ನವದೆಹಲಿ: ವಿವಾದಗಳಿಂದಲೇ ಸುದ್ದಿಯಾದ “ದಿ ಕೇರಳ ಸ್ಟೋರಿ” ಸಿನಿಮಾ, ಬಿಡುಗಡೆಯಾದ 12 ದಿನದಲ್ಲೇ 150 ಕೋಟಿ ರೂ. ಗಡಿ ದಾಟಿದೆ. ಅಲ್ಲದೇ, ವರ್ಷದ ಅತ್ಯುತ್ತಮ ಗಳಿಕೆಯ ಸಿನಿಮಾಗಳ ಸಾಲಿನಲ್ಲಿ ಸೇರ್ಪಡೆಗೊಂಡಿದೆ. ಅದೀಗ 200 ಕೋಟಿ ರೂ.ಗಳತ್ತ ಮುನ್ನುಗ್ಗಿದ್ದು ಕಾಶ್ಮೀರ್ ಫೈಲ್ಸ್ ಗಳಿಕೆಯನ್ನು ಮೀರಿಸುತ್ತಾ ಎಂಬ ಕುತೂಹಲ ಹುಟ್ಟಿಸಿದೆ. ಸುದೀಪೊ¤ ಸೇನ್ ನಿರ್ದೇಶನದ, ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಕೇರಳದಲ್ಲಿನ ಮತಾಂತರ ಕಥಾಹಂದರವನ್ನು ಹೊಂದಿದ್ದ ಕಾರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನವನ್ನು ನಿರ್ಬಂಧಿಸಿದರೆ, ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡದಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯತಿ ನೀಡಿ ಪ್ರೋತ್ಸಾಹಿಸಲಾಗಿತ್ತು. ಒಟ್ಟಾರೆ ಚರ್ಚೆಗಳ ನಡುವೆಯೇ ದಿ ಕೇರಳ ಸ್ಟೋರಿ ಸಕ್ಸಸ್ನ ನಾಗಲೋಟ ಮುಂದುವರಿಸಿದೆ.
Advertisement
200 ಕೋಟಿಯತ್ತ “The Kerala Story”!
09:43 PM May 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.