ಸಾಂತಾಕ್ರೂಸ್: ಅಮೆರಿಕದ ಪಶ್ಚಿಮ ಕರಾವಳಿ ಬಿರುಗಾಳಿ ಸಹಿತ ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದೆ. ಕ್ಯಾಲಿಫೋರ್ನಿಯಾದಲ್ಲಿ ಮತ್ತೂಂದು ಸುತ್ತಿನ ಪ್ರಾಕೃತಿಕ ವಿಕೋಪ ಎದುರಾಗಿದ್ದು, 20 ಮಂದಿ ಸಾವಿಗೀಡಾಗಿದ್ದಾರೆ. 33 ದಶಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ.
ಪಶ್ಚಿಮ ಕರಾವಳಿಯ ರಸ್ತೆಗಳೆಲ್ಲ ನದಿಗಳಾಗಿ ಬದಲಾಗಿದ್ದು, ಎಲ್ಲೆಡೆ ಕೆಸರು ತುಂಬಿಕೊಂಡಿದೆ. ಸಿಂಕ್‌ಹೋಲ್‌ಗಳು ರಸ್ತೆಗಳಲ್ಲಿ ನಿಂತಿದ್ದ ಕಾರುಗಳನ್ನು ನುಂಗುತ್ತಿವೆ. ಪ್ರವಾಹದಿಂದ ಹಲವಾರು ಕಾರುಗಳು ಕೊಚ್ಚಿಹೋಗಿದ್ದು, ಮರಗಳು ಧರೆಗುರುಳಿವೆ. ಮನೆಗಳ ಛಾವಣಿಗಳೆಲ್ಲ ಗಾಳಿಯ ತೀವ್ರತೆಗೆ ಹಾರಿ ಹೋಗಿವೆ. ಮುಂದಿನ ವಾರವೂ ಮಳೆ, ಗಾಳಿ ಇದೇ ರೀತಿ ಮುಂದುವರಿಯಲಿದೆ.
ಬ್ರಿಟನ್ ರಾಜಕುಮಾರ ಹ್ಯಾರಿ, ಖ್ಯಾತ ನಿರೂಪಕಿ ಓಪ್ರಾ ವಿನ್‌ಫ್ರಿ ಸಹಿತ ಗಣ್ಯರು ವಾಸವಿರುವಂಥ ಮಾಂಟೆಸಿಟೋ ನಗರದಲ್ಲೂ ಮಳೆ ಅಬ್ಬರಿಸುತ್ತಿದ್ದು, ಕೂಡಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
ಕ್ಯಾಲಿಫೋರ್ನಿಯಾದ 58 ಕೌಂಟಿಗಳನ್ನು “ವಿಪತ್ತು ವಲಯ’ಗಳೆಂದು ಘೋಷಿಸಲಾಗಿದೆ. ಈಗ ಆಗಿರುವ ಹಾನಿ ಯನ್ನು ಸರಿಪಡಿಸಲು 1 ಶತಕೋಟಿ ಡಾಲರ್‌ಗೂ ಅಧಿಕ ಹಣ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
Related Articles
ಕಾರು, ಟ್ರಕ್‌ಗಳನ್ನು ನುಂಗುತ್ತಿರುವ ಗುಂಡಿಗಳು!:
ಇತ್ತ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮಾರ್ಗ ಮಧ್ಯೆ ಏಕಾಏಕಿ ಗುಂಡಿ ಯೊಂದು ಸೃಷ್ಟಿಯಾಗಿ, ಬೈಕ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದರೆ, ಅತ್ತ ಅಮೆರಿಕದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಲಾಸ್ ಏಂಜಲೀಸ್‌ನ ಚಾಟ್ಸ್‌ವರ್ತ್ ವಲಯದಲ್ಲಿ ರಸ್ತೆಯೊಂದು ಹಠಾತ್ತನೆ ಕುಸಿದು, ಮಧ್ಯಭಾಗದಲ್ಲಿ ದೊಡ್ಡ ಗುಂಡಿ ಯೊಂದು ಬಿದ್ದಿದೆ. 40 ಅಡಿ ಆಳದ ಗುಂಡಿಗೆ ಪಿಕಪ್ ಟ್ರಕ್ ಸಹಿತ ಕೆಲವು ವಾಹನಗಳು ಬಿದ್ದಿರುವ ಬಗ್ಗೆಯೂ ವರದಿಯಾಗಿದೆ. ಬುಧವಾರ ರಾತ್ರಿ ತಾಯಿ- ಮಗಳು ಸಂಚರಿಸುತ್ತಿದ್ದ ಕಾರು ಗುಂಡಿಯೊಳಗೆ ಬಿದ್ದಿದ್ದು, ಇಬ್ಬರನ್ನೂ ರಕ್ಷಿಸಲಾಗಿದೆ.