Advertisement

ಕಡಲ ತೀರದ 200 ಟನ್‌ ತ್ಯಾಜ್ಯ ಸಂಗ್ರಹ : ಉಡುಪಿ ಸೇರಿ ಕರಾವಳಿ ಪ್ರಾಂತದೆಲ್ಲೆಡೆ ಅಭಿಯಾನ

12:00 AM Jul 26, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಜು.5ರಿಂದ ಒಟ್ಟು 75 ದಿನಗಳ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಆಂದೋಲನ ನಡೆಸಲಾಗುತ್ತಿದ್ದು, ಅದರಲ್ಲಿ ಈಗಾಗಲೇ ಕಡಲ ತೀರದಿಂದ 200 ಟನ್‌ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ ಎಂದು ಭೂವಿಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಸೋಮವಾರ ತಿಳಿಸಿದ್ದಾರೆ.

Advertisement

ಕರ್ನಾಟಕದ ಉಡುಪಿ ಮತ್ತು ಮಂಗಳೂರು, ಕೇರಳದ ಮಂಜೇಶ್ವರ ಮತ್ತು ತಿರುವನಂತಪುರ ಸೇರಿ ಒಟ್ಟು 24 ರಾಜ್ಯಗಳ ವಿವಿಧ ಕರಾವಳಿ ನಗರಗಳಲ್ಲಿ ಈ ಸ್ವಚ್ಛತಾ ಆಂದೋಲನ ನಡೆಸಲಾಗಿದೆ.

7500 ಕಿ.ಮೀ ಕಡಲ ತೀರದ ತ್ಯಾಜ್ಯ ಸಂಗ್ರಹಣೆಗೆ 7,500ಕ್ಕೂ ಅಧಿಕ ಸ್ವಯಂ ಸೇವಕರು ಮುಂದೆ ಬಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸೆ.17ರವರೆಗೆ ನಡೆಯಲಿರುವ ಈ “ಸ್ವತ್ಛ ಸಾಗರ, ಸುರಕ್ಷಿತ ಸಾಗರ’ ಆಂದೋಲನಕ್ಕೆ ಎಲ್ಲ ಎನ್‌ಜಿಒಗಳು, ಯುವ ಸಂಘಟನೆಗಳು, ಸರ್ಕಾರಿ ಸಂಘಟನೆಗಳು ಕೈ ಜೋಡಿಸಬೇಕೆಂದು ಸಚಿವ ಜಿತೇಂದ್ರ ಸಿಂಗ್‌ ಕರೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next