ನವದೆಹಲಿ: ದೇಶದೆಲ್ಲೆಡೆ ಸಂಚಲನ ಮೂಡಿಸಿದ ಶ್ರದ್ದಾ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ಹೊಸ ತಿರುವು ಪಡೆಯುತ್ತಿದ್ದು ಪ್ರಕರಣದ ವಿಚಾರಣೆ ವೇಳೆ ಹೊಸದೊಂದು ವಿಚಾರ ಬೆಳಕಿಗೆ ಬಂದಿದೆ.
2020ರಲ್ಲಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಫ್ತಾಬ್ ಪರಿಚಯವಾಗಿ ಬಳಿಕ ಆತ ಶ್ರದ್ದಾ ಉಳಿದುಕೊಂಡಿದ್ದ ಫ್ಲಾಟ್ ಗೆ ಆಗಾಗ ಬರುತ್ತಿದ್ದ ಎನ್ನಲಾಗಿದೆ, ಆದರೆ ಕೆಲವೊಂದು ಬಾರಿ ಅವರಿಬ್ಬರ ನಡುವೆ ಜಗಳಗಳು ನಡೆದಿದ್ದು ಕೆಲವೊಂದು ಬಾರಿ ವಿಪರೀತ ಮಟ್ಟಕ್ಕೆ ಹೋಗುತ್ತಿತ್ತು ಎನ್ನಲಾಗಿದೆ, ಈ ವೇಳೆ ಆರೋಪಿ ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಅಲ್ಲದೆ ದೇಹವನ್ನು ತುಂಡು ತುಂಡು ಮಾಡುವುದಾಗಿಯೂ ಬೆದರಿಸಿದ್ದ ಇದರಿಂದ ಹೆದರಿದ ಶ್ರದ್ದಾ ಮಹಾರಾಷ್ಟ್ರದ ಪಾಲ್ಘರ್‌ನ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಅಫ್ತಾಬ್ ವಿರುದ್ಧ ದೂರನ್ನೂ ನೀಡಿದ್ದರು, ಘಟನೆಗೆ ಸಂಬಂಧಿಸಿ ಅಫ್ತಾಬ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ ಆದರೆ ವಿಚಾರ ಅಫ್ತಾಬ್ ಮನೆಯವರಿಗೆ ಗೊತ್ತಾಗಿ ಶ್ರದ್ಧಾಳ ಬಳಿ ದೂರು ಹಿಂಪಡೆಯುವಂತೆ ಮನವೊಲಿಸಿದ್ದರು, ಅಫ್ತಾಬ್ ಪೋಷಕರ ಮನವೊಲಿಕೆಗೆ ಕರಗಿದ ಶ್ರದ್ದಾ ತನ್ನ ದೂರನ್ನು ವಾಪಾಸ್ ಪಡೆದುಕೊಂಡಿದ್ದರು.
ಇದೇ ಈಕೆಯ ಪಾಲಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ, ಅಫ್ತಾಬ್ ಪೋಷಕರ ಮಾತಿಗೆ ಬೆಲೆ ಕೊಟ್ಟು ಆತ ನೀಡುತ್ತಿದ್ದ ಹಿಂಸೆಯನ್ನು ತಾಳಿಕೊಂಡು ಕೊನೆಗೆ ಆತ ಎರಡು ವರ್ಷದ ಹಿಂದೆ ಹೇಗೆ ಬೆದರಿಕೆ ಹಾಕಿದ್ದಾನಾ ಅದೇ ರೀತಿಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿದ್ದಾನೆ.
ಒಂದು ವೇಳೆ ಶ್ರದ್ದಾ ಎರಡು ವರ್ಷದ ಹಿಂದೆ ನೀಡಿದ ದೂರು ಹಿಂಪಡೆಯದೇ ಇದ್ದಿದ್ದರೆ, ಇಲ್ಲವೇ ಇಷ್ಟೆಲ್ಲಾ ಗಲಾಟೆ, ಹಿಂಸೆ ನೀಡಿದ ಬಳಿಕ ಆತನಿಂದ ದೂರ ಉಳಿಯುತ್ತಿದ್ದರೆ ಬಹುಶ ಶ್ರದ್ದಾ ಬದುಕುಳಿಯುತಿದ್ದಳೋ ಏನೋ…
Related Articles
ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಮುಂದೆ ಶ್ರದ್ಧಾಳನ್ನು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯವು ಅಫ್ತಾಬ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೆ 4 ದಿನಗಳವರೆಗೆ ವಿಸ್ತರಿಸಿದೆ.
ಇದನ್ನೂ ಓದಿ : ಪೈಲಟ್ ಗೆ ಸಿಎಂ ಸ್ಥಾನ ಕೊಡಿ…ಇಲ್ಲದಿದ್ದಲ್ಲಿ…ರಾಹುಲ್ ಗೆ ಗುರ್ಜಾರ್ ಮುಖಂಡನ ಎಚ್ಚರಿಕೆ!