Advertisement

ಚಿತ್ರದುರ್ಗಕ್ಕೆ ಕೋವಿಡ್ ಶಾಕ್ ; ಒಂದೇ ದಿನ 20 ಪಾಸಿಟಿವ್ ಪ್ರಕರಣ

01:48 PM May 26, 2020 | Hari Prasad |

ಚಿತ್ರದುರ್ಗ: ಕೋವಿಡ್ ಮಹಾಮಾರಿ ಕೋಟೆನಾಡಿಗೆ ಮಂಗಳವಾರ ಮರ್ಮಾಘಾತ ನೀಡಿದೆ.

Advertisement

ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ 20 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಇಂದು ಕೋವಿಡ್ ಸೋಂಕು ಪತ್ತೆಯಾದ ವ್ಯಕ್ತಿಗಳೆಲ್ಲರೂ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರಾಗಿದ್ದು ಇವರೆಲ್ಲರನ್ನೂ ಕ್ವಾರೆಂಟೈನ್ ನಲ್ಲಿಡಲಾಗಿತ್ತು.

ಉತ್ತರಪ್ರದೇಶ ಮೂಲದ ಈ ಕಾರ್ಮಿಕರು ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಮೇ. 20ರಂದು ಇವರನ್ನು ಚಳ್ಳಕೆರೆ ಬಳಿ ಚೆಕ್ ಪೋಸ್ಟ್ ನಲ್ಲಿ ತಡೆದು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.

ತಮಿಳುನಾಡಿನಿಂದ ಒಂದೇ ಲಾರಿಯಲ್ಲಿ 57 ಜನ ಕಾರ್ಮಿಕರು ತೆರಳುತ್ತಿದ್ದರು. ಈ ವೇಳೆ ಅವರೆಲ್ಲರನ್ನೂ ತಡೆದು‌ ಥರ್ಮಲ್ ಸ್ಕ್ರೀನಿಂಗ್ ಮಾಡಿ‌ ಬಳಿಕ ಕ್ವಾರಂಟೈನ್ ಮಾಡಲಾಗಿತ್ತು. ಆ ಬಳಿಕ ಅವರೆಲ್ಲರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.

Advertisement

ಈ ವರದಿಯಲ್ಲಿ 25 ವರ್ಷದ ಲಾರಿ ಚಾಲಕನಿಗೆ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹಾಗಾಗಿ ಆತನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಗಂಟಲು ಮಾದರಿಗಳನ್ನು ಪರೀಕ್ಷೆಗೆಂದು ಕಳುಹಿಸಿಕೊಡಲಾಗಿತ್ತು.

ಈ ರೀತಿಯಾಗಿ ಒಟ್ಟು 57 ಜನರ ಮಾದರಿ ಪರೀಕ್ಷೆಗೆ ಹೋಗಿತ್ತು, ಈ‌ ಪೈಕಿ ಮಂಗಳವಾರ 20 ಜನರಲ್ಲಿ ಕೋವಿಡ್ ಸೋಂಕು ಪಾಸಿಟಿವ್ ಬಂದಿರುವುದು ದುರ್ಗದ ಜನರಲ್ಲಿ ಆತಂಕ ಹೆಚ್ಚಿಸಿದೆ.

ಚಳ್ಳಕೆರೆಯ ಆದರ್ಶ ವಿದ್ಯಾಲಯ ಹಾಸ್ಟಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ಈ ಕಾರ್ಮಿಕರಲ್ಲಿ ಇದೀಗ ಕೋವಿಡ್ ಸೋಂಕು ಪೀಡಿತರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next