್‌ ಅರ್ನಾಲ್ಟ್, ನೊಬೆಲ್‌ ಸಂಸ್ಥೆಗೆ ಸೇರಿದ ಕಚೇರಿಯಲ್ಲಿ 18 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕಟಾರಿನಾ ತಮ್ಮ ನೊಬೆಲ್‌ ಸದಸ್ಯತ್ವ ತೊರೆದಿದ್ದಾರೆ. ಇದರ ಬೆನ್ನಲ್ಲೇ ಇತರ ಸದಸ್ಯರೂ ರಾಜಿನಾಮೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next