ನವದೆಹಲಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಲೋಕಹಿತ್ ಪಕ್ಷ(HLP)ದ ಮುಖ್ಯಸ್ಥ, ಶಾಸಕ ಗೋಪಾಲ್ ಕಾಂಡ ಅವರನ್ನು ದೆಹಲಿ ಕೋರ್ಟ್ ಮಂಗಳವಾರ (ಜುಲೈ 25) ಖುಲಾಸೆಗೊಳಿಸಿದೆ.
ಇದನ್ನೂ ಓದಿ:Agra: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ
ಕಾಂಡ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೀತಿಕಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು, ತನಗೆ ಗೋಪಾಲ್ ಕಾಂಡ ಕಿರುಕುಳ ನೀಡುತ್ತಿದ್ದ ಕಾರಣದಿಂದ ತಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಗೀತಿಕಾ ಆತ್ಮಹತ್ಯೆ ನೋಟ್ ನಲ್ಲಿ ಆರೋಪಿಸಿದ್ದಳು.
11 ವರ್ಷಗಳ ಹಿಂದಿನ ಪ್ರಕರಣ:
2012ರ ಆಗಸ್ಟ್ 5ರಂದು ಎಂಡಿಎಲ್ ಆರ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದ ಗೀತಿಕಾ ಶರ್ಮಾ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಪ್ರಕರಣದಲ್ಲಿ ಹರ್ಯಾಣ ಮಾಜಿ ಸಚಿವ, ಸಿರ್ಸಾ ಶಾಸಕ ಗೋಪಾಲ್ ಕಾಂಡ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಡಿ ದೂರು ದಾಖಲಿಸಲಾಗಿತ್ತು.
ಗೀತಿಕಾ ಶರ್ಮಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಗೋಪಾಲ್ ಕಾಂಡ ಮತ್ತು ಸಹ ಆರೋಪಿ ಅರುಣ್ ಚಾದಹ್ ಅವರನ್ನು ದೆಹಲಿ ಕೋರ್ಟ್ ನ ವಿಶೇಷ ಜಡ್ಜ್ ವಿಕಾಸ್ ಧುಲ್ ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
ಗೀತಿಕಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೋಪಾಲ್ ಕಾಂಡ ವಿರುದ್ಧದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದರಿಂದ ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಲಾಗಿದೆ ಎಂದು ಜಡ್ಜ್ ದುಲ್ ತೀರ್ಪಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.