Advertisement

GNSS: ಜಿಎನ್‌ಎಸ್‌ಎಸ್‌ ಇದ್ರೆ  ಹೆದ್ದಾರೀಲಿ 20 ಕಿ.ಮೀ.ಫ್ರೀ ಪ್ರಯಾಣ: ಕೇಂದ್ರ

11:25 PM Sep 10, 2024 | keerthan |

ನವದೆಹಲಿ: ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಮ್‌ (ಜಿಎನ್‌ಎಸ್‌ಎಸ್‌) ಅನ್ನು ಅಳವಡಿಕೆ ಮಾಡಿಕೊಂಡಿರುವ ಖಾಸಗಿ ವಾಹನಗಳಿಗೆ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ ವೇಗಳಲ್ಲಿ ದಿನಕ್ಕೆ 20 ಕಿ.ಮೀ.ವರೆಗೆ ಪ್ರಯಾಣಿಸಲು  ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Advertisement

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ, ಶಾಶ್ವತ ಸೇತುವೆ, ಬೈಪಾಸ್‌ ಅಥವಾ ಸುರಂಗವನ್ನು ಬಳಸುವ ರಾಷ್ಟ್ರೀಯ ಪರವಾನಗಿ ವಾಹನವನ್ನು ಹೊರತುಪಡಿಸಿ ಜಿಎನ್‌ಎಸ್‌ಎಸ್‌ ಅಳವಡಿಸಿಕೊಂಡು ವಾಹನವನ್ನು ಚಲಾವಣೆ ಮಾಡುವವರಿಗೆ ದಿನದಲ್ಲಿ ಪ್ರತಿ ದಿಕ್ಕಿನಲ್ಲಿ 20 ಕಿ.ಮೀ. ಪ್ರಯಾಣದವರೆಗೆ ಬಳಕೆದಾರರ ಶುಲ್ಕ ವಿಧಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next