Advertisement

20 ಅಡಿ ಎತ್ತರದ ಶ್ರೀರಾಮ ಮೂರ್ತಿ ಮೆರವಣಿಗೆ

01:27 PM Sep 21, 2022 | Team Udayavani |

ಜೇವರ್ಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ಬಳಿ ಶ್ರೀರಾಮಸೇನೆ ತಾಲೂಕು ಘಟಕದ ವತಿಯಿಂದ ಪ್ರತಿಷ್ಠಾಪಿಸ ಲಾದ 21 ದಿನಗಳ ಗಣೇಶ ಶೋಭಾ ಯಾತ್ರೆ ಮಂಗಳವಾರ ಸಂಭ್ರಮದಿಂದ ಜರುಗಿತು.

Advertisement

ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲಾದ ಶ್ರೀಕರುಣೇಶ್ವರ ಮಠದ ಪೀಠಾ ಪತಿ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಸಂಜೆ 4ಗಂಟೆಗೆ ಭವ್ಯವಾದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ಮೆರವಣಿಗೆಯಲ್ಲಿ 20 ಅಡಿ ಎತ್ತರದ ಶ್ರೀರಾಮನ ಮೂರ್ತಿ ಹಾಗೂ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ, ಸರ್ದಾರ್‌ ವಲ್ಲಭಭಾಯ್‌ ಪಟೇಲ, ಭಾರತ ಮಾತೆ, ಮಹಾರಾಣಾ ಪ್ರತಾಪ, ಛತ್ರಪತಿ ಶಿವಾಜಿ ಮಹಾರಾಜ, ರಾಣಿ ಚನ್ನಮ್ಮ, ವಿಶ್ವಗುರು ಬಸವಣ್ಣನವರ ಸೇರಿದಂತೆ 50ಕ್ಕೂ ಹೆಚ್ಚು ಸಂತರ, ಹೋರಾಟಗಾರರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಪ್ರ

ಧಾನಿ ನರೇಂದ್ರ ಮೋದಿ ಅವರ ತದ್ರೂಪಿ ಕುಮಟಾದ ಸುನೀಲ ನಾಯಕ ಎಂಬುವರು ತೆರೆದ ಜೀಪ್‌ನಲ್ಲಿ ಮೋದಿ ಅವರಂತೆ ಜನರ ಕಡೆ ಕೈಬಿಸುವ ಮೂಲಕ ಗಮನ ಸೆಳೆದರು. ಎಪಿಎಂಸಿಯಿಂದ ಬಸವೇಶ್ವರ ಸರ್ಕಲ್‌ ಬಳಿ ಆಗಮಿಸಿದ ಶೋಭಾಯಾತ್ರೆಯನ್ನುದ್ದೇಶಿಸಿ ಆಂದೋಲಾ ಶ್ರೀಗಳು ಮಾತನಾಡಿದರು. ಬಸವೇಶ್ವರ ಸರ್ಕಲ್‌ದಿಂದ ಶಾಂತನಗರ, ಅಂಬೇಡ್ಕರ್‌ ಸರ್ಕಲ್‌, ಅಖಂಡೇಶ್ವರ ಸರ್ಕಲ್‌ನಿಂದ ಕಟ್ಟಿಸಂಗಾವಿ ಬಳಿಯ ಭೀಮಾನದಿಗೆ ತೆರಳಿ ಗಣೇಶ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯಲ್ಲಿ ಯುವಕರ ಕೈಯಲ್ಲಿ ವೀರಸಾವರ್ಕರ್‌, ಶ್ರೀರಾಮಾಂಜನೆಯ ಕೇಸರಿ ದ್ವಜಗಳು ರಾರಾಜಿಸಿದವು. ಡಿಜೆ ಹಾಡುಗಳಿಗೆ ಹಾಗೂ ಡೊಳ್ಳು ಕುಣಿತಕ್ಕೆ ಕುಣಿದು ಕುಪ್ಪಳಿಸಿದ ಯುವಕರು ಜೈ ಶ್ರೀರಾಮ ಘೋಷಣೆ ಕೂಗಿ ಸಂಭ್ರಮಿಸಿದರು. ಪಾಳಾದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ಶ್ರೀರಾಮ ಸೇನೆ ತಾಲೂಕು ಘಟಕದ ಅದ್ಯಕ್ಷ ನಿಂಗಣಗೌಡ ಪಾಟೀಲ ರಾಸಣಗಿ, ಮಲ್ಲಣಗೌಡ ಕಟ್ಟಿಸಂಗಾವಿ, ಸಿದ್ಧು ಪಾಟೀಲ ಮಾವನೂರ, ಗಿರೀಶ ಪಾಟೀಲ ರದ್ಧೇವಾಡಗಿ, ರೇವಣಸಿದ್ಧಪ್ಪ ಸಂಕಾಲಿ, ಸಾಗರ ಬಡಿಗೇರ, ಬಸವರಾಜ ಹುಗ್ಗಿ, ಶಿವಕುಮಾರ ಪಲ್ಲೆದ್‌, ಮಲ್ಕಣ ಪೂಜಾರಿ, ಸುನೀಲ ಗುತ್ತೇದಾರ, ಬಸವರಾಜ ರಾಸಣಗಿ, ನಾಗರಾಜ ರಾಸಣಗಿ, ಸುನೀಲ ಸ್ವಾಮಿ ಸೇರಿದಂತೆ ಬೀದರ, ಕಲಬುರಗಿ, ಯಾದಗಿರಿ ಸೇರಿದಂತೆ ಸಹಸ್ರಾರು ಜನರು ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next