ಡಿ. 9ರಂದು ಸಂಜೆ ಈ ಕುರಿತು ಆದೇಶ ಹೊರಡಿಸಿದ ಆರ್ಥಿಕ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್. ಲತಾ ಅವರು ವೇತನ ನೀಡಲು ಸೂಚಿಸುವ ಮೂಲಕ ರಾಜ್ಯದ 208 ಮಂದಿ ದತ್ತಾಂಶಕಾರರಿಗೆ ಕಳೆದ 20 ತಿಂಗಳಿನಿಂದ ಬಾಕಿಯಾಗಿದ್ದ ವೇತನ ವನ್ನು ದೊರೆಯುವಂತೆ ಮಾಡಿದ್ದಾರೆ.
Advertisement
ಆದೇಶ ಮಧ್ಯಾಹ್ನ ಉಪಾಹಾರ ಯೋಜನೆ ಯಡಿ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಹಂತದಲ್ಲಿ 32 ಡಾಟಾ ಎಂಟ್ರಿ ಆಪರೇಟರ್‌ಗಳು, ತಾಲೂಕು ಹಂತದಲ್ಲಿ 176 ಡಾಟಾ ಎಂಟ್ರಿ ಆಪರೇಟರ್‌ಗಳ ಸೇವೆಯನ್ನು ಎಂಎಂಇ ಕಾರ್ಯಕ್ರಮದಡಿ ಪಡೆಯಲು ಕೇಂದ್ರ ಸರಕಾರ ಬೆಂಬಲಿಸುವವರೆಗೆ ಮಾತ್ರ ಮುಂದುವರಿಸತಕ್ಕದ್ದು. ಇಷ್ಟೂ ಜನರಿಗೆ ಕೇಂದ್ರ ಸರಕಾರದಿಂದ ಎಂಎಂಇ ಕಾರ್ಯಕ್ರಮದಡಿ ಬಿಡುಗಡೆ ಮಾಡಲಾಗುವ ಅನುದಾನ ದಿಂದಲೇ ಸಂಪೂರ್ಣ ವೇತನ ಭರಿಸತಕ್ಕದ್ದು. ಈ ಉದ್ದೇಶಕ್ಕಾಗಿ ವೇತನ ಪಾವತಿಗಾಗಿ ರಾಜ್ಯದ ಪಾಲಿನ ಅನುದಾನವಾಗಿ ಯಾವುದೇ ಕಾರಣಕ್ಕೆ ಕೋರತಕ್ಕದ್ದಲ್ಲ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ವೇತನ ಬಿಡುಗಡೆಗೆ ಆದೇಶ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರ ಬಿಡುಗಡೆ ಮಾಡುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ನೀಡುವುದಕ್ಕೆ ಇಷ್ಟು ಸಮಯ ಕಾಲಹರಣ ಮಾಡಿದ್ದು ಯಾಕೆ? ರಾಜ್ಯದ ಪಾಲು ನಯಾಪೈಸೆ ಇಲ್ಲದೇ ಇದ್ದರೂ ಕಳೆದ 20 ತಿಂಗಳಿನಿಂದ ವೇತನ ತಡೆ ಹಿಡಿದದ್ದು ಯಾಕೆ? ಕೇಂದ್ರ ಬಿಡುಗಡೆ ಮಾಡಿದ ಮೇಲೂ ತಡೆ ಹಿಡಿದದ್ದು ಯಾಕೆ? ಹೀಗೆ ಪ್ರಶ್ನೆಗಳ ಸುರಿಮಳೆಯಿದ್ದು ಶಿಕ್ಷಣ ಇಲಾಖೆಯ ಈ ವಿಭಾಗದ ಉನ್ನತ ಅಧಿಕಾರಿಗಳ ಮೇಲೆ ಸಂಶಯದ ಬೊಟ್ಟು ತೋರುವಂತೆ ಮಾಡಿದೆ. ಮೂಲಗಳ ಪ್ರಕಾರ ಒಂದು ಬಾರಿಯ ವೇತನ 42 ಲಕ್ಷ ರೂ.ಗಳಾಗುತ್ತವೆ. ದೊಡ್ಡ ಮೊತ್ತ ಬಿಡುಗಡೆ ಮಾಡಲು ಪ್ರತಿಫಲ ಅಪೇಕ್ಷಿಸಿ ಹೀಗೆ ಅಮಾಯಕರ ಹೊಟ್ಟೆಗೆ ಹೊಡೆಯಲಾಗಿದೆ ಎಂಬಆರೋಪವೂ ಇದೆ. ಅದಲ್ಲದಿದ್ದರೆ ಕೇಂದ್ರದಿಂದ ಬಂದ ಅನುದಾನವನ್ನು ಕಾರಣವಿನಾ ನೌಕರರಿಗೆ ನೀಡದೇ ವಿಳಂಬಿಸಿ ವಂಚಿಸಿದವರ ಮೇಲೆ ಸರಕಾರ ಕಾನೂನು ಕ್ರಮವಾದರೂ ಕೈಗೊಳ್ಳಬೇಕಿದೆ. ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್ ಗೋಲ್ಡ್ ಮೆಡಲ್ 2022 ಗೌರವ
Related Articles
Advertisement