Advertisement

ಅಫ್ಶಿನ್‌ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನಿಸ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ದಾಖಲು

09:57 PM Dec 15, 2022 | Team Udayavani |

ತೆಹ್ರಾನ್‌: ಇರಾನ್‌ನ 20 ವರ್ಷದ ಯುವಕನೊಬ್ಬ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Advertisement

ಉತ್ತರ ಇರಾನ್‌ನ ಬುಕಾನ್‌ ಕೌಂಟಿಯ ಗ್ರಾಮವೊಂದರಲ್ಲಿ ನೆಲೆಸಿರುವ ಅಫ್ಶಿನ್‌ ಎಸ್ಮೇಲ್‌ ಘದರ್ಜಾಡೆ ಅವರು ಕೇವಲ 2 ಅಡಿ 1 ಇಂಚು(65.24 ಸೆಂ.ಮೀ.) ಎತ್ತರವಿದ್ದು, ಪ್ರಪಂಚದಲ್ಲಿ ಜೀವಿತವಿರುವ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನಿಸ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಇವರ ಹೆಸರು ದಾಖಲಾಗಿದೆ.

ಅತ್ಯಂತ ಕಡಿಮೆ ಎತ್ತರ ಇರುವ ಕಾರಣ ಮೊಬೈಲ್‌ ಪೋನ್‌ ಬಳಸಲು ಸಹ ಅಫ್ಶಿನ್‌ ಕಷ್ಟ ಪಡುತ್ತಾರೆ. ಅಲ್ಲದೇ ದೈಹಿಕವಾಗಿ ದುರ್ಬಲ ಇರುವ ಕಾರಣ ಶಾಲೆಗೆ ಕೂಡ ಇವರು ಹೋಗಿಲ್ಲ. ” ಎಂದರೆ ಹೆತ್ತವರಿಗೆ ನೆರವಾಗುವುದೇ ನನ್ನ ಏಕೈಕ ಗುರಿ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next