Advertisement

ಪಾಕ್‌ ಜೈಲಿನಿಂದ 20 ಭಾರತೀಯ ಮೀನುಗಾರರ ಬಿಡುಗಡೆ : ಸೋಮವಾರ ಭಾರತಕ್ಕೆ ಹಸ್ತಾಂತರ

07:13 PM Nov 14, 2021 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದ ಜಲಪ್ರದೇಶದಲ್ಲಿ ಮೀನುಗಾರಿಕೆ ಮಾಡಿದ್ದಾರೆಂಬ ಆರೋಪದ ಮೇಲೆ ಪಾಕ್‌ ಜೈಲು ಸೇರಿದ್ದ 20 ಭಾರತೀಯ ಮೀನುಗಾರರನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.

Advertisement

“ಲಾಂಧಿ ಜಿಲ್ಲೆಯ ಕಾರಾಗೃಹದಲ್ಲಿದ್ದ ಅಪರಾಧಿಗಳು ನಾಲ್ಕು ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಳಿಸಿದ್ದಾರೆ. ಅವರನ್ನು ಇಧಿ ಟ್ರಸ್ಟ್‌ ಫೌಂಡೇಷನ್‌ ಹೆಸರಿನ ಎನ್‌ಜಿಒಗೆ ಒಪ್ಪಿಸಲಾಗಿದೆ.

ಸೋಮವಾರ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುವುದು.’ ಎಂದು ಜೈಲಧಿಕಾರಿ ಇರ್ಷಾದ್‌ ಶಾ ತಿಳಿಸಿದ್ದಾರೆ. ಇದೇ ಜೈಲಿನಲ್ಲಿ ಇನ್ನೂ 588 ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದು, ಸಿಂಧ್‌ ಗೃಹ ಇಲಾಖೆಯಿಂದ ಅನುಮತಿ ಸಿಕ್ಕ ನಂತರ ಅವರನ್ನು ಬಿಡುಗಡೆಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಪರಸ್ಪರ ಸಹಕಾರದೊಂದಿಗೆ ಕೆಲಸ:ದಕ್ಷಿಣ ವಲಯ ಪರಿಷತ್ತಿನ ಸಭೆಯಲ್ಲಿ ಸಿಎಂ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next