Advertisement

ವಾಲ್ಮೀಕಿ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಮಂಜೂರು

01:14 PM Nov 12, 2019 | Suhan S |

ಹಿರೇಕೆರೂರ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ 75 ಲಕ್ಷ ರೂ. ಹಾಗೂ ಮಾಸೂರು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು 20 ಲಕ್ಷ ರೂ. ಮಂಜೂರಾಗಿದೆ ಎಂದು ಮಾಜಿ ಶಾಸಕ ಬಿ.ಸಿ.ಪಾಟೀಲ ತಿಳಿಸಿದರು.

Advertisement

ಪಟ್ಟಣದ ತಮ್ಮ ನಿವಾಸದಲ್ಲಿ ಮಾಸೂರು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ಮಂಜೂರಾತಿ ಪತ್ರವನ್ನು ರಟ್ಟಿಹಳ್ಳಿ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ತಳವಾರ ಅವರಿಗೆ ವಿತರಿಸಿ ಮಾತನಾಡಿದರು. ಸಮುದಾಯ ಭವನ ನಿರ್ಮಿಸಲು ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ನಿಯಮಾವಳಿಯಂತೆ ಮಾಸೂರು ಗ್ರಾಮಕ್ಕೆ 20 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಈ ಹಣ ಸಮುದಾಯ ಭವನ ನಿರ್ಮಾಣಕ್ಕೆ ಸಾಲುವುದಿಲ್ಲ, ಹಾಗಾಗಿ ಇನ್ನೂ 30 ಲಕ್ಷ ರೂ. ಅನುದಾನ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಟ್ಟಿಹಳ್ಳಿ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ತಳವಾರ, ಶಿವಶಂಕರ ಹುಲ್ಲತ್ತಿ, ಹನುಮಂತಪ್ಪ ಗಿರಿಯಣ್ಣನವರ, ವಾಸು ಮಕರಿ, ಮಾರುತೆಪ್ಪ ಗಿರಿಯಣ್ಣನವರ, ಬಸಪ್ಪ ಮಟ್ಟಿಮನಿ, ಬಸವರಾಜ ಗಿರಿಯಣ್ಣನವರ, ಚೌಡಪ್ಪ ಸಾವಜ್ಜಿ, ಅಶೋಕ ನಾಗೇನಹಳ್ಳಿ, ಬಸಣ್ಣ ಕಾಗೇರ, ಪ್ರವೀಣ ಹೊಳಬಸಣ್ಣನವರ, ರಾಜು ಸಿಂಧೋಳಿ, ರಾಮಪ್ಪ ಹಿತ್ತಲಮನಿ, ರಾಮಣ್ಣ ಹಳದಮ್ಮನವರ, ಪರಮೇಶಪ್ಪ ಕಳಗೊಂಡ, ಸಂತೋಷ ಹುಲ್ಲತ್ತಿ, ದೇವೇಂದ್ರಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next