ನವದೆಹಲಿ: 2,000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಆರ್‌ಬಿಐ ಹಿಂಪಡೆಯುತ್ತಿದ್ದಂತೆ ಜನರು ತಮ್ಮ ಬಳಿ ಇರುವ ನೋಟುಗಳನ್ನು ಬದಲಾಯಿಸಲು ಮುಗಿಬಿದ್ದಿದ್ದಾರೆ.
ಇದಕ್ಕಾಗಿ ಮಾವಿನ ಹಣ್ಣಿನಿಂದ ಹಿಡಿದು ಐಷಾರಾಮಿ ವಸ್ತುಗಳ ಖರೀದಿವರೆಗೆ ಎಲ್ಲೆಡೆ 2 ಸಾವಿರದ ನೋಟುಗಳನ್ನೇ ನೀಡಲು ಮುಂದಾಗಿದ್ದಾರೆ. 2016ರಲ್ಲಿ ನೋಟ್‌ಬ್ಯಾನ್ ಆದಾಗ ನೋಟು ಬದಲಾವಣೆಗಾಗಿ ಜನರು ಬ್ಯಾಂಕ್‌ಗಳ ಮುಂದೆ ಸಾಲು ನಿಂತಿದ್ದು ಇನ್ನೂ ಕಣ್ಣ ಮುಂದಿದೆ. ಈ ಹಿನ್ನೆಲೆ ಈ ಬಾರಿಯೂ ಅಂಥ ಪರಿಸ್ಥಿತಿ ಬರಬಾರದೆಂದು ಅಂಗಡಿಗಳಿಗೆ, ಮಳಿಗೆಗಳಲ್ಲಿ ವ್ಯಾಪಾರ ಮಾಡುವಾಗ ಜನರು ಇದೇ 2 ಸಾವಿರದ ನೋಟುಗಳನ್ನ ನೀಡುತ್ತಿದ್ದಾರೆ.
ಇತ್ತ ಅಂಗಡಿ ಮಾಲೀಕರು ಕೂಡ 2 ಸಾವಿರದ ನೋಟುಗಳನ್ನು ಪಡೆದುಕೊಳ್ಳುತ್ತಿದ್ದು, ಜನರಿಗೆ ಹಣ ಬದಲಾಯಿಸುವುದು ಮುಖ್ಯ, ನಮಗೆ ವ್ಯಾಪಾರ ಮುಖ್ಯ. 2 ಸಾವಿರದ ನೋಟು ಪಡೆಯುತ್ತೇವೆ ಎನ್ನುವ ಕಾರಣಕ್ಕೆ ವ್ಯಾಪಾರ ಹೆಚ್ಚಾಗಿದೆ. ಬ್ಯಾಂಕ್‌ಗಳಲ್ಲಿ ನೋಟು ಬದಲಾವಣೆಗೆ ಸೆ.30ರವರೆಗೆ ಇನ್ನೂ ಸಮಯವಿರುವ ಕಾರಣ ನೋಟಿನ ಬಗ್ಗೆ ಭಯವಿಲ್ಲ ಎಂದು ವ್ಯಾಪಾರಸ್ಥರು ಹೇಳಿಕೊಂಡಿದ್ದಾರೆ.