Advertisement

ಜಗ್ಗೇಶ್‌ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್‌ ಖುಷಿ

12:12 PM Aug 19, 2022 | Team Udayavani |

“ನೀರ್‌ ದೋಸೆ’ಯಶಸ್ಸಿನ ಬಳಿಕ ಜಗ್ಗೇಶ್‌ ಹಾಗೂ ವಿಜಯ ಪ್ರಸಾದ್‌ ಜೋಡಿ “ತೋತಾಪುರಿ’ ಮೂಲಕ ಕಮಾಲ್‌ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಇದಾಗಿದ್ದು, ಕಾಮಿಡಿ ಜೊತೆಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್‌ ಮೂಲಕ ಝಲಕ್‌ ತೋರಿಸಿದ್ದಾರೆ. ಇದಕ್ಕೆ ಸಖತ್‌ ರೆಸ್ಪಾನ್ಸ್‌ ಪಡೆದುಕೊಂಡ ಖುಷಿ ಚಿತ್ರತಂಡಕ್ಕಿದೆ.

Advertisement

ಇದರ ಜತೆಗೆ ಮತ್ತೊಂದು ಖುಷಿಯ ವಿಚಾರ ತೋತಾಪುರಿ ಟೀಂನಿಂದ ಹೊರಬಿದ್ದಿದೆ. ಈ ಸಿನಿಮಾದ “ಬಾಗ್ಲು ತೆಗಿ ಮೇರಿ ಜಾನ್‌…’ ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ದೊಡ್ಡವರಿಂದ ಚಿಕ್ಕವರವರೆಗೂ, ದೇಶ-ವಿದೇಶದವರೂ ಈ ಹಾಡಿಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ ತೋತಾಪುರಿ ಹಾಡಿನದ್ದೇ ಕಲರವ. ಹಾಡನ್ನು ರೀ ಕ್ರಿಯೇಟ್‌ ಮಾಡಿದವರೆಷ್ಟೋ, ರೀಲ್ಸ್‌, ಡಾನ್ಸ್‌ ಮಾಡಿದವರು ಸಾವಿರಾರು ಮಂದಿ. ಇವೆಲ್ಲದರ ಜತೆಗೆ “ಬಾಗ್ಲು ತೆಗಿ ಮೇರಿ ಜಾನ್‌’ 200 ಮಿಲಿಯನ್‌ ಹಿಟ್ಸ್‌ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್‌ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್‌ ಸೋಸಲೆ ಹಾಗೂ ಅನನ್ಯ ಭಟ್‌ ದನಿಗೂಡಿಸಿದ್ದಾರೆ. ಕಲರ್‌ಫ‌ುಲ್‌ ಸೆಟ್‌ನಲ್ಲಿ ನೂರಾರು ಡಾನ್ಸರ್‌ ಗಳೊಂದಿಗೆ ಶೂಟ್‌ ಮಾಡಿರುವ ಈ ಹಾಡು ಮೋನಿಫಿಕ್ಸ್‌ ಆಡಿಯೋಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ರಿಲೀಸ್‌ ಆಗಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿದೆ.

ತೋತಾಪುರಿ ಎರಡು ಭಾಗಗಳಲ್ಲಿ ತೆರೆ ಕಾಣಲಿದ್ದು, ಮೊದಲಿಗೆ ಭಾಗ 1 ಸೆಪ್ಟೆಂಬರ್‌ 30ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಮೋನಿಫಿಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕೆ.ಎ.ಸುರೇಶ್‌ ನಿರ್ಮಿಸಿದ್ದಾರೆ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next