Advertisement
ಮಂಗಳವಾರ ಬೆಳಗ್ಗೆ ಸಿಡ್ನಿಯಲ್ಲಿ ವಿಶ್ವಕಪ್ ವೇಳಾಪಟ್ಟಿ ಐಸಿಸಿ ಬಿಡುಗಡೆಗೊಳಿಸಿತು. ಇದೇ ಮೊದಲ ಬಾರಿಗೆ ಮಹಿಳಾ ಮತ್ತು ಪುರುಷರ ಟಿ-20 ವಿಶ್ವಕಪ್ ಒಂದೇ ವರ್ಷ ಒಂದೇ ದೇಶದಲ್ಲಿ ನಡೆಯಲಿದೆ. 2020ರ ಫೆಬ್ರವರಿ 21ರಿಂದ ಮಾರ್ಚ್ 8 ರವರೆಗೆ ಮಹಿಳಾ ವಿಶ್ವಕಪ್ ನಡೆದರೆ, ಅದೇ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15 ರವರೆಗೆ ಪುರುಷರ ವಿಶ್ವಕಪ್ ನಡೆಯಲಿದೆ. * ಡಿಸೆಂಬರ್ 31, 2018ಕ್ಕೆ ಸರಿಯಾಗಿ ಐಸಿಸಿ ಟಿ-20 ರ‍್ಯಾಂಕಿಂಗ್ ನ ಅಗ್ರ 8 ತಂಡಗಳು ವಿಶ್ವಕಪ್ ಗೆ ನೇರ ಪ್ರವೇಶ ಪಡೆದಿವೆ. ಪಾಕಿಸ್ತಾನ ಮತ್ತು ಭಾರತ ಮೊದಲೆರಡು ಸ್ಥಾನದಲ್ಲಿರುವುದರಿಂದ ವಿಶ್ವಕಪ್ ನಲ್ಲಿ ಬೇರೆ ಬೇರೆ ಗುಂಪಿನಲ್ಲಿ ಸೆಣೆಸಲಿವೆ.
* ಎರಡೂ ವಿಶ್ವಕಪ್ ಫೈನಲ್ ಪಂದ್ಯಗಳು ಮೆಲ್ಬೋರ್ನ್ ನಲ್ಲಿ ನಡೆಯಲಿದೆ.
* ಮಾರ್ಚ್ 8 ರಂದು ಮಹಿಳಾ ಫೈನಲ್ ನಡೆದರೆ, ನವೆಂಬರ್ 15 ರಂದು ಪುರುಷರ ಫೈನಲ್ ಪಂದ್ಯ ನಡೆಯಲಿದೆ.
* ಮಹಿಳಾ ಫೈನಲ್ ಪಂದ್ಯ ಹೊಸ ದಾಖಲೆ ಬರೆಯುವ ಸಾಧ್ಯತೆಯಿದೆ. ಎಲ್ಲಾ ಮಹಿಳಾ ಕ್ರೀಡೆಯ ಫೈನಲ್ ಗಿಂತ ಹೆಚ್ಚು ಜನರು ಈ ಫೈನಲ್ ವೀಕ್ಷಿಸುವ ಸಾಧ್ಯತೆ ಇದೆ.
* ಮಹಿಳಾ ಕೂಟದ ಮೊದಲ ಪಂದ್ಯ ಸಿಡ್ನಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
* ಪುರುಷರ ವಿಶ್ವಕಪ್ ನ ಮೊದಲ ಪಂದ್ಯ ಕೂಡಾ ಸಿಡ್ನಿಯಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ತಂಡ ಟಿ-20 ಅಗ್ರ ಕ್ರಮಾಂಕದ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.
* ಭಾರತ ಪುರುಷರ ತಂಡ ತನ್ನ ಮೊದಲ ಪಂದ್ಯವನ್ನು ದ.ಆಪ್ರಿಕಾ ವಿರುದ್ಧ ಆಡಲಿದೆ. ಇದು ಅಕ್ಟೋಬರ್ 24ರಂದು ಪರ್ತ್ ನಲ್ಲಿ ನಡೆಯಲಿದೆ.
* ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭರವಸೆ ಮೂಡಿಸುತ್ತಿರುವ ಅಫಘಾನಿಸ್ತಾನ ತಂಡ ಕೂಟಕ್ಕೆ ನೇರ ಅರ್ಹತೆ ಪಡೆದಿದೆ.
Related Articles
ಗ್ರೂಪ್ ‘ಎ’ : ಪಾಕಿಸ್ತಾನ, ಆಸ್ಟ್ರೇಲಿಯಾ , ವೆಸ್ಟ್ ಇಂಡೀಸ್, ನ್ಯೂಜಿಲ್ಯಾಂಡ್, 2 ಅರ್ಹತಾ ತಂಡಗಳು.
ಗ್ರೂಪ್ ‘ಬಿ’ : ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫಘಾನಿಸ್ತಾನ, 2 ಅರ್ಹತಾ ತಂಡಗಳು.
Advertisement
ಮಹಿಳಾ ಗುಂಪುಗ್ರೂಪ್ ‘ಎ’; ಆಸ್ಟ್ರೇಲಿಯಾ , ನ್ಯೂಜಿಲ್ಯಾಂಡ್, ಭಾರತ, ಶ್ರೀಲಂಕಾ, ಒಂದು ಅರ್ಹತಾ ತಂಡ.
ಗ್ರೂಪ್ ‘ಬಿ’: ಇಂಗ್ಲೆಂಡ್, ವೆಸ್ಟ್ ಇಂಡೀಸ್, ದ.ಆಫ್ರಿಕಾ, ಪಾಕಿಸ್ತಾನ, ಒಂದು ಅರ್ಹತಾ ತಂಡ.