ಹುಬ್ಬಳ್ಳಿ: ನಗರದ ಲೇಕ್ ವ್ಯೂ ಹೊಂಡಾ ಶೋರೂಮ್‌ನಲ್ಲಿ ನೂತನ ಹೊಂಡಾ ಸಿಟಿ 2017 ಕಾರನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೇಕ್‌ವ್ಯೂ ಹೊಂಡಾ ಶೋರೂಮ್ ನಿರ್ದೇಶಕ ಸುಜಯ ಜವಳಿ ಮಾತನಾಡಿ, ಫೆಬ್ರವರಿ 4ರಂದು ಹೊಂಡಾ ಸಿಟಿ 2017 ವಿನೂತನ ಕಾರನ್ನು ದೇಶಾದ್ಯಂತ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.
ನಮ್ಮಲ್ಲಿ ಈಗಾಗಲೇ 10 ಕಾರ್‌ಗಳ ಬುಕ್ಕಿಂಗ್ ಆಗಿದೆ ಎಂದರು. ಹೊಸ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಇದರಲ್ಲಿ ನೂತನ ಎಲ್‌ಇಡಿ ಪ್ಯಾಕೇಜ್, ಸೇμr ಪ್ಯಾಕೇಜ್ ಹಾಗೂ ಹೊಸ ಎವಿಎನ್ ವ್ಯವಸ್ಥೆಯಿದೆ. ಹೊಂಡಾ ಸಿಟಿ ಕಾರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಹೊಸ ಕಾರಿನಲ್ಲಿ ಲಕ್ಷರಿಗೆ ಆದ್ಯತೆ ನೀಡಲಾಗಿದೆ. ಉನ್ನತ ಸ್ತರದ ಜನರ ಬಯಕೆಗಳನ್ನು ಪರಿಗಣಿಸಿ ಕಾರು ರೂಪಿಸಲಾಗಿದೆ. ಇದಕ್ಕೆ ಡೈಮಂಡ್ ಕಟ್ ಅಲಾಯ್ ವ್ಹೀಲ್‌ಗಳಿದ್ದು, ಡ್ಯಾಶಿಂಗ್ ಅಟೋ ಫೋಲ್ಡಿಂಗ್ ಡೋರ್ ಮಿರರ್ ಹಾಗೂ ಶಾರ್ಕ್ μನ್ ಆಂಟೇನಾ ಇದೆ. ಕಾರಿಗೆ ಎಲ್ ಇಡಿ ಹೆಡ್ ಲ್ಯಾಂಪ್, ಕಾಂಬಿ ಲ್ಯಾಂಪ್, ಸ್ಟಾಪ್ ಲ್ಯಾಂಪ್, ಫಾಗ್ ಲೈಟ್ ಜೋಡಿಸಲಾಗಿದೆ ಎಂದು ಹೇಳಿದರು.
ಕಾರಿನಲ್ಲಿ ಕ್ಯಾಬಿನ್‌ಗೆ ವಿಶಾಲ ಜಾಗವಿದೆ. ಆ್ಯಂಪಲ್ ಲೆಗ್ ರೂಮ್ ಇದ್ದು, ಸುಖಾಸೀನವಾಗಿ ಪ್ರಯಾಣಿಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರಿಗೆ 1.5ಎಲ್ ಐ-ವಿಟೆಕ್ ಎಂಜಿನ್ ಜೋಡಿಸಲಾಗಿದ್ದು, ಅಟೋಮ್ಯಾಟಿಕ್ ಗೇರ್ ಸೌಕರ್ಯವಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಒಟ್ಟು 6 ಏರ್ ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.
ಹೊಂಡಾ ಸಿಟಿ 2017 ಕಾರಿನಲ್ಲಿನ ಮಲ್ಟಿವ್ಯೂ ರೇರ್ ಪಾರ್ಕಿಂಗ್ ಕ್ಯಾಮೆರಾದಿಂದ ಸಾðಚ್‌ಗಳು ಹಾಗೂ ಡೆಂಟ್ಸ್‌ಗಳಾಗದಂತೆ ತಡೆಯಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಲೇಕ್ ವ್ಯೂ ಹೊಂಡಾ ಶೋರೂಮ್ ಸಿಎಂಡಿ ಸುಹಾಸ ಜವಳಿ, ವಿನಯ ಜವಳಿ, ಅಜಿತ್ ಜವಳಿ, ಎನ್.ಪಿ. ಜವಳಿ ಇದ್ದರು.