Advertisement

2 ವರ್ಷದ ಸಾಹಿತ್ಯ ನೊಬೆಲ್‌ ಪ್ರಕಟ

10:28 AM Oct 12, 2019 | Team Udayavani |

ಸ್ಟಾಕ್‌ಹೋಮ್‌: ಸಾಹಿತ್ಯ ಕ್ಷೇತ್ರಕ್ಕಾಗಿ 2019ನೇ ಸಾಲಿನ ನೊಬೆಲ್‌ ಪ್ರಶಸ್ತಿಯನ್ನು ಆಸ್ಟ್ರಿಯಾ ಕಾದಂಬರಿಕಾರ, ನಾಟಕಕಾರ ಪೀಟರ್‌ ಹಾಂಡೆRಗೆ ನೀಡಲಾಗಿದೆ. ಇದರ ಜತೆಗೆ 2018ನೇ ಸಾಲಿನ ಸಾಹಿತ್ಯ ನೊಬೆಲ್‌ ಅನ್ನು ಪೋಲೆಂಡ್‌ ಲೇಖಕಿ ಓಲ್ಗಾ ತೊಕಾ ರ್ಚುಕ್‌ಗೆ ನೀಡಲಾಗಿದೆ.

Advertisement

ಕಳೆದ ಬಾರಿ ಪ್ರಶಸ್ತಿ ಪ್ರಕಟಿಸುವ ಸಂದರ್ಭಕ್ಕೆ ಮುಂಚಿತವಾಗಿ ಆಯ್ಕೆ ಮಂಡಳಿ ಸದಸ್ಯರಾಗಿದ್ದ ಕಟಾರಿನಾ ಫೊÅಸ್ಟೆನ್ಸನ್‌ ಪತಿ ಜೀನ್‌ ಕ್ಲಾಡ್‌ ಅರ್ನಾಲ್ಟ್ ಪ್ರಶಸ್ತಿ ವಿಜೇತರ ವಿವರ ಬಹಿರಂಗ ಮಾಡಿದ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಶಸ್ತಿ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಗುರುವಾರ ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿ ಎರಡು ವರ್ಷಗಳ ವಿಜೇತರನ್ನು ಒಟ್ಟಿಗೇ ಪ್ರಕಟಿಸಿದೆ.

ಪೋಲೆಂಡ್‌ ಲೇಖಕಿ ತೊಕಾರ್ಚುಕ್‌ ಅವರು ಜೀವನದಾಚೆ ಇರುವ ಹಲವು ವಿಚಾರಗಳ ಬಗ್ಗೆ ವಿಶ್ವಕೋಶದಂತೆ ಅತ್ಯಂತ ಆಕರ್ಷಕವಾಗಿ ಬರೆಯುತ್ತಾರೆ. ಬಹು ವಿಚಾ ರಗಳ ಬಗ್ಗೆ ಪ್ರಸ್ತಾವ ಮಾಡುವ ಅವರ ಬರವಣಿಗೆ ಶೈಲಿ ನಿಖರವಾಗಿ ಮತ್ತು ಕಾವ್ಯಾತ್ಮಕವಾಗಿದೆ ಎಂದು ನೊಬೆಲ್‌ ಸಮಿತಿ ಅಭಿಪ್ರಾಯ ಪಟ್ಟಿದೆ. 1901ರಿಂದ ಇದುವರೆಗೆ 116 ಮಂದಿಗೆ ಸಾಹಿತ್ಯ ನೊಬೆಲ್‌ ನೀಡಲಾಗಿದ್ದು, ಈ ಪೈಕಿ ತೊಕಾ ರ್ಚುಕ್‌ 15ನೇ ಮಹಿಳೆಯಾಗಿ ದ್ದಾರೆ. 2019ನೇ ಸಾಲಿನ ಗೌರ ವಕ್ಕೆ ಪಾತ್ರರಾಗಿ ರುವ ಆಸ್ಟ್ರಿಯಾದ ಹಾಂಡೆR ಎರಡನೇ ವಿಶ್ವ ಮಹಾ ಯುದ್ಧದ ಬಳಿಕ ಐರೋಪ್ಯ ಒಕ್ಕೂಟದಲ್ಲಿ ಪ್ರಭಾವಶಾಲಿ ಲೇಖಕರಾಗಿ ಹೊರ ಹೊಮ್ಮಿ ದರು. ಮಾನವರ ಅನುಭವಕ್ಕೆ ಸರಿಸಾಟಿಯಾಗಿ ಭಾಷೆಯನ್ನು ಜಾಣ್ಮೆಯಲ್ಲಿ ಬಳಕೆ ಮಾಡಿದ ಹೆಗ್ಗಳಿಕೆ ಅವರಿಗೆ ಇದೆ ಎಂದು ಸಮಿತಿ ಹೇಳಿದೆ. ಇಬ್ಬರು ಗಣ್ಯರಿಗೂ ಪ್ರತ್ಯೇಕವಾಗಿ 6.48 ಕೋಟಿ ರೂ. ಮೊತ್ತ (9, 12,000 ಅಮೆರಿಕನ್‌ ಡಾಲರ್‌) ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next