Advertisement

ಹೆಚ್ಚು ಇಂಜಕ್ಷನ್ ವೆಲ್ ನಿರ್ಮಿಸುವ ಗ್ರಾ.ಪಂ.ಗೆ 20 ಲಕ್ಷ ಪ್ರಥಮ ಬಹುಮಾನ

01:26 PM Jun 16, 2021 | Team Udayavani |

ಹುಣಸೂರು : ತಾಲೂಕಿನಲ್ಲಿ ಜಲ ಮರುಹೂರಣ(ಇಂಜಕ್ಷನ್‌ವೆಲ್)ಕ್ಕೆ ಹೆಚ್ಚು ಆದ್ಯತೆ ನೀಡಿ ಸುಮಾರು ೨ಸಾವಿರ ವೆಲ್‌ಗಳನ್ನು ನಿರ್ಮಿಸುವ ಮೂಲಕ ಅಂತರ್ಜಲವೃದ್ದಿಸಲು ಆದ್ಯತೆ ನೀಡಬೇಕು.೨೦೨೨ ಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್‌ವೆಲ್ ನಿರ್ಮಿಸುವ ಗ್ರಾ.ಪಂ.ಗೆ ಶಾಸಕರ ನಿಧಿಯಿಂದ ೨೦ ಲಕ್ಷ ಬಹುಮಾನ ನೀಡುವುದಾಗಿ ಶಾಸಕ ಎಚ್.ಪಿ.ಮಂಜುನಾಥ್ ಪ್ರಕಟಿಸಿದರು.

Advertisement

ನಗರದ ತಾ.ಪಂ.ಸಭಾಂಗಣದಲ್ಲಿ ಶಾಲೆ,ಅಂಗನವಾಡಿ ಹಾಗೂ ಜಲಶಕ್ತಿ ಅಭಿಯಾನ್ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರುನರೇಗಾದಲ್ಲಿ ಜಿಲ್ಲೆಯಲ್ಲೇ ಹೆಚ್ಚು ಕಾಮಗಾರಿ ನಡೆಸಿ ಕಳೆದವರ್ಷ ೨೯.೨೫ ಕೋಟಿ ರೂ ಬಳಕೆ ಮಾಡಿ ಶೇ.೧೮೦ರಷ್ಟು ಸಾಧನೆ ಮಾಡಲಾಗಿದೆ ಎಂಬ ಇಓ ಗಿರೀಶ್‌ರ ಮಾಹಿತಿಗೆ ಅಭಿನಂದಿಸಿದ ಶಾಸಕರು ಮುಂದೆ ಜಲ ಮರು ಹೂರಣಕ್ಕೆ ನರೇಗಾ ಯೋಜನೆಯನ್ನು ಬಳಸಿಕೊಂಡು ಹೆಚ್ಚು ಕಾಮಗಾರಿ ನಡೆಸಿ, ನರೇಗಾ ಇಂಜಿನಿಯರ್‌ಗಳ ಬಗ್ಗೆ ಸಾಕಷ್ಟು ದೂರುಗಳಿದ್ದು, ಮುಂದೆ ದೂರು ಬಾರದಂತೆ ಕಾರ್ಯ ನಿರ್ವಹಿಸಿರೆಂದು ಎಚ್ಚರಿಸಿದರು.

ಜಲಶಕ್ತಿ ಯೋಜನೆಯಡಿ ಸಕಾಲದಲ್ಲಿ ನೀರು ಪೂರೈಸುವ ಸಂಬಂಧ ಮೊದಲ ಹಂತದ 28 ಗ್ರಾಮಗಳಲ್ಲಿ ಕಾಮಗಾರಿ ಮುಗಿಸಬೇಕೆಂದು ಇಂಜಿನಿಯರ್‌ಗೆ ಸೂಚಿಸಿದರು.

ಜಲಶಕ್ತಿ ಮರುಹೂರಣಕ್ಕೆ ಬಹಯುಮಾ:

ಜಲ ಮರುಹೂರಣ(ಇಂಜಕ್ಷನ್‌ವೆಲ್)ಯೋಜನೆಯಿಂದ ಕೃಷಿ ಭೂ ಪ್ರದೇಶ ಹೆಚ್ಚಲಿದ್ದು, ರೈತರ ಬದುಕು ಹಸನಾಗಲಿದೆ. ಹೀಗಾಗಿ ಈ ಯೋಜನೆಗೆ ಹೆಚ್ಚು ಆದ್ಯತೆ ನೀಡಿ ತಾಲೂಕಿನಾದ್ಯಂತ 2 ಸಾವಿರ ವೆಲ್‌ಗಳನ್ನು ನಿರ್ಮಿಸುವ ಮೂಲಕ ಅಂತರ್ಜಲವೃದ್ದಿಸಲು ಆದ್ಯತೆ ನೀಡಬೇಕು. 2022 ಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್‌ವೆಲ್ ನಿರ್ಮಿಸುವ ಗ್ರಾ.ಪಂ.ಗೆ ಶಾಸಕರ ನಿಧಿಯಿಂದ 21 ಲಕ್ಷ ಮುಂಬರುವ ಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್ ವೆಲ್ ನಿರ್ಮಿಸುವ ಗ್ರಾ.ಪಂ.ಗೆ ಶಾಸಕರ ನಿಧಿಯಿಂದ 20ಲಕ್ಷ(ಪ್ರಥಮ), 15ಲಕ್ಷ(ದ್ವಿತೀಯ), 10ಲಕ್ಷ (ತೃತೀಯ) ಬಹುಮಾನ ನೀಡಲಾಗುವುದೆಂದರು.

Advertisement

ಇಂಜಿನಿಯರ್‌ಗಳ ನಿರ್ಲಕ್ಷ್ಯ ಬೇಸರ:

ವಿವಿಧ ಯೋಜನೆಯಡಿ ಹಾಗೂ ಮಳೆ ಹಾನಿ ಅನುದಾನದಡಿ ತಾಲೂಕಿನ ಸುಮಾರು ೫೦ ಅಂಗನವಾಡಿ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಬಂದಿದ್ದರೂ ಕಟ್ಟಡಗಳು ಮೇಲೇಳದಿರುವುದು ಹಾಗೂ ದುರಸ್ತಿಯಾಗದಿರುವ ಬಗ್ಗೆ ಇಂಜಿನಿಯರ್‌ಗಳು ನೀಡಿದ ಸಬೂಬಿಗೆ ತೀವ್ರ ಬೇಸರ ವ್ಯಕ್ತಿಪಡಿಸಿ, ಕಂಟ್ರಾಕ್ಟರ್ ಪರ ಕೆಲಸ ಮಾಡುತ್ತಿದ್ದೀರಾ, ಕೆಲಸ ಮಾಡದೆ ಸುಮ್ಮನೆ ಸಂಬಳ ತಗೊತೀರಾ, ತಾಲೂಕನ್ನು ಹಾಳು ಮಾಡಲು ಬಂದಿದ್ದೀರಾ, ನಿಮಗೆ ಆತ್ಮತೃಪ್ತಿ ಎಂಬುದಿದೆಯಾ, ನಿಮ್ಮಿಂದಾಗಿ ತಾಲೂಕಿನ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಅವರ ಭವಿಷ್ಯಕ್ಕೆ ಕಲ್ಲು ಹಾಕುತ್ತಿದ್ದೀರಾ ಎಂದು ಎ.ಇ.ಇ.ಪ್ರಭಾಕರ್, ಇಂಜಿನಿಯರ್ ಕೊಂಡಯ್ಯ ಮತ್ತಿತರರನ್ನು ತರಾಟೆಗೊಳಪಡಿಸಿ, ಬರುವ ಜುಲೈ ಅಂತ್ಯದೊಳಗೆ ಕಾಮಗಾರಿ ಮುಗಿಸಿರಬೇಕೆಂದು ತಾಕೀತು ಮಾಡಿದರು. ಅಲ್ಲದೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ಲಕ್ಷ್ಯತೆ ಕುರಿತು ನೋಟೀಸ್ ನೀಡುವಂತೆ ತಾ.ಪಂ. ಇಓ. ಗಿರೀಶ್‌ರಿಗೆ ಹಾಗೂ ಇಂಜಿನಿಯರ್‌ಗಳ ಕ್ಷೇತ್ರ ಬದಲಾವಣೆ ಮಾಡಿ ಕೆಲಸ ಮಾಡುವ ಇಂಜಿನಿಯರ್‌ಗಳಿಗೆ ವಹಿಸುವಂತೆ ಎ.ಇ.ಇಗೆ ಸೂಚಿಸಿದರು.

ಇದೇವೇಳೆ ತಹಸೀಲ್ದಾರ್ ಬಸವರಾಜು ಮಳೆ ಹಾನಿಯ ಅನುದಾನವನ್ನು ಇನ್ನೂ ಬಳಕೆ ಮಾಡದಿರುವುದು ಸರಿಯಲ್ಲ, ಹೀಗೆ ಆದಲ್ಲಿ ಈಬಾರಿಯ ಮಳೆಯಲ್ಲಿ ಮತ್ತೆ ಹಾನಿಗೊಂಡಲ್ಲಿ ಅನುದಾನ ಸಿಗುವುದಿಲ್ಲವೆಂದು ಎಚ್ಚರಿಸಿದರು. ಸಭೆಯಲ್ಲಿ ಡಾ.ಕೀರ್ತಿಕುಮಾರ್, ಸಿ.ಡಿ.ಪಿ.ಓ.ರಶ್ಮಿ, ಸಹಾಯಕ ನಿರ್ದೇಶಕ ಲೋಕೇಶ್, ಬಿಇಓ ನಾಗರಾಜ್, ಎ.ಇ.ಇ.ಮಹೇಶ್ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next